ಉಳ್ಳಾಲ;ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ರಜತ ಸಂಭ್ರಮ ಆಚರಣೆ ಕಾರ್ಯಕ್ರಮ ಉಳ್ಳಾಲದ ಅಬ್ಬಕ್ಕ ವೃತ್ತದ ಬಳಿ ನಡೆಯಿತು.

ಕಾರ್ಗಿಲ್ ವಿಜಯೋತ್ಸವ ರಜತ ಸಂಭ್ರಮ ಗೌರವ ನ್ನು ನಿವೃತ್ತ ಯೋಧ ಸಂದೀಪ್ ಶೆಟ್ಟಿ ಕೊಲ್ಯ ರವರಿಗೆ ನೀಡಲಾಯಿತು. ಬಳಿಕ ಮಾತನಾಡಿದ ಅವರು ಭಾರತೀಯ ಸೇನೆಯ ಶೌರ್ಯವನ್ನು ಪಸರಿಸಿದ ಕಾರ್ಗಿಲ್ ಯುದ್ದದ ವಿಜಯದ ದಿನ ಅಮೃತ ದಿನವಾಗಿದೆ. ದೇಶದ ಗಡಿಯಲ್ಲಿ ತನ್ನ ಜೀವದ ಹಂಗು ತೊರೆದು ಜನ ನೆಮ್ಮದಿಯಿಂದ ಬದುಕುವ ವಾತಾವರಣ ಕಲ್ಪಿಸುವ ಸೈನ್ಯದ ಸ್ಮರಣೆ ಶ್ಲಾಘನೀಯ ಎಂದು ಹೇಳಿದರು.
ರಾಜ್ಯ ಬಿ.ಜೆ.ಪಿ. ಮೀನುಗಾರರ ಪ್ರಕೋಷ್ಠದ ಸಹ ಸಂಚಾಲಕರಾದ ಯಶವಂತ ಅಮೀನ್ ಮಾತನಾಡಿ, ದೇಶ ಕಾಯುವ ಸೈನಿಕರಿಂದ ಹಿಡಿದು ಸಮುದ್ರ ತಟದಲ್ಲಿ ಮೀನುಗಾರಿಕೆ ನಡೆಸುವವರೂ ಯೋಧರೇ. ಜನರನ್ನು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಿಸಲು ಜೀವನ ತ್ಯಾಗ ನಡೆಸುವ ಯೋಧರು ನಿಜಕ್ಕೂ ಸ್ಮರಣೀಯರು. ಪತ್ರಕರ್ತರು ತಮ್ಮ ಸೇವೆಯ ಜೊತೆಎಗ ಮಾನವೀಯತೆಯ ಕಾರ್ಯವನ್ನು ಕೈಗೊಂಡಿರುವುದು ಶ್ಲಾಘನೀಯ. ಶಿರೂರು ದುರಂತದ ಸ್ಥಳದಲ್ಲಿ ಮಾನವೀಯ ಸ್ಪಂಧನೆಗೈದ ಪತ್ರಕರ್ತರೆಲ್ಲರ ಕಾರ್ಯ ಇತರರಿಗೆ ಸ್ಪೂರ್ತಿ.

ಪತ್ರಕರ್ತ ಶಶಿಬೆಳ್ಳಾಯರು ಮಾತನಾಡಿ ಮಾನವೀಯ ಮೌಲ್ಯಗಳಿಗೆ ಜಬೆಲೆಕೊಟ್ಟು ಮಾನವೀಯತೆಯ ಸೇವೆಗೆ ಎಲ್ಲರೂ ಒಗ್ಗೂಡಿದಾಗ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ. ಶಿರೂರು ಉಳುವೆರೆ ಗ್ರಾಮದಲ್ಲಿನ ನಿರಾಶ್ರಿತರಿಗೆ ಮುಂದೆಯೂ ನಮ್ಮಿಂದಾಗುವ ಸೇವೆಯನ್ನು ನೀಡಲು ನಿರ್ಧರಿಸಿದ್ದು, ಎಲ್ಲರ ಸಹಕಾರ ಅಗತ್ಯ ಎಂದರು.ಈ ಸಂಧರ್ಭದಲ್ಲಿ ಶೀರೂರು ಗುಡ್ಡಕುಸಿತದಲ್ಲಿ ಮಡಿದ ಮೃತದೇಹ ವನ್ನು ಸಾಗಿಸಲು ಸಹಕರಿಸಿದ ಪತ್ರಕರ್ತರಾದ ಮೋಹನ್ ಕುತ್ತಾರು, ಶಿವಶಂಕರ್ , ಆರೀಫ್ ಯು.ಆರ್ ಕಲ್ಕಟ್ಟ, ಶಶಿ ಬೆಳ್ಳಾಯರು ಮತ್ತು ಗಿರೀಶ್ ಮಳಲಿ ಇವರನ್ನು ಅಭಿನಂದಿಸಲಾಯಿತು.
ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಬಿ.ಜೆ.ಪಿ. ಪ್ರಕೋಷ್ಠಗಳ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಬಿ.ಜೆ.ಪಿ. ಮಂಡಲ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಮಹಿಳಾ ಮೋರ್ಚಾದ ಅಧ್ಯಕ್ಷೆ ಮಾಧವಿ ಉಳ್ಳಾಲ, ಪ್ರತಿಷ್ಠಾನದ ಗೌರವಾಧ್ಯಕ್ಷರಾದ ರಾಕೇಶ್ ಕುಮಾರ್, ಉಪಾಧ್ಯಕ್ಷರಾದ ಮಾಧವ ಉಳ್ಳಾಲ, ಗೋಪಿನಾಥ್ ಬಗಂಬಿಲ, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಕೋಶಾಧಿಕಾರಿ ಹರೀಶ್ ಅಂಬ್ಲಮೊಗರು, ಕಾರ್ಗಿಲ್ ವಿಜಯೋತ್ಸವದ ಸಂಚಾಲಕರಾದ ದೀಕ್ಷಿತ್ ನಿಸರ್ಗ, ವೃಕ್ಷಾಂಕುರ ರಕ್ಷಾ ಸಂಚಾಲಕರು ಪ್ರಸಾದ್ ಕೊಂಡಾಣ, ಗೂಡುದೀಪ ಸಂಚಾಲಕರಾದ ದಾಮೋದರ ನಡಾರ್, ಗುರುವಂದನೆ ಸಂಚಾಲಕರಾದ ರಾಜೇಂದ್ರ ಸೇವಂತಿಗುಡ್ಡೆ, ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣ ಪೊನ್ನೊತೊಡು, ಪ್ರಮುಖರಾದ ಮೋಹನ್ ಸಾಲ್ಯಾನ್, ಸುಧಾಕರ್ ಬಜಾಲ್, ನವೀನ್ ಎ.ಕೆ., ರಮೇಶ್ ಸಾಮಾನಿ, ಶರತ್ ಭಂಡಾರಿ, ರಾಧಾಕಾಂತ್ ಪಡಿಯಾರ್, ಚಂದ್ರಶೇಖರ ಕೊಲ್ಯ, ಸಂಪತ್ ಕುಕ್ಯಾನ್ ಭಂಡಾರಮನೆ, ರಾಜೇಶ್ ಉಳ್ಳಾಲ ಬೈಲ್, ನಟರಾಜ್ ತೊಕ್ಕೊಟು
ಪ್ರತಿಷ್ಠಾನದ ಉಪಾಧ್ಯಕ್ಷರಾದ ಪ್ರವೀಣ್ ಬಸ್ತಿ , ಕಾರ್ಯದರ್ಶಿ ಕಿರಣ್ ಕೊಲ್ಯ .ಇತರರು ಉಪಸ್ಥಿತರಿದ್ದರು.



