ಜನ ಮನದ ನಾಡಿ ಮಿಡಿತ

Advertisement

ಕಡಬ ಜನತಾ ದರ್ಶನ : ಪ್ರಚಾರಕ್ಕೆ ಸೀಮಿತವಾಗಬಾರದು; ಅಧಿಕಾರಿಗಳು ಬದ್ಧತೆಯಿಂದ ಜನರ ಸಮಸ್ಯೆ ಪರಿಹರಿಸಬೇಕು: ಸಚಿವ ಗುಂಡೂ ರಾವ್ ತಾಕೀತು

ಜನತಾ ದರ್ಶನ ಕಾರ್ಯಕ್ರಮ ಪ್ರಚಾರಕ್ಕೆ ಸೀಮಿತವಾಗದೆ ಜನರ ಸಮಸ್ಯೆಗೆ ತಾರ್ಕಿಕ ಪರಿಹಾರ ದೊರೆಯುವ ವೇದಿಕೆಯಾಗಬೇಕು, ಈ ನಿಟ್ಟಿನಲಿ ಅಧಿಕಾರಿಗಳು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅವರು ಶನಿವಾರ ಸಂಜೆ ಕಡಬ ಸೈಂಟ್‌ಜೋಕಿಮ್ಸ್ ಸಭಾಭವನದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರಕಾರ ಯಾವತ್ತೂ ಜನರ ಸೇವೆಗಾಗಿ ಇರುವಂತಾದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಸೇವೆಯನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಸರಕಾರದ ಆಶೋತ್ತರಗಳು ಈಡೇರುತ್ತವೆ, ಜನರು ಸಮಸ್ಯೆಗಳನ್ನು ಹೇಳಿಕೊಂಡು ಬಂದಾಗ ಅವರಲ್ಲಿ ದುವರ್ತನೆ ತೋರದೆ ತಾಳ್ಮೆಯಿಂದ ವರ್ತಿಸಿ ಮಾನವೀಯತೆ ಮೆರೆಯಬೇಕು, ಎಲ್ಲಾ ಸಮಸ್ಯೆಗಳನ್ನು ಏಕ ಕಾಲದಲ್ಲಿ ಪರಿಹರಿಸಲು ಸಾಧ್ಯವಿಲ್ಲ. ಆದರೆ ಕಾನೂನು ಚೌಕಟ್ಟಿನ ಒಳಗೆ ಪರಿಹರಿಸಬಹುದಾದ ಸಮಸ್ಯೆಗಳನ್ನು ಶೀಘ್ರ ಇಲೇವಾರಿ ಮಾಡಬೇಕೆಂದು ಪರೋಕ್ಷವಾಗಿ ಅಧಿಕಾರಿಗಳಿಗೆ ಭ್ರಷ್ಟಚಾರವಿಲ್ಲದೆ ಕೆಲಸ ನಿರ್ವಹಿಸಿ ಎಂದು ಹೇಳಿದರು.


ಕಡಬ, ಬೆಳ್ತಂಗಡಿ, ಪುತ್ತೂರು , ಸುಳ್ಯ ತಾಲೂಕುಗಳಲ್ಲಿ ಭಾಗಶ: ಅರಣ್ಯ ಸಮಸ್ಯೆ ಇರುವುದರ ಬಗ್ಗೆ ದೂರಗಳು ಬಂದಿವೆ, ಈ ಬಗ್ಗೆ ಗಮನ ಹರಿಸಲಾಗುವುದು, ಪ್ಲಾಟಿಂಗ್ ಸಮಸ್ಯೆ, ೯/೧೧ ವಿನ್ಯಾಸ ನಕ್ಷೆ ಸಮಸ್ಯೆಗಳನ್ನು ಸರಕಾರದ ಮಟ್ಟದಲ್ಲಿ ಸಂಬoಧಪಟ್ಟ ಸಚಿವರೊಂದಿಗೆ ಚರ್ಚಿಸಿ ಪರಿಹರಿಸಲು ಕ್ರಮ ಕೈಗೊಳ್ಲಲಾಗುವುದು ಎಂದು ಸಚಿವರ ಭರವಸೆ ನೀಡಿದರು.
ವೇದಿಕೆಯಲ್ಲಿ ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಜಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|ಆನಂದ್ ಕೆ, ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ಪ್ರೊಬೆಷನರಿ ಐಎಎಸ್ ಅಧಿಕಾರಿ ಶ್ರವಣ್ ಕುಮಾರ್ , ಐಎಫ್ ಎಸ್ ಅಧಿಕಾರಿ ಅಕ್ಷಯ್, ಮಂಗಳೂರು ಉಪರಣ್ಯ ಸಂರಕ್ಷಣಾಧಿಕಾರಿ ಅಂತೋನಿ ಎಸ್ ಮರಿಯಪ್ಪ, ಡಿವೈಎಸ್‌ಪಿ ವಿಜಯ ಪ್ರಸಾದ್, ಕಡಬ ತಾ.ಪಂ ಅಡಳಿತಾಧಿಕಾರಿ ಕೆಂಪೇ ಗೌಡ, ಕಡಬ ತಹಸಿಲ್ದಾರ್ ಪ್ರಭಾಕರ ಖಜೂರೆ, ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕಾರ್ಪೋರೇಟರ್ ಎ.ಸಿ. ವಿನಯರಾಜ್ ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಸ್ವಾಗತಿಸಿದರು, ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ವಂದಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ನಿರೂಪಿಸಿದರು.

ಸಭೆಯ ಮಧ್ಯೆ ಬಂದು ಸಮಸ್ಯೆ ಪರಿಹರಿಸಿದ ಸಚಿವರು:
ವಿಕಲಾಂಗ ಚೇತನಾ ವ್ಯಕ್ತಿ ಚಾರ್ವಾಕ ಗ್ರಾಮದ ಬೀರೋಳಿಕೆ ನಿವಾಸಿ ಯತೀಂದ್ರ ಅವರು ಸಮಸ್ಯೆ ಪರಿಹರಿಸಿಕೊಳ್ಳಲು ಸಭೆ ಬಂದಿದ್ದರು. ಸಭೆಯ ಮಧ್ಯೆ ಇರುವುದನ್ನು ಗಮನಿಸಿದ ಸಚಿವರು ಸ್ಥಳಕ್ಕೆ ತೆರಳಿ ಸಮಸ್ಯೆ ಆಲಿಸಿದರು. ತನಗೆ ಮಾಶಾಸನ, ಸಿಗುತ್ತಿಲ್ಲ, ವೀಲ್ ಚೇರ್ ನೀಡಿಲ್ಲ ಮುಂತಾದ ಸಮಸ್ಯೆಗಳನ್ನು ಹೇಳಿಕೊಂಡಾಗ ಸಂಬoಧಪಟ್ಟ ಇಲಾಖಾಧಿಕಾರಿಗಳನ್ನು ಕರೆದು ಯತೀಂದ್ರವ ಅವರ ಸಮಸ್ಯೆ ಪರಿಹರಿಸುವಂತೆ ಆದೇಶ ಮಾಡಿ ಸ್ಥಳದಲ್ಲಿ ಪರಿಹಾರ ನೀಡಿದರು.
ಮತ್ತೋರ್ವ ವಿಕಲಾಂಗಚೇತನ ಗಿರೀಶ್ ಕಾಯಂದೂರು ಕಟ್ಟಡ ಕಾರ್ಮಿಕನಾಗಿ ದುಡಿಯುತ್ತಿದ್ದ ವೇಳೆ ಕಟ್ಟಡದಿಂದ ಬಿದ್ದು ತನ್ನ ದೇಹದ ಸ್ವಾಧೀನ ಕಳೆದುಕೊಂಡರೂ ತನಗೆ ಯಾವುದೇ ಪರಿಹಾರವಾಗಲೀ, ಮಾಶಾಸನವಾಗಲಿ ನೀಡಲು ಅಧಿಕರಿಗಳು ಸತಾಯಿಸುತ್ತಾರೆ ಎಂದು ತನ್ನ ಅಳಲು ತೋಡಿಕೊಂಡರು. ವೇದಿಕೆಯಿಂದ ಮುಂಭಾಗಕ್ಕೆ ಬಂದು ಸಮಸ್ಯೆ ಆಲಿಸಿದ ಸಚಿವರು ಸಂಬoಧಪಟ್ಟ ಇಲಾಖೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ವಿವಿಧ ಸಮಸ್ಯೆಗಳ ಬಗ್ಗೆ ಮನವಿ:
ಕಡಬ ತಾಲೂಕು ಕೇಂದ್ರವದರೂ ಇಲ್ಲಿ ವಿವಿಧ ಇಲಾಖೆಗಳು ಇನ್ನೂ ಕಾರ್ಯಚರಿಸುತ್ತಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸಬ್‌ರಿಜಿಸ್ಟಾçರ್ ಕಛೇರಿ, ಸಮಾಜ ಕಲ್ಯಾಣ ಕಛೇರಿ, ತೋಟಗಾರಿಕಾ ಇಲಾಖೆ, ಸಾರ್ವಜನಿಕ ಬಸ್ ನಿಲ್ದಾಣ, ಲೋಕೋಪಯೋಗಿ ಇಲಾಖೆಗಳನ್ನು ಶೀಘ್ರ ತೆರೆಯಬೇಕು, ಇಂದಿರಾ ಕ್ಯಾಂಟೀನ್ ಶೀಘ್ರ ತೆರೆಯಬೇಕು, ಪಾಲೋಲಿ ಸೇತುವೆಯನ್ನು ಶೀಘ್ರ ಲೋಕಾರ್ಪಣೆ ಮಾಡಬೇಕು, ಕಡಬದಲ್ಲಿರುವ ಅಲ್ಪ ಸಂಖ್ಯಾತರ ಮಹಿಳಾ ಹಾಸ್ಟೆಲ್‌ನ್ನು ಮರು ಪ್ರಾರಂಭ ಮಾಡಬೇಕು ಎಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯ ಮೀರಾ ಸಾಹೇಬ್ ಮನವಿ ಸಲ್ಲಿಸಿದರು. ಕಡಬದಲ್ಲಿ ನ್ಯಾಯಾಲಯ ಪ್ರಾರಂಭಿಸಬೇಕೆAದು ಕಡಬದ ನ್ಯಾಯವಾದಿಗಳು ಮನವಿ ಸಲ್ಲಿಸಿದರು. ಆಲಂಕಾರಿನಲ್ಲಿ ಎಂಡೋ ಸಂತ್ರಸ್ತರ ಶಾಶ್ವತ ಪುನರ್ವಸತಿ ಕೇಂದ್ರ ಪ್ರಾರಂಭಿಸಬೇಕು ಎಂದು ಎಂಡೋ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಪೀರ್‌ಮಹಮ್ಮದ್ ಸಾಹೇಬ್ ಮನವಿ ಸಲ್ಲಿಸಿದರು. ಪ್ಲಾಟಿಂಗ್ ಸಮಸ್ಯೆ ಪರಿಹರಿಸುವಂತೆ ಕಾಂಗ್ರೇಸ್ ಮುಖಂಡ ರಾಯ್ ಅಬ್ರಹಾಂ ಮನವಿ ಮಾಡಿದರು. ಕೆ.ಪಿ.ಮೋಹನ್ ಸೇರದಿಂತೆ ಹಲವರು ವಿವಿಧ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು. ೨೫೦ ಕ್ಕೂ ಹೆಚ್ಚು ಅರ್ಜಿಗಳನ್ನು ಸಚಿವರಿಗೆ ಸಲ್ಲಿಸಲಾಯಿತು. ಮನವಿಯ ಪಟ್ಟಿಯನ್ನು ಉಪತಹಸೀಲ್ದಾರ್ ಮನೋಹರ ಕೆ.ಟಿ ಹಾಗೂ ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್ ಕೆ.ಕೆ ವಾಚಿಸಿದರು.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!