ಕಡಬ ತಾಲೂಕಿನ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮಗಳು ಕುಗ್ರಾಮಗಳು ಎಂದು ಹೆಸರಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯಗಳ ಹೊರತಾಗಿಯೂ ಕೆಲವೆಡೆ ಜ್ವಲಂತ ಸಮಸ್ಯೆಗಳು ಇನ್ನೂ ಕಾಡುತ್ತಿವೆ.
ಮಳೆನಾಡಿನ ತಪ್ಪಲಿನಲ್ಲಿರುವ ಕೊಂಬಾರು ಶಿರಿಬಾಗಿಲು ಗ್ರಾಮಗಳು ಬಹುತೇಕ ಅರಣ್ಯ ಪ್ರದೇಶದಿಂದ ಕೂಡಿದ್ದು, ತೀರಾ ಗ್ರಾಮೀಣ ಭಾಗಕ್ಕೆ ಇನ್ನೂ ಸಂಪರ್ಕ ವ್ಯವಸ್ಥೆ ಇಲ್ಲ. ಕೆಲವು ಪ್ರದೇಶಗಳಲ್ಲಿ ಮಳೆಗಾಲ ಪ್ರಾರಂಭವಾದರೆ ಇಲ್ಲಿನ ತೋಡು ಹೊಳೆಗಳು ತುಂಬಿ ಹರಿದು ಅದರಾಚೆಗಿನ ಪ್ರದೇಶಗಳು ದ್ವಿಪವಾಗಿ ಬಿಡುತ್ತವೆ. ರಸ್ತೆ ಸಂಚಾರ ಸ್ಥಗಿತವಾಗುತ್ತದೆ, ಬೇರೆ ದಾರಿ ಇಲ್ಲದ ಜನ ತೋಡುಗಳಿಗೆ ತಾತ್ಕಾಲಿಕ ಪಾಲಗಳನ್ನು ನಿರ್ಮಿಸಿಕೊಡು ಸಂಚರಿಸುತ್ತಾರೆ. ಇದೀಗ ಕೊಂಬಾರು ಗ್ರಾಮದ ಅಲ್ವೆ-ಕಟ್ಟೆ ಹೊಳೆಗೆ ಬಿರ್ಮೆರೆಗುಂಡಿ ಎಂಬಲ್ಲಿ ಜನ ತೋಡು ದಾಟಲು ಅಡಕೆ ಮರದ ಪಾಲ ನಿರ್ಮಾಣ ಮಾಡಿಕೊಂಡು ತಮ್ಮ ಗೂಡಿಗೆ ಸೇರುತ್ತಾರೆ.
ಮಣಿಬಾಂಡ-ಕಟ್ಟೆ ಕಚ್ಚಾ ರಸ್ತೆಯಲ್ಲಿ ಒಂದುವರೆ ಕಿಲೋ ಮೀಟರ್ ಸಾಗಿದರೆ ಬಿರ್ಮೆರೆಗುಂಡಿ ಸಿಗುತ್ತದೆ. ಹೆಸರೇ ಸೂಚಿಸುವಂತೆ ಇಲ್ಲಿ ಬಾರೀ ಗುಂಡಿ ಇದೆ, ಇದರ ಮೇಲೆ ಇಲ್ಲಿನ ನಿವಾಸಿಗಳು ಸೇರಿಕೊಂಡು ಅಡಕೆ ಮರದ ಪಾಲವನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಿಕೊಳ್ಳುತ್ತಾರೆ. ಜೂನ್ ತಿಂಗಳಿಂದ ಡಿಸೆಂಬರ್ ತನಕ ಕಟ್ಟೆ ಪ್ರದೇಶದ ಹತ್ತು ಮನೆಗಳಿಗೆ ಇದೇ ಪಾಲದ ಆಸರೆ. ಇದು ಇಲ್ಲಿನ ಜನಗಳಿಗೆ ಸಾಮಾನ್ಯವಾಗಿದ್ದರೂ ಪಾಲದ ಮೇಲೆ ಸರ್ಕಸ್ ಮಾಡಿಕೊಂಡು ಹೋಗುವುದು ಅಪಾಯಕಾರಿಯಾಗಿದೆ. ಹತ್ತಾರು ವಿದ್ಯಾರ್ಥಿಗಳು ಈ ಪಾಲದಲ್ಲೇ ದಿನಂಪ್ರತಿ ದಾಟಿ ಶಾಲೆಗೆ ಹೋಗುತ್ತಾರೆ. ಇನ್ನೂ ಅನಾರೋಗ್ಯ ಪೀಡಿತರನ್ನು ಇದೇ ಪಾಲದಲ್ಲಿ ಹೊತ್ತುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ, ಇಲ್ಲಿ ವೃದ್ಧ ಮಹಿಳೆಯೊಬ್ಬರನ್ನು ವಾರಕ್ಕೆ ಒಂದು ಬಾರಿ ವೈದ್ಯರ ಬಳಿಗೆ ಚೆಕ್ ಅಪ್ ಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಮೂರು ದಿನಗಳ ಹಿಂದೆ ಅದೇ ವೃದ್ಧೆಯನ್ನು ಕೈಗಾಡಿಯಲ್ಲಿ ಕುಳ್ಳಿರಿಸಿಕೊಂಡು ಬಂದು ಅವರ ಮಗ ಪಾಲದಲ್ಲಿ ಹೆಗಲೇ ಮೇಲೆ ಹೊತ್ತುಕೊಂಡು ಹೋಗಿದ್ದರು. ಕಟ್ಟೆ ಪ್ರದೇಶದ ಜನ ವರ್ಷದಲ್ಲಿ ಆರು ತಿಂಗಳು ನರಕಯಾತನೆ ಅನುಭವಿಸಬೆಕಾಗುತ್ತದೆ. ಇವರಿಗೆ ರ‍್ಯಾಯ ದಾರಿ ಇದ್ದರೂ ಅದು ನಾಲ್ಕೈದು ಕಿಲೋ ಮೀಟರ್ ದೂರದ ದುರ್ಗಮ ದಾರಿ, ಕಾಡಿನ ಮಧ್ಯೆ ಆನೆಗಳ ಹಾವಳಿ ಬೇರೆ ಇದೆ. ಅದಕ್ಕಾಗಿ ಇಲ್ಲಿ ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಅಹವಾಲು ಸಲ್ಲಿಸಲಾಗುತ್ತಿದೆ. ಹತ್ತು ಹಲವು ವರ್ಷಗಳಿಂದ ಈ ಭಾ ಗದ ಜನರು ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಅದರೆ ಈವರಗೆ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ನಿವಾಸಿ ಮಂಜುನಾಥ್ ಕೆ.ಎನ್. ಎಂಬವರು ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ.ಕ ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿಯವರು, ಸಚಿವರು, ಶಾಸಕರು ಹಾಗೂ ಮನವಿ ಸಲ್ಲಿಸಿ ಬಿರ್ಮೆಗುಂಡಿ ಸಂಪರ್ಕ ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಈ ವರೆಗೆ ಇವರ ಮನವಿಗೆ ಪೂರಕ ಸ್ಪಂದನ ದೊರೆತಿಲ್ಲ.
ನಾವು ಈಗಾಗಲೇ ಸೇತುವೆ ನಿರ್ಮಾಣ ಹಾಗೂ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದೇವೆ. ಒಂದು ಬಾರಿ ಪಂಚಾಯತ್ ರಾಜ್ ಇಲಾಖೆಯವರು ಸೇತುವೆ ನಿರ್ಮಾಣಕ್ಕಾಗಿ ಐವತ್ತು ಲಕ್ಷ ರೂ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ೧.೩೨ ಕೋಟಿ ರೂ ಅಂದಾಜುಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಆದರೆ ಆರ್ಥಿಕ ಕೊರತೆಯಿಂದ ಅನುದಾನ ಬಿಡುಗಡೆಯಾಗಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ನಿಯೋಗವೊಂದು ಸಂಬAಧಪಟ್ಟ ಸಚಿವರನ್ನು ಭೇಟಿ ಮಾಡಿ ಅನುದಾನ ಬಿಡುಗಡೆಗೆ ಅಗ್ರಹಿಸಲಿದೆ.
ಮಂಜುನಾಥ್ ಕೆ.ಎನ್.
ಸ್ಥಳೀಯ ನಿವಾಸಿ
ಬಿರ್ಮೆರೆಗುಂಡಿಯಲ್ಲಿ ಅಗತ್ಯವಾಗಿ ಸೇತುವೆ ನಿರ್ಮಾಣವಾಗಬೇಕಿದೆ, ಸಧ್ಯಕ್ಕೆ ಪಾಲ ನಿರ್ಮಾಣ ಮಾಡಲು ಪಂಚಾಯಿತಿ ವತಿಯಿಂದ ಅನುದಾನ ನೀಡಲಾಗುತ್ತಿದೆ. ಅಲ್ಲಿನ ರಸ್ತೆ ಅಭಿವೃದ್ಧಿಗೆ ಹಾಗೂ ಸೇತುವೆ ನಿರ್ಮಾಣಕ್ಕೆ ಬಗ್ಗೆ ಶಾಸಕರಲ್ಲಿ ಬೇಡಿಕೆ ಇಟ್ಟಿದ್ದೇವೆ,
ಮಧುಸೂಧನ ಒಡೋಳಿ
ಅಧ್ಯಕ್ಷರು ಗ್ರಾಮ ಪಂಚಾಯಿತಿ ಕೊಂಬಾರು
(ಅಡಕೆ ಮರದಿಂದ ನಿರ್ಮಾಣವಾದ ಪಾಲ : ಫೊಟೋ ಫೈಲ್ ನೇಮ್ ಪಿಎಲ್,೧)
(ವೃದ್ಧೆಯನ್ನು ಕೈಗಾಡಿಯಲ್ಲಿ ಕುಳ್ಳಿರಿಸಿಕೊಂಡು ಬರುತ್ತಿರುವುದು: ಫೊಟೋ ಫೈಲ್ ನೇಮ್ ೧ಕೆಡಿಬಿ ವಿಆರ್)
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…