ಜನ ಮನದ ನಾಡಿ ಮಿಡಿತ

Advertisement

ತೃತೀಯ ಚಾತುರ್ಮಾಸ್ಯ ವ್ರತಾಚರಣೆ: ಎಡನೀರು ಶ್ರೀ ಮಠಕ್ಕೆ ಹೊರೆ ಕಾಣಿಕೆ ಸಮರ್ಪಣೆ.

ಶ್ರೀಮದ್ ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯ ವೃತ್ತಾಚರಣೆಯ ಅಂಗವಾಗಿ ಕಾಸರಗೋಡು ವಲಯ ಸಮಿತಿ ನೇತೃತ್ವದಲ್ಲಿ ಶ್ರೀ ಮಠಕ್ಕೆ ಹೊರೆ ಕಾಣಿಕೆ ಸಮರ್ಪಿಸಲಾಯಿತು. ಕಾಸರಗೋಡು ವಲಯ ಸಮಿತಿ ಅಧ್ಯಕ್ಷ ರಾಮ್ ಪ್ರಸಾದ್ ಕಾಸರಗೋಡು ಅಧ್ಯಕ್ಷ ಕೆ ವೆಂಕಟರಮಣ ಹೊಳ್ಳ ಉಪಾಧ್ಯಕ್ಷರಾದ ನಿರಂಜನ ಕೊರಕ್ಕೋಡು, ಹರಿದಾಸ ದಯಾನಂದ ಕುಮಾರ್ ಹೊಸದುರ್ಗ, ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಶಶಿಧರ ಶೆಟ್ಟಿ, ಪ್ರದೀಪ್ ಬೇಕಲ್, ಪ್ರಧಾನ ಕಾರ್ಯದರ್ಶಿ ಜಗದೀಶ ಕೂಡ್ಲು, ಶಿವರಾಮ ಕಾಸರಗೋಡು, ಗುರುಪ್ರಸಾದ್ ಕೋಟೆ ಕಣಿ, ಲಕ್ಷ್ಮೀನಾರಾಯಣ ಪಟ್ಟೇರಿ ಕಾವು ಮಠ, ಕೆ ಎನ್ ರಾಮಕೃಷ್ಣ ಹೊಳ್ಳ, ಶ್ರೀಮತಿ ಸುಚಿತ್ರ ಮಹೇಶ್, ಶ್ರೀಕಾಂತ ಕಾಸರಗೋಡು, ದಯಾನಂದ ಕೊಳಕ್ಕೆ ಬೈಲ್ ಮೊದಲಾದವರು ಉಪಸ್ಥಿತರಿದ್ದರು.


ಕಾಸರಗೋಡು ಪೇಟೆ ವೆಂಕಟ್ರಮಣ ದೇವಸ್ಥಾನದಿಂದ ಹೊರಟ ಹೊರ ಕಾಣಿಕೆ ಮೆರವಣಿಗೆ ಎಡನೀರು ಮಠದಲ್ಲಿ ಚಾತುರ್ಮಾಸ ಸಮಿತಿಯ ಪದಾಧಿಕಾರಿಗಳು ಆದರದಿಂದ ಬರಮಾಡಿಕೊಳ್ಳಲಾಯಿತು ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿಯವರು ಆಶೀರ್ವಚನ l ಮಂತ್ರಾಕ್ಷತೆಯನ್ನಿತ್ತು ಹರಸಿದರು. ಇದರ ಅಂಗವಾಗಿ ವಿವಿಧ ಭಜನಾ ಸಂಘಗಳಿಂದ ಭಜನಾ ಸಂಕೀರ್ತನೆ, ಹರಿದಾಸ ದಯಾನಂದ ಕುಮಾರ್ ಹೊಸದುರ್ಗ ಅವರಿಂದ ಹರಿಕಥೆ ಸತ್ಸಂಗ ನಡೆಯಿತು

Leave a Reply

Your email address will not be published. Required fields are marked *

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ಮಮತಾ ಪಿ. ಶೆಟ್ಟಿ..!

ಮಂಗಳೂರು: ಮಾಧ್ಯಮ ಮಿತ್ರ ನಾಗರಾಜ್ ಅನಾರೋಗ್ಯದಿಂದ ನಿಧನ

ಆಂಬ್ಯುಲೆನ್ಸ್ ವಾಹನವೊಂದಕ್ಕೆ ಸೈಡ್ ಬಿಡದ ಸ್ಕೂಟರ್ ಸವಾರನ ಬಂಧನ

ಮಂಗಳೂರು: ಝಕರಿಯಾ ಜೋಕಟ್ಟೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ಮಂಗಳೂರು: ಸೇತುವೆ ಬಳಿ ನಾಪತ್ತೆಯಾದ ಆಟೋ ಚಾಲಕನ ಶವ ಪತ್ತೆ….!

ಮಂಗಳೂರು: ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದಂಪತಿಯ ಬಂಧನ..!

ಕಡಬ: ಮದುವೆಯ ವಾಹನ ಪಲ್ಟಿ; 20ಕ್ಕೂ ಅಧಿಕ ಮಂದಿಗೆ ಗಾಯ..!

ಹುಣಸೂರು: ಜಮೀನಿನಲ್ಲಿ ಬಿದ್ದಿದ್ದ ಕರೆಂಟ್ ತಂತಿ ಸ್ಪರ್ಶ, ತಾಯಿ- ಮಗ ಬಲಿ…!

ಬಂಟ್ವಾಳ: ಬಿ.ಸಿ.ರೋಡ್ ನಲ್ಲಿರುವ ಮೆಸ್ಕಾಂ ಭವನದಲ್ಲಿ ಜನಸಂಪರ್ಕ ಸಭೆ..!

error: Content is protected !!