ಕೆನಡಾದ ಕ್ಯಾಲ್ಗರಿಯಲ್ಲಿ ನಡೆದ ಕೆನಡಾ ಓಪನ್ ಸೂಪರ್ 500 ಅನ್ನು ಭಾರತದ ಲಕ್ಷ್ಯ ಸೇನ್ ಗೆದ್ದಿದ್ದಾರೆ. ಕ್ಯಾಲ್ಗರಿಯಲ್ಲಿ ರವಿವಾರ ನಡೆದ ಪುರುಷರ ಸಿಂಗಲ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅವರು 21-18, 22-20 ನೇರ ಸೆಟ್‌ಗಳಿಂದ ವಿಶ್ವದ 10ನೇ ಶ್ರೇಯಾಂಕದ ಆಟಗಾರ ಚೀನಾದ ಲಿ ಶಿ ಫೆಂಗ್ ಅವರನ್ನು ಸೋಲಿಸಿದರು.
#LakshyaSen clinches Men’s Singles title of #CanadaOpen2023 Badminton tournament.
— All India Radio News (@airnewsalerts) July 10, 2023
Indian shuttler #LakshyaSen defeats Li Shi Feng of China 21-18, 22-20 in final in Calgary, Canada. pic.twitter.com/jAFoizIVnH
ಸೇನ್ ಫ್ಲಾಟ್ ಡ್ರೈವ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರು. ಅವುಗಳಿಂದ ಹೆಚ್ಚಿನ ಅಂಕ ಪಡೆದು ಮುನ್ನಡೆದರು. ಪ್ರತಿ ಶಾರ್ಟ್ ಲಿಫ್ಟ್‌ನಲ್ಲಿಯೂ ಬೌನ್ಸ್ ಮಾಡುತ್ತಾ ಎದುರಾಳಿಯನ್ನು ಕಟ್ಟಿಹಾಕಿದರು. ನೆಟ್‌ನಲ್ಲಿ ಬಿಗಿ ಹೊಡೆತಗಳನ್ನು ಆಡಿದ ಸೇನ್, ಇಂಡಿಯಾ ಓಪನ್ ನಂತರ ತಮ್ಮ ವೃತ್ತಿಜೀವನದ ಎರಡನೇ ಸೂಪರ್ 500 ಪ್ರಶಸ್ತಿ ಗೆದ್ದು ಬೀಗಿದರು.



