ದಕ್ಷಿಣ ಕನ್ನಡ : ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಕೊಡ ಮಾಡುವ ಹಸಿರು ನೈರ್ಮಲ್ಯ ಪ್ರಶಸ್ತಿಯು ಸರ್ಕಾರಿ ಪ್ರೌಢಶಾಲೆ ಮಾಣಿಲ ಇಲ್ಲಿಗೆ ದೊರಕಿದೆ
ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ನ ಸ್ಥಾಪಕ ಸದ್ಗುರು ಮಧುಸೂದನ್ ಸಾಯಿ ಅವರ ಜನ್ಮ ದಿನೋತ್ಸವ ಪ್ರಯುಕ್ತ ಕೊಡಮಾಡುವ ನೈರ್ಮಲ್ಯ ಶಾಲಾ ಅಭಿವೃದ್ಧಿಯ ಪ್ರಶಸ್ತಿ ಇದಾಗಿದ್ದು, ಸರ್ಕಾರಿ ಪ್ರೌಢಶಾಲೆ ಮಾಣಿಲ ಅಂತಿಮ ಸುತ್ತಿನಲ್ಲಿ ಆಯ್ಕೆಯಾಗಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ವಿಟ್ಲ ಸಮೀಪದ ಮಾಣಿಲ ಸರಕಾರಿ ಪ್ರೌಢಶಾಲೆಯು ಕಳೆದ ಹಲವಾರು ವರ್ಷಗಳಿಂದ 10ನೇ ತರಗತಿಯಲ್ಲಿ ಅತ್ಯುತ್ತಮ ಫಲಿತಾಂಶ ನೀಡುತ್ತಾ ಬಂದಿದ್ದು, ಕಲಿಕೆಗೆ ಪೂರಕವಾದ ವಾತಾವರಣ,ವಿಶಾಲವಾದ ಆಟದ ಮೈದಾನ, ಶಾಲಾ ಸುತ್ತು ಮುತ್ತಲಿನ ಸ್ವಚ್ಛ ವಾತಾವರಣ, ಹಚ್ಚ ಹಸಿರಿನಿಂದ ಕೂಡಿದ ಸುತ್ತಮುತ್ತಲ ಪ್ರದೇಶ, ಶಿಕ್ಷಕರ ಉತ್ಸಾಹದ ಕಾರ್ಯವೈಕರಿ, ಉತ್ತಮ ಶಿಕ್ಷಣ ಮಟ್ಟ, ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ
ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ನ ಸ್ಥಾಪಕ ಸದ್ಗುರು ಶ್ರೀ ಮಧುಸೂಧನಸಾಯಿ ಜನ್ಮದಿನೋತ್ಸವ ಪ್ರಯುಕ್ತ ಕೊಡ ಮಾಡಿದ ಈ ಪ್ರಶಸ್ತಿಯು 10000 ನಗದು ಸಹಿತ ನೀಡಲಾಗುತ್ತಿದೆ.
ಪ್ರಶಸ್ತಿ ಕುರಿತು ಶಾಲಾ ಶಿಕ್ಷಕ ವರ್ಗ ಹಾಗೂ ಮಕ್ಕಳು, ಮತ್ತು ಸದೃದಯಿ ಊರವರು ಸಂತಸ ವ್ಯಕ್ತಪಡಿಸಿದ್ದಾರೆ.



