ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷದ್ ಇದರ ಸ್ಥಾಪನಾ ದಿನದ ಪ್ರಯುಕ್ತ ಹಲವು ವರುಷಗಳಿಂದ ಪುತ್ತೂರುನಲ್ಲಿ ವಿಜೃಂಭಣೆಯಿಂದ ನಡೆಯುವ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ 14ನೇ ವರುಷದ ಆಮಂತ್ರಣ ಪತ್ರಿಕೆ ಬಿಡುಗಡೆಯು ಇಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಡಾ.ಕೃಷ್ಣಪ್ರಸನ್ನ,ಜಿಲ್ಲಾ ಕೋಶಾಧಿಕಾರಿ ಮಾಧವ ಪೂಜಾರಿ, ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ, ಸಮಿತಿಯ ಸಂಚಾಲಕರಾದ ಪುತ್ತೂರು ಉಮೇಶ್ ನಾಯಕ್,ಉಪಾಧ್ಯಕ್ಷರುಗಳಾದ ವಿರೂಪಾಕ್ಷ ಭಟ್ ಮಚ್ಚಿಮಲೆ,ಮೋಹನ್ ಮುತ್ಲಾಜೆ,ಮತ್ತು ಶ್ರೀಮತಿ ವಿ.ಪ್ರಭಾವತಿ ಬೊಳುವಾರು, ಸಮಿತಿಯ ಕಾರ್ಯದರ್ಶಿ ಜಗದೀಶ್ ನಿರ್ಪಾಜೆ,ಕೋಶಾಧಿಕಾರಿಯಾಗಿ ಹರೀಶ್ ಕುಮಾರ್ ದೋಳ್ಪಾಡಿ,ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ,ಜಿಲ್ಲಾ ಸಹ ಸತ್ಸಂಗ ಪ್ರಮುಖ್ ರವಿಕುಮಾರ್ ಕೈತ್ತಡ್ಕ,ಸಮಿತಿಯ ಸಹ ಕಾರ್ಯದರ್ಶಿ ಅನಿಲ್ ಇರ್ದೆ,ನಗರ ಕಾರ್ಯದರ್ಶಿ ಜಿತೇಶ್ ಬಲ್ನಾಡ್,ಪ್ರೇಮಲತಾ ರಾವ್,ಸುಕೀರ್ತಿ,ಚೇತನ್ ಬೊಳುವಾರು,ಸಂದೀಪ್ ಸಿಂಗಾಣಿ, ಆಜಿತ್ ಕೆಯ್ಯೂರು,ಆಶೋಕ್ ಬ್ರಹ್ಮನಗರ,ಮನೋಹರ್ ಕಲ್ಲಾರೆ,
ಜೀವಂಧರ್ ಜೈನ್,ದಿನೇಶ್ ಪಂಜಿಗ,ಕಿರಣ್ ಶಂಕರ್ ಮಲ್ಯ,ನಾಗೇಶ್ ನೈತಾಡಿ,ಕಾರ್ತಿಕ್ ಭಕ್ತ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.



