ಜ್ಞಾನ

ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ರಜತ ಸಂಭ್ರಮ ಆಚರಣೆ

ಉಳ್ಳಾಲ;ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ರಜತ ಸಂಭ್ರಮ ಆಚರಣೆ ಕಾರ್ಯಕ್ರಮ ಉಳ್ಳಾಲದ ಅಬ್ಬಕ್ಕ ವೃತ್ತದ ಬಳಿ ನಡೆಯಿತು.

 

ಕಾರ್ಗಿಲ್ ವಿಜಯೋತ್ಸವ ರಜತ ಸಂಭ್ರಮ ಗೌರವ ನ್ನು ನಿವೃತ್ತ ಯೋಧ ಸಂದೀಪ್‌ ಶೆಟ್ಟಿ ಕೊಲ್ಯ‌ ರವರಿಗೆ ನೀಡಲಾಯಿತು. ಬಳಿಕ ಮಾತನಾಡಿದ ಅವರು ಭಾರತೀಯ ಸೇನೆಯ ಶೌರ್ಯವನ್ನು ಪಸರಿಸಿದ ಕಾರ್ಗಿಲ್‌ ಯುದ್ದದ ವಿಜಯದ ದಿನ ಅಮೃತ ದಿನವಾಗಿದೆ. ದೇಶದ ಗಡಿಯಲ್ಲಿ ತನ್ನ ಜೀವದ ಹಂಗು ತೊರೆದು ಜನ ನೆಮ್ಮದಿಯಿಂದ ಬದುಕುವ ವಾತಾವರಣ ಕಲ್ಪಿಸುವ ಸೈನ್ಯದ ಸ್ಮರಣೆ ಶ್ಲಾಘನೀಯ ಎಂದು ಹೇಳಿದರು.

ರಾಜ್ಯ ಬಿ.ಜೆ.ಪಿ. ಮೀನುಗಾರರ ಪ್ರಕೋಷ್ಠದ ಸಹ ಸಂಚಾಲಕರಾದ ಯಶವಂತ ಅಮೀನ್ ಮಾತನಾಡಿ, ದೇಶ ಕಾಯುವ ಸೈನಿಕರಿಂದ ಹಿಡಿದು ಸಮುದ್ರ ತಟದಲ್ಲಿ ಮೀನುಗಾರಿಕೆ ನಡೆಸುವವರೂ ಯೋಧರೇ. ಜನರನ್ನು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಿಸಲು ಜೀವನ ತ್ಯಾಗ ನಡೆಸುವ ಯೋಧರು ನಿಜಕ್ಕೂ ಸ್ಮರಣೀಯರು. ಪತ್ರಕರ್ತರು ತಮ್ಮ ಸೇವೆಯ ಜೊತೆಎಗ ಮಾನವೀಯತೆಯ ಕಾರ್ಯವನ್ನು ಕೈಗೊಂಡಿರುವುದು ಶ್ಲಾಘನೀಯ. ಶಿರೂರು ದುರಂತದ ಸ್ಥಳದಲ್ಲಿ ಮಾನವೀಯ ಸ್ಪಂಧನೆಗೈದ ಪತ್ರಕರ್ತರೆಲ್ಲರ ಕಾರ್ಯ ಇತರರಿಗೆ ಸ್ಪೂರ್ತಿ.

ಪತ್ರಕರ್ತ ಶಶಿಬೆಳ್ಳಾಯರು ಮಾತನಾಡಿ ಮಾನವೀಯ ಮೌಲ್ಯಗಳಿಗೆ ಜಬೆಲೆಕೊಟ್ಟು ಮಾನವೀಯತೆಯ ಸೇವೆಗೆ ಎಲ್ಲರೂ ಒಗ್ಗೂಡಿದಾಗ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ. ಶಿರೂರು ಉಳುವೆರೆ ಗ್ರಾಮದಲ್ಲಿನ ನಿರಾಶ್ರಿತರಿಗೆ ಮುಂದೆಯೂ ನಮ್ಮಿಂದಾಗುವ ಸೇವೆಯನ್ನು ನೀಡಲು ನಿರ್ಧರಿಸಿದ್ದು, ಎಲ್ಲರ ಸಹಕಾರ ಅಗತ್ಯ ಎಂದರು.ಈ ಸಂಧರ್ಭದಲ್ಲಿ ಶೀರೂರು ಗುಡ್ಡಕುಸಿತದಲ್ಲಿ ಮಡಿದ ಮೃತದೇಹ ವನ್ನು ಸಾಗಿಸಲು ಸಹಕರಿಸಿದ ಪತ್ರಕರ್ತರಾದ ಮೋಹನ್ ಕುತ್ತಾರು, ಶಿವಶಂಕರ್‌ , ಆರೀಫ್‌ ಯು.ಆರ್‌ ಕಲ್ಕಟ್ಟ, ಶಶಿ ಬೆಳ್ಳಾಯರು ಮತ್ತು ಗಿರೀಶ್ ಮಳಲಿ ಇವರನ್ನು ಅಭಿನಂದಿಸಲಾಯಿತು.

ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜೀವನ್‌ ಕುಮಾರ್‌ ತೊಕ್ಕೊಟ್ಟು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಬಿ.ಜೆ.ಪಿ. ಪ್ರಕೋಷ್ಠಗಳ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಬಿ.ಜೆ.ಪಿ. ಮಂಡಲ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಮಹಿಳಾ ಮೋರ್ಚಾದ ಅಧ್ಯಕ್ಷೆ ಮಾಧವಿ ಉಳ್ಳಾಲ, ಪ್ರತಿಷ್ಠಾನದ ಗೌರವಾಧ್ಯಕ್ಷರಾದ ರಾಕೇಶ್ ಕುಮಾರ್, ಉಪಾಧ್ಯಕ್ಷರಾದ ಮಾಧವ ಉಳ್ಳಾಲ, ಗೋಪಿನಾಥ್ ಬಗಂಬಿಲ, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಕೋಶಾಧಿಕಾರಿ ಹರೀಶ್ ಅಂಬ್ಲಮೊಗರು, ಕಾರ್ಗಿಲ್ ವಿಜಯೋತ್ಸವದ ಸಂಚಾಲಕರಾದ ದೀಕ್ಷಿತ್ ನಿಸರ್ಗ, ವೃಕ್ಷಾಂಕುರ ರಕ್ಷಾ ಸಂಚಾಲಕರು ಪ್ರಸಾದ್ ಕೊಂಡಾಣ, ಗೂಡುದೀಪ ಸಂಚಾಲಕರಾದ ದಾಮೋದರ ನಡಾರ್, ಗುರುವಂದನೆ ಸಂಚಾಲಕರಾದ ರಾಜೇಂದ್ರ ಸೇವಂತಿಗುಡ್ಡೆ, ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣ ಪೊನ್ನೊತೊಡು, ಪ್ರಮುಖರಾದ ಮೋಹನ್ ಸಾಲ್ಯಾನ್, ಸುಧಾಕರ್ ಬಜಾಲ್, ನವೀನ್ ಎ.ಕೆ., ರಮೇಶ್ ಸಾಮಾನಿ, ಶರತ್ ಭಂಡಾರಿ, ರಾಧಾಕಾಂತ್ ಪಡಿಯಾರ್, ಚಂದ್ರಶೇಖರ ಕೊಲ್ಯ, ಸಂಪತ್ ಕುಕ್ಯಾನ್ ಭಂಡಾರಮನೆ, ರಾಜೇಶ್ ಉಳ್ಳಾಲ ಬೈಲ್, ನಟರಾಜ್ ತೊಕ್ಕೊಟು
ಪ್ರತಿಷ್ಠಾನದ ಉಪಾಧ್ಯಕ್ಷರಾದ ಪ್ರವೀಣ್ ಬಸ್ತಿ , ಕಾರ್ಯದರ್ಶಿ ಕಿರಣ್ ಕೊಲ್ಯ .ಇತರರು ಉಪಸ್ಥಿತರಿದ್ದರು.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಅವರು ಇಂದು ನಿಧನರಾಗಿದ್ದಾರೆ. ಕಳೆದ ರಾತ್ರಿ ಸಮಾರಂಭವೊಂದರಲ್ಲಿ…

5 days ago

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ…

5 days ago

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…

5 days ago

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…

5 days ago

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…

5 days ago

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…

5 days ago