ಡ್ರಾಮಾ ಜೂನಿಯರ್ಸ್, ಕಾಮಿಡಿ ಕಿಲಾಡಿಗಳು, ಡಿಕೆಡಿ, ಭರ್ಜರಿ ಬ್ಯಾಚುಲರ್ಸ್ ಮತ್ತು ಸರಿಗಮಪ ಮೂಲಕ ಈಗಾಗಲೇ ಸಾಕಷ್ಟು ನಟ ನಟಿಯರು, ಗಾಯಕ ಗಾಯಕಿಯರು ಹಾಗೂ ಕೊರಿಯೋಗ್ರಾಫರ್‌ಗಳನ್ನು ಕರುನಾಡಿಗೆ ನೀಡಿರುವ ಜೀ ಕನ್ನಡ, ಇದೀಗ ಮಹಾನಟಿ ಶೋ ಮೂಲಕ ಹೊಸ ಪ್ರತಿಭೆಗಳನ್ನು ನೀಡಿದೆ. ಇದೀಗ ಮೂರುವರೆ ತಿಂಗಳಿಂದ ಎಲ್ಲರನ್ನು ರಂಜಿಸಿದ ಈ ಶೋ ಕೊನೆಗೊಂಡಿದೆ. ಅದ್ಧೂರಿ ಗ್ರ್ಯಾಂಡ್ ಫಿನಾಲೆಯಲ್ಲಿ ಮೈಸೂರಿನಲ್ಲಿ ಪ್ರಿಯಾಂಕಾ ಮಹಾನಟಿ ಸೀಸನ್ 1ರ ವಿಜೇತೆಯಾಗಿ ಹೊರಹೊಮ್ಮಿದ್ದಾರೆ. ತರೀಕೆರೆಯ ಧನ್ಯಶ್ರೀ ರನ್ನರ್ ಅಪ್ ಆಗಿದ್ದಾರೆ.




