ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಮಾಣಿಮಜಲು ನಿವಾಸಿ ಹೂವಿನ ವ್ಯಾಪಾರಿ ಜಯ ಕುಮಾರ್ ಮತ್ತು ಜಯಶ್ರೀ ದಂಪತಿಗಳ ನೇತೃತ್ವದ ಬಳಗವು ಕಳೆದ 20 ವರ್ಷಗಳಿಂದ ಯಾವುದೇ ಪ್ರತಿ ಫಲಾಫೇಕ್ಷೆ ಪಡೆಯದೆ ಕರಾವಳಿ ಭಾಗದ ಎಲ್ಲಾ ಕಡೆಗಳಲ್ಲಿನ ಅಫೇಕ್ಸಿತ ಭಕ್ತರನ್ನು ಒಟ್ಟುಗೂಡಿಸಿಕೊಂಡು ದೇಶದ ವಿವಿಧ ಪುಣ್ಯ ತೀರ್ಥ ಕ್ಷೆತ್ರಗಳನ್ನು ಭೇಟಿ ಮಾಡಿಸಿ ದೇವರ ದರ್ಶನ ಭಾಗ್ಯವನ್ನು ತೋರಿಸಿ ಕೊಟ್ಟವರು.
ಅದರಂತೆ 21 ನೇ ವರ್ಷದಲ್ಲಿ ಹಮ್ಮಿಕೊಂಡ ಪುಣ್ಯ ತೀರ್ಥ ಕ್ಷೆತ್ರಗಳಲ್ಲಿ ನೇಪಾಲ ದೇಶದಲ್ಲಿ ಇರುವ ಚೀನಾ ಗಡಿ ಭಾಗದಲ್ಲಿನ ಮುಕ್ತಿನಾಥ ದೇವಸ್ಥಾನವೂ ಒಂದಾಗಿರುತ್ತದೆ.
ಅದರಂತೆ ಜಯಕುಮಾರ್ ನೇತೃತ್ವ ತಂಡದಲ್ಲಿನ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗದ ಸುಮಾರು 117 ಮಂದಿ ಭಕ್ತರು ಒರಿಸ್ಸಾದ ಪುರಿ ಜಗನಾಥ ದೇವಾಲಯ, ಜಾರ್ಕಂಡ್ ನಲ್ಲಿನ ಬಾಬಾ ಬೈದ್ಯಾನಾಥ ದೇವಸ್ಥಾನ, ನೇಪಾಲದ ಜನಕಗಿರಿಯ ಸೀತಾಮಾತಾ ಮಂದಿರ, ಪಶುಪತಿ ದೇವಾಲಯ ದರ್ಶನ್ ಪಡೆದುಕೊಂಡು ಪರಮ ಪವಿತ್ರ ಕ್ಷೆತ್ರವಾದ ಮುಕ್ತಿನಾಥನ.
ದರ್ಶನಕ್ಕೆಂದು ಹೊರಟು ರಸ್ತೆ ಸಾಗುವ ಸಂದರ್ಭದಲ್ಲಿ ದೊಡ್ಡದಾದೊಂದು ಗುಡ್ಡವೊಂದು ಜರಿದು ಬಿದ್ದು ಮುಕ್ತಿನಾಥ ದೇವಸ್ಥಾನ ಸಂಚಾರಕ್ಕೆ ಅಡಚಣೆಯಾಗಿತ್ತು.
ಮಾರ್ಗ ಮದ್ಯೆ ಭಕ್ತರನೊಳಗೊಂಡ ಬಸ್ ಗಳು ನಿಂತಿರುವಾಗ ದೊಡ್ಡ ದೊಡ್ಡ ಬಂಡೆಕಲ್ಲುಗಳು ಉರುಳಿಬಿದ್ದು ಬಸ್ಸಿನ ಮೇಲೆ ಬಿದ್ದುದರಿಂದ ಸ್ವಲ್ಪದರಲ್ಲೇ ಕೆಳಗಿರುವ ಭಕ್ತರು ಪ್ರಾಣಪಾಯದಿಂದ ಪಾರಾಗಿರುವುದು ಪವಾಡವೇ ಸರಿ,
ಕೆಲವೊಂದು ಕಡೆಗಳಲ್ಲಿ ರಸ್ತೆಯು ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು ಪ್ರಯಾಣಿಕರು ತುಂಬಿಕೊಂಡಿರುವ ಬಸ್ಸುಗಳನ್ನು ಹಗ್ಗ ಕಟ್ಟಿ ಎಲೆದಾಡಿ, ದೂಡಿಕೊಂಡು ಹೋಗಿರುವುದು.
ಇಂತಹ ಪ್ರಾಕ್ರತೀಕ ವಿಕೋಪದ ಭಯಾನಕ ಸಂಕಷ್ಟ ಹಾದಿಯಲ್ಲೂ ಭಕ್ತರಿಗೆ ಧೈರ್ಯ ತುಂಬಿಸಿದ ಜಯಕುಮಾರ್ ರವರು, ಹಾಗೇನೇ ವಾಹನ ಚಾಲಕರೂ ಸಮೇತ ಇದಕ್ಕೆ ಸಾಥ್ ನೀಡಿರುವುದರಿಂದ ಕರಾವಳಿಯ ತುಳುನಾಡ 117 ಮಂದಿ ಭಕ್ತರು ಜೀವದ ಹಂಗು ತೊರೆದು ನೇಪಾಲ ಮುಕ್ತಿನಾಥ ದೇವರ ದರ್ಶನ ಪಡೆದು ಅಯೋದ್ಯೆ ದತ್ತ ಪ್ರಯಾಣ ಬೆಳೆಸಿದರು.
ಮುಂದೆ ಕಾಶಿ ವಿಶ್ವನಾಥ ದೇವಾಲಯ, ವೈಷ್ಣನೋ ದೇವಿ ದರ್ಶನ್ ಮುಗಿಸಿ ಮಂಗಳೂರಿಗೆ ವಾಪಸ್ ಅಗಲಿರುವರು ಎಂದೂ ತೆರಲಿರುವ ಭಕ್ತರೋರ್ವರು ಮಾಹಿತಿ ನೀಡಿದ್ದಾರೆ.
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಅವರು ಇಂದು ನಿಧನರಾಗಿದ್ದಾರೆ. ಕಳೆದ ರಾತ್ರಿ ಸಮಾರಂಭವೊಂದರಲ್ಲಿ…
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ…
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…
ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…
ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…