ಬಂಟ್ವಾಳ: ಬೆಂಗಳೂರು ಭಾಗದಿಂದ ಆಗಮಿಸುವ ಕಂಟೈನರ್ ಲಾರಿಯೊಂದು, ಉಪ್ಪಿನಂಗಡಿ ಯಿಂದ ಸರಪಾಡಿ ಮಣಿಹಳ್ಳ ರಸ್ತೆ ಯಲ್ಲಿ ಆಗಮಿಸಿ, ಅಲ್ಲಿಪಾದೆ ಸಮೀಪದ ಅಣೇಜ ತಿರುವಿನಲ್ಲಿ ಸಿಲುಕಿಹಾಕಿಕೊಂಡ ಘಟನೆ ನಡೆದಿದೆ.
ಬಿಜಾಪುರ ಮೂಲದ ಲಾರಿಯು ಬೆಂಗಳೂರು ಮಂಗಳೂರು ಹೆದ್ದಾರಿಯಲ್ಲಿ ಆಗಮಿಸಿ,ಉಪ್ಪಿನಂಗಡಿಯಲ್ಲಿ ಮಂಗಳೂರು ತೆರಳಲು ಚಾಲಕ ಗೂಗಲ್ ಮೇಪ್ ಹಾಕಿದ ಸಂದರ್ಭ ಆತನಿಗೆ ಉಪ್ಪಿನಂಗಡಿ ಅಜಿಲಮೊಗರು ಮಣಿಹಳ್ಳ ರಸ್ತೆಯ ಮೂಲಕ ಸಾಗಿ,ಮಂಗಳೂರಿಗೆ ತೆರಳುಲು ಸೂಚಿಸಿದೆ.
ಪ್ರಸ್ತುತ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಗೂಗಲ್ ಮೇಪ್ ಈ ರಸ್ತೆಯನ್ನು ಸೂಚಿಸುತ್ತಿದೆ.ಆದರೆ ಈ ರಸ್ತೆಯು ಘನವಾಹನ ಸಾಗಾಟಕ್ಕೆ ಸೂಕ್ತವಾಗಿಲ್ಲ. ಅಣೇಜದಲ್ಲಿ ಅಪಾಯಕಾರಿ ತಿರುವು ಇರುವುದರಿಂದ ಒಂದೇ ಬಾರಿಗೆ ವಾಹನ ತಿರುವು ಪಡೆದು ಕೊಳ್ಳುವುದಿಲ್ಲ.ಎರಡು ಮೂರು ಬಾರಿ ಹಿಂದೆ ಮುಂದೆ ಚಲಿಸಿ ತಿರುಗಿಸಬೇಕಿದೆ.ಪ್ರಸ್ತುತ ಈ ಲಾರಿಯು ಮುಂದೆ ಹೋಗಿದ್ದು,ಆದರೆ ಹಿಂದೆ ಬರಲು ಸಾಧ್ಯವಾಗಿಲ್ಲ. ಈಗಾಗಿ ಸರಪಾಡಿ ಬಿಸಿರೋಡು ಸಂಚರಿಸುವ ಬಸ್ ಗಳು ಪರ್ಯಾಯ ರಸ್ತೆಯಲ್ಲಿ ಸಂಚರಿಸಿದ್ದು, ಈಗಾಗಿ ಸರಪಾಡಿ ಮಣಿನಾಲ್ಕೂರು ಗ್ರಾಮದ ಗ್ರಾಮಸ್ಥರು ತೊಂದರೆ ಅನುಭವಿಸಬೇಕಾಯಿತು
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…