ಸುಬ್ರಮಣ್ಯ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದಾರೆ. ದೇವಳಕ್ಕೆ ಆಗಮಿಸಿದ ಬಿಎಸ್ ವೈ ಮಹಾಭಿಷೇಕ ಹಾಗು ತುಲಾಭಾರ ಸೇವೆ ಮಾಡಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಯಡಿಯೂರಪ್ಪ ಅವರನ್ನ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸ್ವಾಗತಿಸಿದ್ದಾರೆ. ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ 2 ಗಂಟೆಗೆ ಸುಳ್ಯಕ್ಕೆ ತೆರಳಲಿದ್ದಾರೆ. ಸುಳ್ಯದಲ್ಲಿ ಅವರು ಪಕ್ಷದ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸುಳ್ಯದ ಕಾರ್ಯಕ್ರಮ ಮುಗಿಸಿ 3 ಗಂಟೆಗೆ ಗುಂಡ್ಯ, ಹಾಸನ ಮಾರ್ಗವಾಗಿ ಬೆಂಗಳೂರಿಗೆ ತೆರಳುವರು ಎಂದು ತಿಳಿಸಲಾಗಿದೆ.







