ಮುಲ್ಕಿ: ಯುವ ವಾಹಿನಿ ಮುಲ್ಕಿ ಘಟಕದ 2024 25 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಮುಲ್ಕಿ ಘಟಕದ ಅಧ್ಯಕ್ಷ ಮಾಧವ ಪೂಜಾರಿ ವಹಿಸಿದ್ದರು
ಮುಲ್ಕಿ ಯುವ ವಾಹಿನಿ ಘಟಕದ 2024- 25ರ ನೂತನ ಅಧ್ಯಕ್ಷರಾಗಿ ರಿತೇಶ್ ಅಂಚನ್ ಚಿತ್ರಾಪು ಹಾಗೂ ತಂಡಕ್ಕೆ ಪ್ರಮಾಣವಚನ ಬೋಧಿಸಿ ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಮಾತನಾಡಿ ಸೇವಾ ಸಂಸ್ಥೆಗಳು ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಅಭಿನಂದನೀಯ ಎಂದರು ಮುಖ್ಯ ಅತಿಥಿಗಳಾಗಿ ಹೊಸ ಅಂಗಣ ಮಾಸಪತ್ರಿಕೆಯ ಸಂಪಾದಕ ಡಾ. ಹರೀಶ್ಚಂದ್ರ ಪಿ ಸಾಲ್ಯಾನ್, ಬಿರ್ವೆರ್ ಕುಡ್ಲ ಮುಲ್ಕಿ ಘಟಕದ ಅಧ್ಯಕ್ಷ ಕಿಶೋರ್ ಜೆ ಸಾಲ್ಯಾನ್, ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಪಾಲನ್, ಯುವವಾಹಿನಿ ಘಟಕದ ಕಾರ್ಯದರ್ಶಿ ವಿನಯ ವಿಶ್ವನಾಥ್, ಸತೀಶ್ ಕಿಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.ಉದಯ ಅಮೀನ್ ಮಟ್ಟು ನಿರೂಪಿಸಿದರು ಹಾಗೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಹಸ್ತ ಹಾಗೂ ಆರ್ಯಭಟ ಪ್ರಶಸ್ತಿ ವಿಜೇತ ಡಾ. ಹರೀಶ್ಚಂದ್ರ ಪಿ ಸಾಲ್ಯಾನ್ ರವರನ್ನು ಗೌರವಿಸಲಾಯಿತು ಕಾರ್ಯಕ್ರಮ ನಡೆಯಿತು.



