ಹಾಸನ: ಅರಸೀಕೆರೆ ತಾಲೂಕು ಜಾವಗಲ್ ಹೋಬಳಿ ಕಲ್ಯಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಗೇರುಮರ ಗ್ರಾಮದಲ್ಲಿ ಅಕ್ರಮವಾಗಿ ಆರಂಭಿಸಲು ಮುಂದಾಗಿರುವ ಮದ್ಯದ ಅಂಗಡಿಗೆ ನಿಲ್ಲಿಸಬೇಕು ಎಂದು ಆಗ್ರಹಿಸಿ ಸುತ್ತಮುತ್ತಲ ಗ್ರಾಮಸ್ಥರು ಡಿಸಿ ಕಚೇರಿ ಎದುರು ಮಳೆ ನಡುವೆಯೂ ಪ್ರತಿಭಟನೆ ನಡೆಸಿದರು.

ಕಾಲ್ಯಾಡಿ, ಹಳೆಕಾಲ್ಯಾಡಿಮುದ್ದು ಲಿಂಗನ ಕೊಪ್ಪಲು, ಸಿಂಗಟಿಕೆರೆ, ವೃಂದಾವನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಸಂಖ್ಯೆಯ ಜನರು ಡಿಸಿ ಕಚೇರಿ ಎದುರು ಜಮಾಯಿಸಿ ಧರಣಿ ನಡೆಸುವ ಮೂಲಕ ಮದ್ಯದ ಅಂಗಡಿ ನಡೆಸಲು ಬಿಡಬಾರದು ಎಂದು ಆಗ್ರಹಿಸಿದರು.
ಈ ಬಗ್ಗೆ ಕಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್ ಮಾತನಾಡಿ, ಈ ಅಕ್ರಮ ಮದ್ಯದ ಅಂಗಡಿಯಿಂದ ಸುತ್ತಮುತ್ತಲ ಗ್ರಾಮಸ್ಥರಿಗೆ ತೊಂದರೆ ಆಗಿತ್ತಿದ್ದು ಗ್ರಾಮ ಪಂಚಾಯಿತಿ ಅನುಮತಿ ಇಲ್ಲದಿದ್ದರೂ ಮದ್ಯದ ಅಂಗಡಿ ಆರಂಭಿಸಲು ಮುಂದಾಗಿರುವುದು ಖಂಡನೀಯ.
ಇದರಲ್ಲಿ ಅಧಿಕಾರಿಗಳು ಶಾಮೀಲಾಗಿ ಅಕ್ರಮವಾಗಿ ಮದ್ಯದ ಅಂಗಡಿ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ, ಸುಮಾರು 6 ತಿಂಗಳ ಹಿಂದೆ ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಅಬಕಾರಿ ಆಯುಕ್ತರಿಗೆ ಮನವಿ ಮಾಡಿದ್ದು ಆದಾಗ್ಯೂ ಮತ್ತೆ ಮದ್ಯದ ಅಂಗಡಿ ತೆರೆಯಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ ಕೂಡಲೇ ಇದಕ್ಕೆ ಬ್ರೇಕ್ ಹಾಕದೆ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು..
ಅಕ್ರಮ ಮದ್ಯದ ಅಂಗಡಿಗಳಿಂದ ಮಕ್ಕಳು ಕುಡಿತಕ್ಕೆ ದಾಸರಾಗುತ್ತಿದ್ದಾರೆ ಅಲ್ಲದೆ ಪ್ರತೀ ಕುಟುಂಬಗಳಲ್ಲಿ ಗಲಾಟೆ, ಘರ್ಷಣೆಗಳು ನಡೆಯುತ್ತಿದ್ದು ಗ್ರಾಮ ಪಂಚಾಯಿತಿಯ ಸಭೆಯಲ್ಲಿ ಚರ್ಚಿಸಿ ಮದ್ಯದ ಅಂಗಡಿ ತೆರವಿದೆ ವಿರೋಧ ವ್ಯಕ್ತ ಪಡಿಸಿದರೂ ಅದನ್ನು ಮೀರಿ ಅಂಗಡಿ ತೆರೆಯಲು ಮುಂದಾಗಿದ್ದಾರೆ ಇದಕ್ಕೆ ಕಡಿವಾಣ ಹಾಕಬೇಕು ಎಂದರು
ಈಗಾಗಲೇ ಗ್ರಾಮದಲ್ಲಿ ಅಕ್ರಮವಾಗಿ ಈ ಹಿಂದಿನಿಂದಲೂ ಮಧ್ಯದ ಅಂಗಡಿ ನಡೆಯುತ್ತಿದ್ದು ಅದರ ವಿರುದ್ಧವೂ ಕ್ರಮ ಕೈಗೊಳ್ಳಬೇಕು, ಇದರ ಜೊತೆ ಮತ್ತೊಂದು ಅಂಗಡಿ ತೆರೆಯಲು ಮುಂದಾಗಿರುವುದು ಖಂಡನೀಯ ಇದರಿಂದ ಸ್ಥಳೀಯರಿಗೆ ಸಾಕಷ್ಟು ತೊಂದರೆ ಆಗಲಿದೆ ಆದುದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಗಮನಹರಿಸಿ ಅಕ್ರಮ ಮಧ್ಯದ ಅಂಗಡಿಗಳಿವೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಎಂ.ಆರ್ ಕುಮಾರ್, ಕೆ.ವಿ ಶಿವಮೂರ್ತಿ, ರಮೇಶ್ ಎಚ್.ಎಸ್, ದ್ರಕ್ಷಾಯಿಣಿ ಅಂಬರೀಶ್, ಕೆ.ಎಸ್ ಲೋಕೇಶ್, ಧನಂಜಯ್, ಮಹೇಶ್ವರಪ್ಪ, ಚಂದ್ರಶೇಖರ್, ಹನುಮಂತ, ಮಹೇಶ್, ಕುಮಾರ್ ಸೇಂದಿ, ಮಖಂದರ್ ಪಾಷಾ, ರಾಜು, ಬಸವರಾಜ್ ಮಿಲ್, ಇತರರು ಇದ್ದರು



