ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಕಳ್ಳ ಮನೆಯ ಮಳಿಗೆಯಿಂದ ಬಿದ್ದು ಆಸ್ಪತ್ರೆಗೆ ದಾಖಲಾದ ಘಟನೆ ಬಿ .ಕಾಟೇಹಳ್ಳಿಯಲ್ಲಿ ನಡೆದಿದೆ.

ಹಾಸನ ತಾಲೂಕಿನ ಹೊಸೂರು ಗ್ರಾಮದ ಯೋಗೇಶ್ ಗಾಯಗೊಂಡು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಿ. ಕಾಟೆಹಳ್ಳಿ ಮಂಜೇಗೌಡ ಎಂಬುವರ ಮನೆಯಲ್ಲಿ ಕಳ್ಳತನ ಮಾಡಲು ಬಂದ ಕಳ್ಳ,ಮನೆಯ ಮೇಲ್ಚಾವಣಿಯಿಂದ ಪ್ಲಾಸ್ಟಿಕ್ ಸೀಟ್ ತೆಗೆದು ಒಳ ಪ್ರವೇಶಿಸಿದ್ದಾನೆ. ಪ್ರವೇಶಿಸಿದ್ದಂತೆ ಶಬ್ದ ಕೇಳಿದ ಮನೆಯ ಮಾಲೀಕ ಮಂಜೇಗೌಡ ಹೊರಬಂದು ಕಳ್ಳನಿಗೆ ಕಿರುಚಾಡಿದ್ದಾನೆ. ಇದರಿಂದ ಬೆಚ್ಚಿಬಿದ್ದ ಯೋಗೇಶ್ ತಪ್ಪಿಸಿಕೊಳ್ಳಲಾಗದೆ ತಿರುಮಲಕುಮಾರ್ ಅವರ ಮನೆಯ ಮೇಲ್ಚಾವಣಿ ಮೇಲೆ ಹಾರಿದ್ದಾನೆ ಆದರೆ ಲೆಕ್ಕಾಚಾರ ತಪ್ಪಿದ್ದು ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ಬಡಾವಣೆ ಪೊಲೀಸರು ಸ್ಥಳಕ್ಕೆ ತೆರಳಿ ಆಂಬುಲೆನ್ಸನಲ್ಲಿ ಕಳ್ಳನನ್ನು ಕರೆತಂದು ಜಿಲ್ಲಾಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಸಿ ಕರೆದುಕೊಂಡು ಹೋಗಿದ್ದಾರೆ. ಇನ್ನು ಈ ಪ್ರಕರಣ ಹಾಸನದ ಬಡಾವಣೆ ಠಾಣೆಯಲ್ಲಿ ದಾಖಲಾಗಿದೆ.



