ಬೆಂಗಳೂರು: ವಿಧಾನಸೌಧದಲ್ಲಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ನಲ್ಲಿ ಚಾಕು ಪತ್ತೆಯಾಗಿದೆ. ಇತ್ತೀಚೆಗೆ ನಡೆದಿದ್ದ ಭದ್ರತಾ ಲೋಪ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಒದಗಿಸಲಾಗಿದ್ದ ಬಿಗಿಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ತೀವ್ರ ತಪಾಸಣೆಗೊಳಪಡಿಸುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ನಲ್ಲಿ ಚಾಕು ಕಂಡುಬಂದಿದೆ. ವಿಧಾನಸೌಧದ ಪೂರ್ವ ಬಾಗಿಲಿನ ಮೂಲಕ ಈ ಮಹಿಳೆ ಒಳ ಪ್ರವೇಶಿಸಿದ್ದರು. ಬಾಗಿಲಲ್ಲೇ ಇರುವ ಬ್ಯಾಗೇಜ್ ಸ್ಕ್ಯಾನಿಂಗ್ ಮಷಿನ್ನಲ್ಲಿ ಇವರ ಬ್ಯಾಗ್ಅನ್ನು ಸ್ಕ್ಯಾನಿಂಗ್ಗೆ ಒಳಪಡಿಲಾಗಿತ್ತು. ಇದರಿಂದಾಗಿ ಸ್ವಲ್ಪ ಹೊತ್ತು ತಳಮಳದ ವಾತಾವರಣ ಸೃಷ್ಟಿಯಾಯಿತು.



