ಉಡುಪಿ: ದೇವಾಲಯದ ಚಿನ್ನದ ಒಡವೆ ಖದೀಮರಿಗೆ ತಕ್ಕ ಶಿಕ್ಷೆಯಾಗಿದೆ. ದೇವಸ್ಥಾನದ ಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶಿಸಿ, ದೇವರಿಗೆ ಸಂಬಂಧಪಟ್ಟ ಚಿನ್ನದ ಒಡವೆಗಳನ್ನು ಕಳವು ಮಾಡಿದ ಆರೋಪಿಗಳಿಗೆ ನಗರದ ಪ್ರಧಾನ ಸಿ. ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
2015 ಸೆಪ್ಟೆಂಬರ್ 21 ರಂದು ನರಸಿಂಹರಾಜು
ರಾಜು ಮತ್ತು ಮೊಹಮ್ಮದ್ ಶಬೀರ್ ಎಂಬವರು ಉಡುಪಿ ತಾಲೂಕು ಶಿರೂರು ಗ್ರಾಮದ ಶ್ರೀ ಮಹಾಲಸಾ ನಾರಾಯಣೀ ದೇವಿ ದೇವಸ್ಥಾನದ ಗರ್ಭಗುಡಿಯ ಬಾಗಿಲಿನ ಬೀಗ ಮುರಿದು, ಒಳ ಪ್ರವೇಶಿಸಿ, ದೇವರಿಗೆ ಸಂಬಂಧಿಸಿದ ಒಟ್ಟು 8,66,800
ರೂ. ಮೌಲ್ಯದ 339,940 ಗ್ರಾಂ ತೂಕದ ಚಿನ್ನದ
ಒಡವೆಗಳನ್ನು ಕಳವು ಮಾಡಿರುವ ಹಿನ್ನೆಲೆ, ಉಡುಪಿ ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ವಿರುದ್ಧ
ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದರು.



