ಮುಲ್ಕಿ : ಜೈ ತುಳುನಾಡ್ ಸಂಘಟನೆಯ ಮಹಾಸಭೆ ಮತ್ತು ಪದಗ್ರಹಣ ಸಮಾರಂಭ ಮುಲ್ಕಿ ಪುನರೂರು ಟೂರಿಸ್ಟ್ ಹೋಂ ಸಭಾಂಗಣದಲ್ಲಿ ನಡೆಯಿತು.

ಈ ಸಂಧರ್ಭ 2023-24ನೇ ಸಾಲಿನ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಕಿರಣ್ ತುಲುವೆ ವಾಚಿಸಿದರು. ನಂತರ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು. ಈ ಸಂಧರ್ಭ 2023-24ನೇ ಸಾಲಿನ ಅಧ್ಯಕ್ಷ ವಿಶು ಶ್ರೀಕೇರ ಮತ್ತು ಪದಾಧಿಕಾರಿಗಳು , ಸ್ಥಾಪಕ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹೊಸ ಅಧ್ಯಕ್ಷರಾಗಿ ಉದಯ್ ಪೂಂಜ ತಾಳಿಪಾಡಿ ಗುತ್ತು ಇವರನ್ನು ಆಯ್ಕೆ ಮಾಡಿದರು. ಉಪಾಧ್ಯಕ್ಷರಾಗಿ ಹರಿಶ್ಚಂದ್ರ ಗೋಪಾಲ ಕುಂದರ್ ಕರ್ನಿರೆ, ಇನ್ನೊಂದು ಉಪಾಧ್ಯಕ್ಷರಾಗಿ ವಿನೋದ ಪ್ರಸಾದ್ ರೈ ಕಾಸರಗೋಡು, ಪ್ರಧಾನ ಕಾರ್ಯದರ್ಶಿ ಆಗಿ ಪೂರ್ಣಿಮಾ ಬಂಟ್ವಾಳ, ಜೊತೆ ಕಾರ್ಯದರ್ಶಿ ಆಗಿ ಪೃಥ್ವಿ ತುಲುವೆ, ಜೊತೆ ಕಾರ್ಯದರ್ಶಿ ಆಗಿ ಪ್ರಜ್ಞಾಶ್ರೀ ಎಂ ಕೊಡವೂರು, ಕೋಶಧಿಕಾರಿಯಾಗಿ ರಾಜಶ್ರೀ ಚಂದ್ರಶೇಖರ್ ತಲಪಾಡಿ, ಜೊತೆ ಕೋಶಧಿಕಾರಿಯಾಗಿ ನಿಶಿಲ್ ಶೆಟ್ಟಿ ಬೇಲಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ಎನ್ ಎಸ್ ಕಟಪಾಡಿ, ಜೊತೆ ಸಂಘಟನಾ ಕಾರ್ಯದರ್ಶಿಯಾಗಿ ಚಿತ್ರಾಕ್ಷಿ ಮುಗೇರ ತೆಗ್ಗು, ತುಳು ಲಿಪಿ ಸಮಿತಿ ಯ ಮೇಲ್ವಿಚಾರಕರಾಗಿ ಜಗದೀಶ ಗೌಡ ಕಲ್ಕಳ ಮತ್ತು ಚಿರಶ್ರೀ, ಪ್ರಚಾರ ಸಮಿತಿ ಮೇಲ್ವಿಚಾರಕರಾಗಿ ದಿವ್ಯ ಅಂಚನ್ ಪಕ್ಷಿಕೆರೆ ಆಯ್ಕೆ ಆದರು. ಈ ಸಂಧರ್ಭ
ಬೇರೆ ಬೇರೆ ಘಟಕದ ಅಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.



