ಜನ ಮನದ ನಾಡಿ ಮಿಡಿತ

Advertisement

ಕರಾಡ ಬ್ರಾಹ್ಮಣರ ಯಶಸ್ವಿ ಉತ್ತರ ಭಾರತ ಯಾತ್ರೆ; ಸಮಾರೋಪ…

ದಕ್ಷಿಣ ಕನ್ನಡ : ಕರಾಡ ಬ್ರಾಹ್ಮಣ ಸುಧಾರಕ ಸಂಘ ಗುಂಡ್ಯಡ್ಕ,ಮೂಡಬಿದಿರೆ ಹಾಗೂ ಆತ್ಮನಿರ್ಬರ ಟೂರ್ಸ್ ಮಾರ್ಗದರ್ಶನದಲ್ಲಿ ವೇದಮೂರ್ತಿ ಗಿರಿಧರ ಭಟ್ ಇವರ ಉಸ್ತುವಾರಿಯಲ್ಲಿ, ರಾಮಚಂದ್ರ ಪಂಡಿತ್ ಮತ್ತು ಸುನಿಲ್ ಗರ್ದೆ, ಶ್ರೀಕಾಂತ ರಾವ್ ಕಾರ್ಕಳ ಇವರ ಸಹಕಾರದೊಂದಿಗೆ ಸಾಗುತ್ತಿರುವ ಕರಾಡರ ಉತ್ತರ ಭಾರತ ಯಾತ್ರೆಯು ಒಟ್ಟು 15 ದಿನಗಳ ಕಾಲ ಉತ್ತರ ಭಾರತದ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವನ್ನು ಸಂದರ್ಶಿಸಿ, ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಸಿ ಮಂಗಳೂರು ಕಡೆ ಪ್ರಯಾಣ ಬೆಳೆಸಿತು.
ದಿನಾಂಕ 6.6.2024 ರಂದು ಮುಂಜಾನೆ ಮಂಗಳೂರಿನ ರೈಲು ಪ್ರಯಾಣದ ಮುಖಾಂತರ ಹೊರಟ ಸುಮಾರು 100 ಮಂದಿಯ ತಂಡ ಪ್ರಯಾಗರಾಜ ತಲುಪಿ ಅಲ್ಲಿ ವಿವಿಧ ತೀರ್ಥಕ್ಷೇತ್ರಗಳ ಸಂದರ್ಶನ ನಡೆಸಿ, ನಂತರ ಅಯೋಧ್ಯ ಶ್ರೀ ರಾಮನ ದರ್ಶನ ದರ್ಶನ ಪೂರೈಸಿ, ಬಳಿಕ ಕಾಶಿ ತಲುಪಿದ್ದು, ಅಲ್ಲಿ ಗಂಗಾ ಆರತಿ ವೀಕ್ಷಣೆ ಕಾಶಿ ವಿಶ್ವನಾಥ ದರ್ಶನ ಮಾಡಿ ಆ ಬಳಿಕ ನಳಂದ, ಗಯಾ,ಜಾರ್ಖಂಡ್, ಅಲ್ಲಿಂದ ದೆಹಲಿ ತಲುಪಿ ಇದೀಗ ಮಂಗಳೂರು ಕಡೆಗೆ ಪ್ರಯಾಣ ಬೆಳೆಸಿದೆ ಜೂನ್ 20ರ ಮಧ್ಯಾಹ್ನದ ವೇಳೆಗೆ ಮಂಗಳೂರಿಗೆ ತಲುಪಲಿದೆ.
ಹಿರಿಯ ನಾಗರಿಕರು ಸೇರಿದಂತೆ 100 ಮಂದಿ ಕರಾಡ ಬ್ರಾಹ್ಮಣ ಸಮಾಜ ಬಾಂಧವರು, ಈ ಯಾತ್ರೆಯಲ್ಲಿ ಪಾಲ್ಗೊಂಡು ಕಾಶಿ ಯಾತ್ರೆ ಸೇರಿದಂತೆ ಮನದ ಇಚ್ಛೆಯನ್ನ ಪೂರೈಸಿಕೊಂಡರು.


ಎಂಟು ಮಂದಿ ಬಾಣಸಿಗರಿಂದ ಶುದ್ಧ ಮಂಗಳೂರು ಶೈಲಿಯ ಸಸ್ಯಾಹಾರ ಉಪಚಾರ, ನುರಿತ ತಂಡದಿಂದ ಮಾರ್ಗದರ್ಶನ ಮತ್ತು ವಿವರಣೆ, ಹವಾ ನಿಯಂತ್ರಿತ ಬಸ್ಸು ಮತ್ತು ವಸತಿ ವ್ಯವಸ್ಥೆ, ಹಾಗೂ ಹವಾ ನಿಯಂತ್ರಿತ ರೈಲು ಸಂಚಾರ ಎಲ್ಲವೂ ಅಚ್ಚುಕಟ್ಟಾಗಿತ್ತು ಎಂಬುದು ಯಾತ್ರಾರ್ತಿಗಳ ಅಭಿಪ್ರಾಯವಾಗಿತ್ತು, ನೂರು ಯಾತ್ರಾರ್ತಿಗಳಲ್ಲಿ ಹೆಚ್ಚಿನ ಸಂಖ್ಯೆಯ ಯಾತಾರ್ತಿಗಳು ಹಿರಿಯ ನಾಗರಿಕರಾಗಿದ್ದು , ಸಣ್ಣಪುಟ್ಟ ಆರೋಗ್ಯ ಸಮಸ್ಯೆಯನ್ನು ಹೊರತುಪಡಿಸಿ ಯಾರಿಗೂ ಆರೋಗ್ಯ ಸಮಸ್ಯೆಯಾಗಿಲ್ಲ.
ಯಾತ್ರೆಯ ಉಸ್ತುವಾರಿ ಗಿರಿಧರ ಭಟ್ಟರು ಮಾತನಾಡಿ ಕರಾಡ ಸಮಾಜದ ಹಿರಿಯ ನಾಗರಿಕರನ್ನು ಕಾಶಿ, ಗಯಾ, ಪ್ರಯಾಗ ಸೇರಿದಂತೆ ಉತ್ತರ ಭಾರತದ ತೀರ್ಥಕ್ಷೇತ್ರಗಳ ಸಂದರ್ಶನ ಸಂತೋಷ ತಂದಿದೆ ಎಂದಿದ್ದಾರೆ.
ಯಾತ್ರೆಯ ಸಹ ಉಸ್ತುವಾರಿ ರಾಮಚಂದ್ರ ಪಂಡಿತ್ ಮಾತನಾಡಿ ಯಾತ್ರಾರ್ತಿಗಳಲ್ಲಿ ಹೆಚ್ಚಿನವರೆಲ್ಲರೂ ಹಿರಿಯ ನಾಗರಿಕರಾಗಿದ್ದು, ನಿಭಾಯಿಸುವ ಬಗ್ಗೆ ಒಂದು ಸಣ್ಣ ಅಳುಕಿತ್ತು, ಮತ್ತು ಈ ಯೋಜನೆ ಕೈಗೆತ್ತಿಕೊಂಡ ಬಗ್ಗೆ ಸಂತೋಷವೂ ಇತ್ತು, ಈಗ ಯಾತ್ರೆಯನ್ನ ಪೂರೈಸಿದ್ದೇವೆ.


ಈಗ ನಮ್ಮ ಜೊತೆ ಬಂದ ಯಾತ್ರಾರ್ತಿಗಳಿಗೂ ಸಂತೋಷವಾಗಿದೆ, ಸಂಘಟಕರಾದ ನಮಗೂ ಸಂತೋಷವಾಗಿದೆ ಎಂದಿದ್ದಾರೆ
ಒಟ್ಟಾರೆಯಾಗಿ ಯಾತ್ರೆಯು ಸಂಪೂರ್ಣ ಯಶಸ್ವಿಯಾಗಿದ್ದು, ಯಾತ್ರಾರ್ತಿಗಳ ಮನಸ್ಸಿನಲ್ಲಿ ಸಂತೋಷ ಮೂಡಿಸಿದೆ ಎಂದು ಹಲವು ಯಾತ್ರಾರ್ತಿಗಳು ತಮ್ಮ ಮನಸ್ಸಿಗೆಗಳನ್ನ ಹಂಚಿಕೊಂಡಿದ್ದಾರೆ.
ಯಾತ್ರೆಯಲ್ಲಿ ತೂಗು ಸೇತುವೆ ಸರದಾರ ಪದ್ಮಶ್ರೀ ಡಾಕ್ಟರ್ ಗಿರೀಶ್ ಭಾರದ್ವಾಜ್, ಸೇತುವೆ ಸರದಾರ ಕರುಣಾಕರ ಗೋಗಟೆ, ಡಾಕ್ಟರ್ ಗಜಾನನ ಭಟ್, ಪತ್ರಕರ್ತ ಡಾಕ್ಟರ್ ಮಂದಾರ ರಾಜೇಶ್ ಭಟ್, ಸಹಿತ ಒಟ್ಟು ನೂರು ಮಂದಿ ಯಾತ್ರಾರ್ತಿಗಳು ಯಾತ್ರೆ ಕೈಗೊಂಡರು.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!