ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ನ ಕುರುಡಿಕಾಡ್ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನವವಿವಾಹಿತೆ ಸಾವಿಗೀಡಾಗಿರುವ ಘಟನೆ ಸಂಭವಿಸಿದೆ. ಅನಿಶಾ(20) ಮೃತ ದುರ್ದೈವಿ. ಇವರು ಪುಥುಕೋಡ್‌ನ ಕಣ್ಣನ್ನೂರ್ ಮೂಲದವರು. ಕೊಯಮತ್ತೂರು ಮೂಲದ ಆಕೆಯ ಪತಿ ಶಾಕಿರ್ (32) ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅನಿಶಾ ಮತ್ತು ಶಾಕೀರ್ ಇದ್ದ ಬೈಕ್ ಪಲಕ್ಕಾಡ್‌ನಿಂದ ಕೊಯಮತ್ತೂರಿಗೆ ತೆರಳಿತ್ತು. ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ಕಂಟೈನರ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಯುವತಿ ಅನಿಶಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಓಡಿಸುತ್ತಿದ್ದ ಶಾಕೀರ್‌ಗೆ ಗಂಭೀರ ಗಾಯವಾಗಿದೆ. ಅನಿಶಾ ಹಾಗೂ ಶಾಕಿರ್ ಕಳೆದ ಜೂನ್ 4ರಂದು ವಿವಾಹವಾಗಿದ್ದು, ದುರದೃಷ್ಟವಶಾತ್ ಒಂದೇ ತಿಂಗಳಿನಲ್ಲಿ ಅನಿಶಾ ಸಾವಿಗೀಡಾಗಿದ್ದಾರೆ.
 
								
 
															


