ಪುತ್ತೂರು ಶಾಸಕ ಅಶೋಕ್ ರೈ ಮಾತಿನಿಂದ ನೊಂದು ಪುಡಾ ಅಧ್ಯಕ್ಷ ಸ್ಥಾನಕ್ಕೆ ಕೆ ಭಾಸ್ಕರ ಕೋಡಿಂಬಾಳರವರು ದಿಢೀರ್ ರಾಜೀನಾಮೆ ನೀಡಿದರು.

ಪುತ್ತೂರು ಕಾಂಗ್ರೆಸ್ಸಿನ ಹಿರಿಯ ನಾಯಕನ ಈ ರಾಜೀನಾಮೆ ನಿರ್ಧಾರ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.ಜೂ 11 ರಂದು ಬೆಂಗಳೂರಿನಿಂದ ಕರೆ ಮಾಡಿದ ಶಾಸಕರ’ ಪುಡಾ ( ಪುತ್ತೂರು ನಗರ ಅಭಿವೃದ್ದಿ ಯೋಜನಾ ಪ್ರಾಧಿಕಾರ) ಸತ್ತಿದೆ. ನಿಮ್ಮ ಕಾರ್ಯವೈಖರಿ . ಇನ್ನು ಈ ಬಗ್ಗೆ ಜನ ಮಾತನಾಡಲು ಶುರು ಮಾಡುತ್ತಾರೆ” ಎಂದರು.
ನಾನು ಪುಡಾ ಅಧ್ಯಕ್ಷನಾಗಿ ಪದಗ್ರಹಣ ಆರಂಭಿಸಿದವತ್ತೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಆಯಿತು. ಅದು ಜೂ 6 ರವರೆಗೆ ಇತ್ತು. ಬಳಿಕ ಸಿಕ್ಕಿದ 22 ದಿನದಲ್ಲಿ ಕಟ್ ಕನ್ವರ್ಶನ್ ಹಾಗೂ ಶ್ರೀ ಮಹಾಲೀಂಗೇಶ್ವರ ದೇಗುಲದ ಬಿಲ್ ಮಂಜೂರು ಮಾಡುವ ಕಾರ್ಯವನ್ನು ಮಾಡಿದ್ದೇನೆ.
ನನ್ನನ್ನು ಯಾವುದೇ ಶಿಫಾರಸ್ಸು ಇಲ್ಲದೆ ಶಾಸಕರು ಆಯ್ಕೆ ಮಾಡಿದ್ದು, ಅವರಿಗೆ ನನ್ನ ಕಾರ್ಯವೈಖರಿ ಇಷ್ಟವಾಗದಿದ್ದಾಗ ರಾಜೀನಾಮೆ ಸೂಕ್ತ ಎಂದು ಭಾವಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಪತ್ರಿಕಾಗೋಷ್ಚಿಯಲ್ಲಿ ತಿಳಿಸಿದರು.



