ಮುಲ್ಕಿ : ಮನೆಗೆ ನುಗ್ಗಿ ನಗ ನಗದು ಕಳವು ಪ್ರಕರಣ ಘಟನೆ ಮೂಲ್ಕಿ ಠಾಣಾ ವ್ಯಾಪ್ತಿಯ ಬಳ್ಕುಂಜೆ ನೀರಳಿಕೆಯಲ್ಲಿ ಗುರುವಾರ ಮುಂಜಾನೆ ನಡೆದಿದೆ. ಬಳ್ಕುಂಜೆ ನೀರಳಿಕೆ ನಿವಾಸಿ ಶೇಖಬ್ಬ ಪತ್ನಿ ಮತ್ತು ಮಕ್ಕಳು ರಾತ್ರಿ ಮಲಗಿದ್ದು ಶೇಖಬ್ಬ ಅವರ ಮಗಳ ಗಂಡ ರಾತ್ರಿ 1.00 ಗಂಟೆಗೆ ಕರೆ ಮಾಡಿದ್ದು ಕರೆ ಸ್ವೀಕರಿಸಿ ಮಲಗಿದ್ದರು ಆದರೆ ಆ ಸಂದರ್ಭ ಕಳತನ ನಡೆದಿಲ್ಲ, ಮುಂಜಾನೆ 4.30 ಕ್ಕೆ ಶೇಕಬ್ಬ ಅವರ ಮಗಳು ಶೌಚಾಲಯಕ್ಕೆ ತೆರಳಲು ಏಳುವಾಗ ಘಟನೆ ಬೆಳಕಿಗೆ ಬಂದಿದೆ.

ಮನೆ ಮಂದಿ ಮನೆಯ ಚಾವಡಿಯಲ್ಲಿ ಮಲಗಿದ್ದು, ಕಳ್ಳರು ಮನೆಯ ಮುಂಭಾಗದ ಚಿಲಕ ಹಾಕಿ ಹಿಂಬಾಗಿಲಿನ ಬಾಗಿಲ ಒಳಬಾಗದ ಚಿಲಕವನ್ನು ರಾಡ್ ನಿಂದ ಒಡೆದು ಕಳ್ಳರು ಒಳನುಗ್ಗಿದ್ದಾರೆ ಮನೆಯಲ್ಲಿ ಜಾಲಾಡಿದ್ದಾರೆ ಹಾಸಿಗೆಯ ಅಡಿಯಲ್ಲಿ ಕಪಾಟಿನ ಕೀಲಿಕೈ ಇದ್ದು ಅದರಿಂದ ಕಪಾಟಿನ ಬೀಗ ತೆಗೆದು ಕಪಾಟನ್ನು ಜಾಲಾಡಿ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ನಗದು ದೋಚಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಜರು, ಶ್ವಾನ ದಳ, ಮೂಲ್ಕಿ ಪೋಲೀಸರು ಬೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.



