ಕರಾವಳಿ

ಪ್ರತಿಷ್ಠಿತ ಅಗರಿ ಪ್ರಶಸ್ತಿ, ಸನ್ಮಾನ, ಸಂಸ್ಮರಣೆ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಸಾಧಕ ಸನ್ಮಾನ, ಬಯಲಾಟ ಮತ್ತು ಯುವ ಚೇತನ ಹೊಸಬೆಟ್ಟು ವಾರ್ಷಿಕೋತ್ಸವ ಜಂಟಿ ಪತ್ರಿಕಾಗೋಷ್ಠಿ

ದಕ್ಷಿಣ ಕನ್ನಡ:”ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣೆ ವೇದಿಕೆ” ಸುರತ್ಕಲ್ ಮತ್ತು
“ಯುವಚೇತನ ಹೊಸಬೆಟ್ಟು”, ಕುಳಾಯಿ ಇದರ 31ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಜೊತೆಗೆ ಅಗರಿ ಪ್ರಶಸ್ತಿ, ಅಗರಿ ರಘುರಾಮ ಸಮ್ಮಾನ ಅಗರಿ ಸಂಸ್ಮರಣೆ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮವು ಇದೆ ಜೂಲೈ ೨೮ ರಂದು ಭಾನುವಾರ ಬೆಳಗ್ಗೆ ೯ ರಿಂದ ನವಾಗಿರಿ ಕಲ್ಯಾಣ ಮಂಟಪ, ಹೊಸಬೆಟ್ಟು ಇಲ್ಲಿ ನಡೆಯಲಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುವಚೇತನ, ಹೊಸಬೆಟ್ಟು, ಕುಳಾಯಿ ಇದರ 31ನೇ ವಾರ್ಷಿಕೋತ್ಸವ ಸಮಾರಂಭ ಬೆಳಿಗ್ಗೆ 9.30 ರಿಂದ ಆರಂಭಗೊಳ್ಳಲಿದ್ದು ಬ್ರಾಹ್ಮಣ ಸಮುದಾಯದವರಿಗಾಗಿ“ಭಲೇ ಜೋಡಿ ಸೀಸನ್ -3″ ಏರ್ಪಡಿಸಲಾಗಿದ್ದು ಸ್ಪರ್ಧೆಗೆ ವಯೋಮಿತಿ ಇಲ್ಲ ಮತ್ತು
ಒಂದು ತಂಡದಲ್ಲಿ ಇಬ್ಬರು ಇರಬೇಕು ಎಂಬ ನಿಬಂಧನೆಗೊಳಪಟ್ಟಿರುತ್ತದೆ ಹಾಗೂ ಈ ಕಾರ್ಯಕ್ರಮವನ್ನು ಶ್ರೀಮತಿ ಜಯಶ್ರೀ, (ನಿವೃತ್ತ ಮುಖ್ಯೋಪಾಧ್ಯಾಯಿನಿ) ಉದ್ಘಾಟಿಸಲಿದ್ದು ವಿನೂತನ ಸ್ಪರ್ಧೆ ವಿಜೇತರಿಗೆ ಭರ್ಜರಿ ಬಹುಮಾನ ದೊರೆಯಲಿದೆ, ಹಾಗೂ ಈಗಾಗಲೇ ನಡೆದ ಹಲವು ಸ್ಪರ್ಧೆಗಳ ಬಹುಮಾನವನ್ನು ವಿತರಿಸಲಾಗುವುದು. ಮಧ್ಯಾಹ್ನ 03.00ಕ್ಕೆ ಸಭಾ ಕಾರ್ಯಕ್ರಮವಿದ್ದು ಈ ಕಾರ್ಯಕ್ರಮದಲ್ಲಿ ಅಗರಿ ಸಂಸ್ಮರಣೆ, ಅಗರಿ ಪ್ರಶಸ್ತಿ ಪ್ರದಾನ, ಅಗರಿ ರಘುರಾಮ ಸಮ್ಮಾನ ಕಾರ್ಯಕ್ರಮವಿದೆ ಎಂದು ಸಂಘಟನೆಯು ತಿಳಿಸಿದ್ದು
ಜೊತೆಗೆ ವಿದ್ಯಾರ್ಥಿ ವೇತನ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವಿದ್ದು ಕಾರ್ಯಕ್ರಮದ ಸಭಾಧ್ಯಕ್ಷರಾಗಿ ಉದ್ಯಮಿ ಶ್ರೀಪತಿಭಟ್ ಆಗಮಿಸಲಿದ್ದು, ಕಟೀಲು ಹರಿನಾರಾಯಣದಾಸ ಅಸ್ರಣ್ಣ ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾನ್ಯ ಲೋಕಸಭಾ ಸದಸ್ಯರು, ದ.ಕ. ಶ್ರೀಕಾಂತ ಭಟ್  ಮಾಲಕರು, ತರಂಗ ಇಲೆಕ್ಟ್ರಾನಿಕ್ಸ್, ಕುಮಟಾ, ಗುರುರಾಜ ಆಚಾರ್ ಹೊಸಬೆಟ್ಟು, ರಮೇಶ್ ರಾವ್, ಶಾಲಾ ಸಂಚಾಲಕರು, ಸ.ಹಿ.ಪ್ರಾಥಮಿಕ ಶಾಲೆ, ಪೆರ್ಮುದೆ ಇರಲಿದ್ದು ಪುತ್ತಿಗೆ ರಘುರಾಮ ಹೊಳ್ಳ, ಅಭಿಜ್ಞ ಯಕ್ಷಗಾನ ಭಾಗವತರು ಇವರಿಗೆ ಅಗರಿ ಪ್ರಶಸ್ತಿಯನ್ನು ನೀಡಲಾಗುವುದು, ಅಗರಿ ರಘುರಾಮ ಸನ್ಮಾನವನ್ನು ಯಕ್ಷಕಲಾರಂಗ (ರಿ) ಉಡುಪಿ, ಯಕ್ಷಗಾನ ಮತ್ತು ಸಾಮಾಜಿಕ ಸೇವಾ ಸಂಸ್ಥೆಗೆ ನೀಡಲಿದ್ದು ಅಗರಿ ಸಂಸ್ಕರಣೆ ಯನ್ನು ವಿದುಷಿ ಸುಮಂಗಲಾ ರತ್ನಾಕರ್ ಭರತನಾಟ್ಯ ಮತ್ತು ಯಕ್ಷಗಾನ ಕಲಾವಿದರು ಮಾಡಲಿದ್ದಾರೆ.

ಅಭಿನಂದನಾ ಭಾಷಣವನ್ನು ವಾದಿರಾಜ ಕಲ್ಲೂರಾಯ, ಉಪನ್ಯಾಸಕರು ಮತ್ತು ಯಕ್ಷಗಾನ ಕಲಾವಿದರು ನಡೆಸಿಕೊಡಲಿದ್ದು  ಸಾಧನೆಗೈದ ಸದಸ್ಯರುಗಳಿಗೆ ಅಭಿನಂದನಾ ಸನ್ಮಾನವಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಹೇಳಿದ ನಿಧಿಶಾ ಹೊಸಬೆಟ್ಟು, ರಾಘವೇಂದ್ರ ಎಚ್.ವಿ., ರಾಕೇಶ್ ಹೊಸಬೆಟ್ಟು ಇವರನ್ನು ಸನ್ಮಾನಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದು, ಸಂಜೆ 5:30 ನಂತರ ಯಕ್ಷಗಾನ ಬಯಲಾಟ ನಡೆಯಲಿದ್ದು ಸಕ್ರಿಯವಾಗಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಪತ್ರಿಕಾಗೋಷ್ಟಿಯಲ್ಲಿ ಅಗರಿ ರಾಘವೇಂದ್ರ ರಾವ್, ಯುವಚೇತನ ಹೊಸಬೆಟ್ಟು ಅಧ್ಯಕ್ಷ ಪ್ರಶಾಂತ್ ರಾವ್ ಹೆಚ್., ಉಪಾಧ್ಯಕ್ಷ ಅಗರಿ ಕಿರಣ್ ರಾವ್, ಶೇಷಶಯನ, ಅಗರಿ ಅಭಿನಿತ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

 

 

 

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಮಂಗಳೂರು: ಕ್ರೀಡಾಪಟು ಎಂ.ಆರ್. ಪೂವಮ್ಮಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ

ಅಂತರರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿರುವ ಖ್ಯಾತ ಕ್ರೀಡಾಪಟು ಎಂ.ಆರ್. ಪೂವಮ್ಮ ಅವರನ್ನು ದಕ್ಷಿಣ…

6 hours ago

ಮಂಗಳೂರು: 2026ನೇ ಸಾಲಿನ ಕಾರಂತ ಪ್ರಶಸ್ತಿಗೆ ಹಿರಿಯ ಸಾಹಿತಿ ವೈದೇಹಿ ಆಯ್ಕೆ..!

ಖ್ಯಾತ ಸಾಹಿತಿ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ಕಲ್ಕೂರ ಪ್ರತಿಷ್ಠಾನದ ಕಾರಂತ ಪ್ರಶಸ್ತಿ ಸಮಿತಿ ನೀಡುವ 2026ನೇ ಸಾಲಿನ…

6 hours ago

ಕಡಬ: ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಸಾವು

ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆಯೊಂದು ಡಿಕ್ಕಿಯಾಗಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಅನಿಲ ಸಮೀಪ ನಡೆದಿದೆ. ಹೆದ್ದಾರಿಯಲ್ಲಿ ಕಾರು ಸಂಚರಿಸುತ್ತಿದ್ದ…

7 hours ago

ಮಂಗಳೂರು: ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಹೆಚ್ಚಿಸಿ: ಎಂ.ಆರ್. ಪೂವಮ್ಮ ಆಗ್ರಹ

ಅಂತಾರಾಷ್ಟ್ರೀಯ ಹಾಗೂ ವಿಶ್ವಮಟ್ಟದ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಪ್ರೋತ್ಸಾಹಧನ ತೀರಾ ಕಡಿಮೆಯಾಗಿದ್ದು, ಇತರ…

7 hours ago

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ತಾಲೂಕಿನ ವಿವಿಧೆಡೆ ಚಿರತೆ ಓಡಾಟ ಕಂಡುಬಂದಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎರಡು ಕಡೆ ಬೋನು…

24 hours ago

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮಾಡೂರು ಯೂಸುಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ…

24 hours ago