ಪ್ರತಿಯೊಬ್ಬರಿಗೆ ಬೇಕಾದ ವ್ಯಕ್ತಿ ಅಂದ್ರೆ ವೈದ್ಯರು. ಅವರ ಮಹತ್ವದ ಬಗ್ಗೆ ಹೇಳಬೇಕೆನಿಲ್ಲ. ನಮ್ಮಲ್ಲಿ ಸಾಮಾಜಿಕ ಮತ್ತು ಮಾನಸಿಕವಾಗಿ ಕಾಪಾಡಿ ಕೊಳ್ಳುವುದು ವೈದ್ಯರು ಎಂದು ದಾಮಸ್ ಕಟ್ಟೆ ಕಿರೆಂ ಚರ್ಚ್ ಧರ್ಮಗುರು ರೆ ಫಾ ಓಸ್ವಲ್ಡ್ ಮೊಂತೇರೊ ಹೇಳಿದರು.

ಅವರು ತಾಳಿಪಾಡಿ ಗುತ್ತು ಜನಕಲ್ಯಾಣ ಸಮಿತಿ (ರಿ ) ಉಚಿತ ವೈದ್ಯಕೀಯ ಮತ್ತು ದಂತ ಚಿಕಿತ್ಸಾಲಯ ಇವರ ಆಶ್ರಯದಲ್ಲಿ ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜ್ ದೇರಳಕಟ್ಟೆ, ಎಬಿ ಶೆಟ್ಟಿ ಸ್ಮಾರಕ ದಂತ ವಿದ್ಯಾಲಯ ನಿಟ್ಟೆ ಇವರ ಸಹಭಾಗಿತ್ವದಲ್ಲಿ ತಾಳಿಪಾಡಿ ಗುತ್ತಿನಲ್ಲಿ ನಡೆದ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿದರು.
ಈ ಸಂದರ್ಭ ತಾಳಿಪಾಡಿ ಗುತ್ತು ಜನಕಲ್ಯಾಣ ಸಮಿತಿ (ರಿ )
ನಿಟ್ಟೆ ಗ್ರಾಮೀಣ ವೈದ್ಯಕೀಯ ಚಿಕಿತ್ಸಾಲಾಯ ಮೆಡಿಕಲ್ ಆಫೀಸರ್ ಡಾ. ಅರುಣ್ ಶೆಟ್ಟಿ ಮತ್ತು ತಾಳಿಪಾಡಿ ಗುತ್ತು ಜನಕಲ್ಯಾಣ ಸಮಿತಿ
ನಿಟ್ಟೆ ರೂರಲ್ ಹೆಲ್ತ್ ಸೆಂಟರ್ ದಂತ ವೈದ್ಯೆ ಡಾ|| ಶೀತಲ್ ಜೆ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ದಲ್ಲಿ ಸಾಮಾಜಿಕ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭುವನಾಭಿರಾಮ ಉಡುಪ ಹಾಗೂ ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಲವ ಕೆ ಶೆಟ್ಟಿ ಇವರನ್ನು ಗೌರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಳಿಪಾಡಿ ಗುತ್ತು ಜನಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ರತ್ನಾಕರ ಶೆಟ್ಟಿ ಪಾದಮನೆ ತಾಳಿಪಾಡಿ ಗುತ್ತು ಅಧ್ಯಕ್ಷತೆಯನ್ನು ವಹಿಸಿದ್ದರು. ತಾಳಿಪಾಡಿ ಗುತ್ತು ಶ್ರೀ ದಿನೇಶ್ ಬಂಡ್ರಿಯಾಲ್, ಸುರಗಿರಿ ಮಹಾಲಿಂಗೇಶ್ವರ ದೆವಸಂದ ಆಡಳಿತ ಮಂಡಳಿಯ ಸದಸ್ಯ ಧನಂಜಯ ಶೆಟ್ಟಿಗಾರ್ ಉಪಸ್ಥಿತರಿದ್ದರು. ದಾಮೋದರ ದಾಮೋದರ ಶೆಟ್ಟಿ ಸ್ವಾಗತಿಸಿದರು ಕುಶಲ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.



