ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡು ಇದರ ಅಧ್ಯಕ್ಷರಾಗಿ ಸತೀಶ್ ಭಂಡಾರಿ ಕುಳತ್ತಬೆಟ್ಟು ಅವರು ಮತ್ತು ಅವರ ತಂಡ ಮತ್ತೆ ಮುಂದಿನ ಅವಧಿಗೆ ಸರ್ವಾನುಮತದಿಂದ ಪುನರಾಯ್ಕೆಯಾಗಿದೆ.

ಕಾರ್ಯದರ್ಶಿಯಾಗಿ ಸತೀಶ್ ಶೆಟ್ಟಿ ಮೊಡಂಕಾಪು, ಉಪಾಧ್ಯಕ್ಷರಾಗಿ ಸುರೇಶ್ ಕುಮಾರ್ ಕೈಕಂಬ, ಜೊತೆ ಕಾರ್ಯದರ್ಶಿಯಾಗಿ ಬಾಸ್ಕರ್ ಟೈಲರ್ ಕಾಮಾಜೆ, ಕೋಶಾಧಿಕಾರಿಯಾಗಿ ಶ್ರೀಧರ್ ಶೆಣೈ ಅವರ ಜೊತೆ ಕಾರ್ಯಕಾರಿ ಸಮಿತಿಯನ್ನು ಮುಂದುವರಿಸಲಾಗಿದೆ. 45 ನೇ ವರ್ಷದ ಗಣೇಶೋತ್ಸವದ ವಿಜ್ರಂಭಣೆಯ ಆಚರಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಗಿದೆ.



