ಜನ ಮನದ ನಾಡಿ ಮಿಡಿತ

Advertisement

ಶಿರ್ತಾಡಿ ಗ್ರಾಮ ಪಂಚಾಯಿತ್ ಬೇಜವಾಬ್ದಾರಿಯಿಂದ ಸ್ಥಳೀಯರು ಗರಂ, ಮೇಲ್ಮನವಿ ಹಾಗೂ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ

ದಕ್ಷಿಣ ಕನ್ನಡ : ಜಿಲ್ಲೆಯ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಮೂಡು ಕೋಣಾಜೆ ಗ್ರಾಮದ ಮಾವಿನಕಟ್ಟೆ (ಕುಕ್ಕುದ ಕಟ್ಟೆ ) ಎಂಬಲ್ಲಿಂದ ಇಜಿನು, ಕುಂಟಲ, ಕೇದಲ್ಕೆ ಹಾಗೂ ಇತರ ಹಲವು ಕಡೆಗೆ ಸಂಪರ್ಕ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಮೊಣಕಾಲು ಮಟ್ಟಕ್ಕೆ ಕೆಸರು ತುಂಬಿ ವಾಹನ ಸಂಚಾರ ಪರಿಸ್ಥಿತಿ ಅಯೋಮಯವಾಗಿದೆ. ಜೊತೆಗೆ ನಡೆದಾಡುವುದು ಕಷ್ಟ ಸಾಧ್ಯ ಎನಿಸಿದೆ. ಹಲವು ವೃದ್ಧರು ಮತ್ತು ಮಕ್ಕಳು ಸಹಿತ ಜನರು ವಾಹನ ಸಂಚಾರ ಸಾಧ್ಯವಿಲ್ಲದೆ, ನಡೆದಾಡಲು ಸಾಧ್ಯವಿಲ್ಲದೆ, ಕಂಗೆಟ್ಟು ಸ್ಥಳೀಯ ಪಂಚಾಯಿತಿಗೆ ಹಲವು ಬಾರಿ ವಿನಂತಿಸಿದ್ದರು, ಆದರೂ ಪ್ರಯೋಜನವಾಗಿಲ್ಲ ಎನ್ನುತ್ತಿದ್ದಾರೆ. ಊರವರೇ ಸೇರಿ ಒಂದಷ್ಟು ಖರ್ಚು ಮಾಡಿ ಸ್ವಲ್ಪಮಟ್ಟಿನ ರಿಪೇರಿಯನ್ನು ಮಾಡಿದ್ದಾರೆ ಎನ್ನುತ್ತಿದ್ದಾರೆ ಸ್ಥಳೀಯರು.


ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಥಳೀಯರಂತೆ ವರ್ತಿಸದೆ ಪರದೇಶಿಗಳಂತೆ ವರ್ತಿಸುತ್ತಿದ್ದಾರೆ, ಹಾಗೂ ಸ್ಥಳೀಯರ ಸಮಸ್ಯೆಯನ್ನು ಆಲಿಸಿದ ಬಳಿಕ ಆಶ್ಚರ್ಯ ಚಕಿತರಾಗಿ ಮುಖ ನೋಡುತ್ತಿದ್ದಾರೆ ವಿನಹ ಸ್ಥಳೀಯರ ಸಮಸ್ಯೆಗೆ ಸ್ಪಂದಿಸುವ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ ಎಂಬುದು ಸ್ಥಳೀಯರ ಮಾತಾಗಿದೆ.
ಕಣ್ಣಿಗೆ ರಾಚುವಂತಿರುವ ಸಾರ್ವಜನಿಕ ಸಮಸ್ಯೆಗೆ ಮನವಿ ನೀಡಿ ಎಂದು ಸ್ಥಳೀಯರನ್ನ ಸತಾಯಿಸುತ್ತಿದ್ದಾರೆ, ಸಾರ್ವಜನಿಕ ಸೇವೆಗೆ ಆಯ್ಕೆಯಾದ ಮತ್ತು ಮೀಸಲಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು, ಸಾರ್ವಜನಿಕ ರಸ್ತೆ ರಿಪೇರಿಗಾಗಿ ಮನವಿ ನೀಡಿ ಎಂಬುವುದು ವಿಪರ್ಯಾಸವೇ ಸರಿ, ಯಾಕಂದ್ರೆ ಸಾರ್ವಜನಿಕ ಸಮಸ್ಯೆಗೆ ಮನವಿ ನೀಡುವ ಅಗತ್ಯವಿಲ್ಲ ಹಾಗೂ ಸಮಸ್ಯೆ ನೋಡಿ ಸರಿ ಮಾಡಬೇಕಾದುದು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಕರ್ತವ್ಯ, ಹಾಗೂ ಅದಕ್ಕಿಂದೇ ಜನರು ಅವರನ್ನ ಚುನಾಯಿಸಿರುವುದು ಮತ್ತು ನೇಮಿಸಿರುವುದು ಎನ್ನುವುದರಲ್ಲಿ ಎರಡು ಮಾತಿಲ್ಲ, ಮತ್ತು ಅದುವೇ ವಾಸ್ತವ ಸತ್ಯ.


ರಸ್ತೆಯ ಇಕ್ಕಲಗಳಲ್ಲಿ ಪೊದೆ ಗಿಡ ಗಂಟೆಗಳು ತುಂಬಿದ್ದು, ಒಂದೆಡೆ ಕಾಡು ಪ್ರಾಣಿಗಳ ಹಾವಳಿ, ಇನ್ನೊಂದೆಡೆ ಕುಡುಕರ ಹಾವಳಿಯಿಂದ, ಶಾಲಾ ಮಕ್ಕಳು ಮತ್ತು ಹೆಂಗಳೆಯರು ಜೀವ ಭಯದಿಂದ ಓಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಹಲವು ಬಾರಿ ಮೌಕಿಕ ಮತ್ತು ಲಿಖಿತ ಮನವಿ ಸ್ವೀಕರಿಸಿದ ಪಂಚಾಯತ್ , ಕ್ರಮ ಕೈಗೊಂಡಿಲ್ಲ ಎಂಬುದು ಗಮನಾರ್ಹ.
ನೊಂದ ಸಾರ್ವಜನಿಕರ ಮಾತಿನ ಪ್ರಕಾರ, ಪಂಚಾಯತ್ ಮಟ್ಟದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದು, ಜನರ ಓಟು ಪಡೆದ ಜನಪ್ರತಿನಿಧಿಗಳು ಅಧಿಕಾರಿಗಳ ಜೊತೆ ಸೇರಿ ನೋಟು ಎಣಿಸುವ ಕೆಲಸದಲ್ಲಿ ಬಿಜಿಯಾಗಿದ್ದಾರೆ ಎನ್ನುತ್ತಿದ್ದಾರೆ ಸ್ಥಳೀಯರು,
ಸುಶಿಕ್ಷಿತ ದಕ್ಷಿಣ ಕನ್ನಡದಲ್ಲಿ, ಶಿರ್ತಾಡಿ ಪಂಚಾಯಿತಿನ ಈ ಮೇಲೆ ತಿಳಿಸಿದ ಸ್ಥಳದಲ್ಲಿ ಸಂಚಾರಕ್ಕೆ ಯೋಗ್ಯ ರಸ್ತೆ ಇಲ್ಲ, ಹಲವು ಸಮಯಗಳಿಂದ ಕಾಟ ಕೊಡುತ್ತಿರುವ ಕಾಡು ಪ್ರಾಣಿಗಳ ಹಾವಳಿ ಬಗೆಹರಿದಿಲ್ಲ , ರಸ್ತೆಗಳ ಪಕ್ಕದ ಪೊದೆ ಗಿಡ ಗಂಟಿ ಗಳನ್ನ ಹಲವು ಸಮಯಗಳಿಂದ ತೆಗೆದಿಲ್ಲ, ದಾರಿದೀಪ ಒದಗಿಸಿಲ್ಲ, ಕುಡಿಯುವ ನೀರಿನ ಸಂಪರ್ಕ ನೀಡಿಲ್ಲ, ಆದರೂ ಎಲ್ಲವೂ ನೀಡಿದಂತೆ ವರ್ತಿಸುತ್ತಿರುವ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಸ್ಥಳೀಯ ಜನರು ಗರಂ ಆಗಿದ್ದು ಮುಂದಿನ ದಿನಗಳಲ್ಲಿ ಇದು ರಾಜ್ಯಮಟ್ಟದ ಸುದ್ದಿ ಆದ್ರೂ ಆಶ್ಚರ್ಯ ಪಡಬೇಕಾಗಿಲ್ಲ.
ಬಲ್ಲ ಮಾಹಿತಿಗಳ ಪ್ರಕಾರ ಸಮಸ್ಯ ಕೂಡಲೇ ಬಗೆಹರಿಯದಿದ್ದರೆ ಸ್ಥಳೀಯ ಅಧಿಕಾರಿಗಳ ವಿವೇಕ ರಹಿತ ಅಧಿಕಾರ ಮತ್ತು ಅವ್ಯವಸ್ಥೆ ಕುರಿತು ಮೇಲ್ಮನವಿ, ಹಾಗೂ ನ್ಯಾಯಾಲಯದ ಮೊರೆ ಹೋಗಲು ಸ್ಥಳೀಯರು ಚಿಂತಿಸಿದ್ದಾರೆ, ಎನ್ನಲಾಗಿದ್ದು, ಕೆಲ ಸಮಯಗಳ ಮೊದಲು ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಸ್ಥಳೀಯ ಅವ್ಯವಸ್ಥೆಗಳ ಕುರಿತು ಮಕ್ಕಳು ಪ್ರೆಸ್ ಮೀಟ್ (ಪತ್ರಿಕಾಗೋಷ್ಠಿ ) ಮಾಡಿ ಗಮನ ಸೆಳೆದಿದ್ದು ಇಲ್ಲಿ ನೆನಪಿಸಬಹುದಾಗಿದೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!