ಉಡುಪಿ: ಮಣಿಪಾಲ ಎಂಐಟಿಯ ಉದ್ಯೋಗಿ, ಪರ್ಕಳದ ನಿವಾಸಿ ಸಂಶೋಧಕ ಆರ್.ಮನೋಹರ್ ತನ್ನದೇ ಸೂತ್ರ ಬಳಸಿ ಏಕಕಾಲಕ್ಕೆ ಎರಡು ಕಣ್ಣುಗಳಲ್ಲಿ ನೇರವಾಗಿ ನೋಡುವ ರೀತಿಯಲ್ಲಿ ಆವಿಷ್ಕರಿಸಿರುವ ದೂರದರ್ಶಕ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗುವ ಪ್ರಯತ್ನದಲ್ಲಿದೆ. ದಾಖಲೆಗಾಗಿ ಮನೋಹರ್ ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ಇವರು ಈಗಾಗಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೇಟೆಂಟ್ ಪಡೆದು ಒಂದು ಕಣ್ಣಿನಲ್ಲಿ ನೇರವಾಗಿ ನೋಡುವ ದೂರದರ್ಶಕವನ್ನು ಆವಿಷ್ಕರಿಸುವ ಮೂಲಕ ಜಗತ್ತಿನ 9 ಮಂದಿಯಲ್ಲಿ ಒಬ್ಬರಾಗಿದ್ದಾರೆ. ಇದೀಗ ಮತ್ತೊಮ್ಮೆ ಆವಿಷ್ಕರಿಸಿ ಎರಡು ಕಣ್ಣಿನಲ್ಲಿ ಏಕಕಾಲಕ್ಕೆ ನೋಡುವಂತಹ ದೂರದರ್ಶಕವನ್ನು ಅವರು ಆವಿಷ್ಕರಿಸಿದ್ದಾರೆ. ಸದ್ಯದಲ್ಲಿ ಗಿನ್ನಿಸ್ ದಾಖಲೆ ತಂಡ ಪರ್ಕಳಕ್ಕೆ ಭೇಟಿ ನೀಡಲಿದೆ.
ಈ ದೂರದರ್ಶಕವು ಸುಮಾರು 80 ಎಕ್ಸ್ ದೂರದ ವಸ್ತು ಕಾಣುವ ತಂತ್ರಜ್ಞಾನ ಹೊಂದಿದ್ದು, ಈ ದೂರದರ್ಶಕದಲ್ಲಿ ಚಂದ್ರ ಮನಮೋಹಕನಾಗಿ ಕಾಣುತ್ತದೆ. ಈ ನವೀಕರಿಸಲ್ಪಟ್ಟ ದೂರದರ್ಶಕ ಎಚ್‌ಡಿ ಕ್ವಾಲಿಟಿಯನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಸಿಗುವಂತಹ ದೂರದರ್ಶಕದಲ್ಲಿ ಬಾಗಿ ಒಂದು ಕಣ್ಣಿನಲ್ಲಿ ನೋಡಬೇಕಾದರೆ, ಈ ಹೊಸ ಆವಿಷ್ಕಾರದ ದೂರದರ್ಶಕದಲ್ಲಿ ಆ ಕಷ್ಟ ಇರುವುದಿಲ್ಲ. ಇಲ್ಲಿ ಬಾಗಿ ನೋಡುವ ಬದಲು ನೇರವಾಗಿ ನಿಂತು ನೋಡ ಬಹುದಾಗಿದೆ. ಅದಕ್ಕಾಗಿ ಬೆಳಕಿನ ಪರಿವರ್ತನೆ ಮಾಡಿ ದೂರದರ್ಶಕವನ್ನು ನಿರ್ಮಿಸಿ ಪೇಟೆಂಟು ಪಡೆಯಲಾಗಿದೆ ಎಂದು ಮನೋಹರ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪಡಿತರ ವಿತರಣೆಗೆ ಸಂಬಂಧಿಸಿದ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದು…
ಯಾವುದೇ ಮುನ್ಸೂಚನೆ ನೀಡದೆ ಕೆಲಸದಿಂದ ವಜಾಗೊಳಿಸಿರುವುದನ್ನು ವಿರೋಧಿಸಿ ಎಚ್‌ಪಿಸಿಎಲ್‌ನ ಮಹಿಳಾ ಗುತ್ತಿಗೆ ಕಾರ್ಮಿಕರು ಕಳೆದ ಒಂದು ತಿಂಗಳು ಏಳು ದಿನಗಳಿಂದ…
ಕರ್ತವ್ಯನಿರತ ಟಿಟಿಇಯ ಸಮಯಪ್ರಜ್ಞೆ ಹಾಗೂ ಎಚ್ಚರಿಕೆಯಿಂದ ರೈಲು ಪ್ರಯಾಣಿಕರೊಬ್ಬರ ಕಾಣೆಯಾಗಿದ್ದ ಲ್ಯಾಪ್‌ಟಾಪ್ ಬ್ಯಾಗ್ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ…
ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿ ಕಾಮಗಾರಿಗಳಿಗೆ ವೇಗ ದೊರಕಿದ್ದು, ಮುಂದಿನ 15 ವರ್ಷಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು…
ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ಮೂರುವರೆ ವರ್ಷ ಕಳೆದರೂ ಬಡವರಿಗೆ ಮನೆ, ನಿವೇಶನ ಕಲ್ಪಿಸಿಲ್ಲ. ಬೆಳೆ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಸೇರಿದಂತೆ ವಿವಿಧ ಬೆಳೆಗಳಿಗೆ ಹವಾಮಾನ ಆಧರಿತ ಬೆಳೆ ವಿಮೆ ಪರಿಹಾರ ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆಯಾಗಿರುವ…