ಬಂಟ್ವಾಳ: ಮಾಣಿ ಸಮೀಪದ ಬೊಳ್ಳುಕಲ್ಲು ಎಂಬಲ್ಲಿ KSRTC ಬಸ್ ನಿಲುಗಡೆಗೊಳಿಸದೆ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿದ್ದು, ಸಮಸ್ಯೆ ಪರಿಹಾರಕ್ಕೆ ಬಂಟ್ವಾಳ ಶಾಸಕರಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಬಂಟ್ವಾಳ ತಾಲೂಕು ಪೆರಾಜಿ ಗ್ರಾಮದ ಬೊಳ್ಳುಕಲ್ಲು ಪ್ರದೇಶವು ಜನನಿಬಿಡ ಸ್ಥಳವಾಗಿದ್ದು ಇದು ಮಾಣಿಯಿಂದ ಸುಮಾರು 1.7ಕಿ ಮೀ ದೂರವಿದ್ದು, ಇಲ್ಲಿ ಹಲವಾರು ವಿದ್ಯಾರ್ಥಿಗಳು, ಉದ್ಯೋಗಸ್ಥರು ವ್ಯದ್ಯರು ಹೀಗೆ ಹಲವಾರು ಜನ ಬಸ್ಸಿಗಾಗಿ ಕಾಯುತ್ತಿರುತ್ತಾರೆ. ಈ ನಿಲ್ದಾಣದಲ್ಲಿ ಮೊದಲು ಎಲ್ಲಾ ಬಸ್ಸುಗಳ ನಿಲುಗಡೆಯಗುತ್ತಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬಸ್ ಸ್ಟಾಪ್ ಎಂಬ ನಾಮಫಲಕವನ್ನು ಅಳವಡಿಸಿರುತ್ತದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ ಇಲ್ಲಿದ್ದ ಬಸ್ ನಿಲ್ದಾಣ ಗಳನ್ನು ತೆರವು ಮಾಡಿದ್ದಲ್ಲದೆ, ನಿಲುಗಡೆ ಯ ನಾಮಫಲಕವನ್ನು ತೆಗೆದುಹಾಕಿದ್ದಾರೆ. ಆದರೆ ಇದೀಗ ಇಲ್ಲಿ ಯಾವುದೇ ಬಸ್ಸುಗಳನ್ನು ನಿಲುಗಡೆಗೊಳಿಸುತ್ತಿಲ್ಲ. ಅಲ್ಲದೆ ಈ ಪ್ರದೇಶವು ಪ್ರಸಿದ್ಧ ಶ್ರೀರಾಮಚಂದ್ರಪುರ ಮಠ, ಭಜನಾ ಮಂದಿರಗಳು, ಫ್ಯಾಕ್ಟರಿಗಳು ಇರುವ ಸ್ಥಳವಾಗಿರುತ್ತದೆ. ಆದ್ದರಿಂದ ಬೊಳ್ಳಕಲ್ಲು ಸ್ಥಳದಲ್ಲಿ ಎಲ್ಲಾ ಬಸ್ಸುಗಳನ್ನು ನಿಲುಗಡೆಗೊಳಿಸಲು ಕ್ರಮ ಕೈಗೊಳ್ಳಲು ಶಾಸಕರಿಗೆ
ಗ್ರಾಮಸ್ಥರು ಬೊಳ್ಳುಕಲ್ಲು ಭಾಗದ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಖಾಸಗಿ ಬಸ್ ನಿಲುಗಡೆಗೆ ಕ್ರಮ : ಬಸ್ ಮಾಲಕರ ಅಧ್ಯಕ್ಷ ಶಫೀಕ್ ಉಪ್ಪಿನಂಗಡಿ
ಖಾಸಗಿ ಬಸ್ ಗಳು ಕೂಡ ಇಲ್ಲಿ ಬಸ್ ಗಳನ್ನು ನಿಲ್ಲಿಸದೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ .
ಪ್ರತಿನಿತ್ಯ ಅನೇಕ ಜನ ಇಲ್ಲಿಂದ ಮಂಗಳೂರು ಸಹಿತ ಬೇರೆ ಬೇರೆ ಕಡೆಗಳಿಗೆ ಪ್ರಯಾಣಿಸುತ್ತಿದ್ದು, ಇತ್ತೀಚೆಗೆ ಪ್ರಯಾಣಿಕರಿಗೆ ಬಸ್ ಗಳು ನಿಲುಗಡೆ ನೀಡದೆ ಅನ್ಯಾಯ ಮಾಡುತ್ತಿದೆ. ಇಲ್ಲಿನ ಪ್ರಯಾಣಿಕರಿಗೆ ಬಸ್ ಗಳ ನಿರ್ವಾಹಕರ ವರ್ತನೆಯಿಂದ ತೊಂದರೆ ಉಂಟಾಗಿದ್ದು,ಈ ಬಗ್ಗೆ ಬಸ್ ಮಾಲಕರ ಸಂಘದ ಅಧ್ಯಕ್ಷರಿಗೆ ದೂರು ನೀಡಿದ್ದಾರೆ.
ಇದಕ್ಕೆ ಸ್ಪಂದಿಸಿದ ಅಧ್ಯಕ್ಷ ಶಫೀಕ್ ಅವರು, ಈಗಾಗಲೇ ಈ ಬಗ್ಗೆ ದೂರುಗಳು ನನ್ನ ಗಮನಕ್ಕೆ ಬಂದಿದೆ.
ನಿರ್ವಾಹಕರ ಉದಾಸೀನ ಮನೋಭಾವದಿಂದ ಮಾಲಕರ ಮೇಲೆ ಕೆಟ್ಟ ಅಭಿಪ್ರಾಯ ವ್ಯಕ್ತವಾಗಿದೆ. ಸಮಸ್ಯೆ ಯನ್ನು ಅರಿತಿದ್ದೇನೆ. ಅಧ್ಯಕ್ಷನ ನೆಲೆಯಲ್ಲಿ ಈ ಭಾಗದ ಪ್ರಯಾಣಿಕರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಅವರು, ಎಲ್ಲಾ ಬಸ್ ಮಾಲಕರ ಜೊತೆಗೆ ಈ ವಿಚಾರ ಪ್ರಸ್ತಾಪ ಮಾಡಿ, ಬಸ್ ಗಳ ನಿಲುಗಡೆಗೆ ಸೂಚನೆ ನೀಡುತ್ತೆನೆ ಎಂಬ ಭರವಸೆಯ ಮಾತುಗಳನ್ನು ನೀಡಿದ್ದಾರೆ.
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…