ಉಡುಪಿ: ಜನ್ಸಾಲೆಯ 13 ವರ್ಷದ ಚಿಕ್ಕ ಬಾಲಕನ ಹಲ್ಲೆ ನಡೆಸಿದ ಆರೋಪಿಯನ್ನು ಶೀಘ್ರವೇ ಬಂಧಿಸುವಂತೆ ಒತ್ತಾಯಿಸಿ ವಿಶ್ವಕರ್ಮ ಸಮಾಜ ಸೇವಾ ಸಂಘಟನೆಯ ನೇತೃತ್ವದಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಲಾಯಿತು.

ಜನ್ಸಾಲೆ ಹೆಗ್ಗೇರಿಯ ಶಾಂತಾರಾಮ ಶೆಟ್ಟಿ ನಾರುಮಕ್ಕಿ ಎಂಬಾತ ಪ್ರಥ್ವಿ ಎನ್ನುವ ಬಾಲಕ ಮೇಲೆ ವಿನಾಕಾರಣ ಹಲ್ಲೆ ಮಾಡಿದ್ದ, ಈ ಕುರಿತು ಬಾಲಕನ ಪೋಷಕರು ಈ ಹಿಂದೆ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಾಗಿ ವಾರ ಕಳೆದರು ಇದುವರೆಗೂ ಯಾವುದೇ ಪೊಲೀಸ್ ತನಿಖೆ ನಡೆಸದ ಹಿನ್ನಲೆಯಲ್ಲಿ ಇಂದು ಸಂಘಟನೆಯ ವತಿಯಿಂದ, ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ದೂರು ನೀಡಲಾಯಿತು. ಈ ಕುರಿತು ಠಾಣಾ ಸಬ್ ಇನ್ಸ್ಪೆಕ್ಟರ್ ನಾಸೀರ್ ಹುಸೇನ್ ಮಾತನಾಡಿ, ಆರೋಪಿಯ ಪತ್ತೆಗೆ ಶ್ರಮಿಸುತ್ತಿದ್ದು ಆತ ಮೊಬೈಲ್ ನ್ನು ಮನೆಯಲ್ಲೇ ಇಟ್ಟು ತಪ್ಪಿಸಿಕೊಂಡಿದ್ದಾನೆ. ಪತ್ತೆಗೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದರು.



