ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್, ರೋಟರಿ ಕ್ಲಬ್ ಬೈಕಂಪಾಡಿ, ಚೈತನ್ಯ ಐ-ನೀಡ್ಸ್, ಆಪತ್ಬಾಂಧವ ಸಮಾಜ ಸೇವಾ ಸಂಸ್ಥೆ, ಇವರ ವತಿಯಿಂದ ರಿಕ್ಷಾ ಹಾಗೂ ಟೆಂಪೋ ಚಾಲಕರಿಗೆ ಉಚಿತ ಕಣ್ಣಿನ ತಪಾಸಣೆ ನಡೆಯಿತು.
ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ ಸುಮಾರು 65 ಜನ ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕವನ್ನು ವಿಶ್ವಕರ್ಮ ಸಭಾಭವನ ಸುರತ್ಕಲ್ ಇಲ್ಲಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬಂಟರ ಸಂಘ ಸುರತ್ಕಲ್ ಇದರ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮಂಚೂರು, ಪ್ರಧಾನ ಕಾರ್ಯದರ್ಶಿ ಲೀಲಾದರ ಶೆಟ್ಟಿ ಕಟ್ಲ, ರೋಟರಿ ಕ್ಲಬ್ ಬೈಕಂಪಾಡಿ ಇದರ ಅಧ್ಯಕ್ಷ ರೋ lಹರೀಶ್ ಬಿ ಶೆಟ್ಟಿ, ಚೈತನ್ಯ ಐ ನೀಡ್ಸ್ ಇದರ ಮಾಲಕ ರೋ l ಯೋಗೀಶ್ ನಾಯಕ್, ಹಾಗೂ ರೋಟರಿ ಕ್ಲಬ್ ಸದಸ್ಯರಾದ ಗಂಗಾಧರ್ ಬಂಜನ್, ZL ಗಣೇಶ ಎಂ, ಸುಬೋಧ್ ದಾಸ್, ಕಿರಣ್ ರೈ, ಅಶೋಕ್ ಎನ್, ಭರತ್ ಶೆಟ್ಟಿ, ಲೋಕನಾಥ್ ಅಮೀನ್, ನವೀನ್ ಇಡ್ಯಾ, ಕವಿತಾ ಗಣೇಶ್ ಭಾಗವಹಿಸಿದ್ದರು. ಚೈತನ್ಯ ಐ ನೀಡ್ಸ್ ನ ಮಾಲಕ ಯೋಗೀಶ್ ನಾಯಕ್ ಕನ್ನಡಕವನ್ನು ಉಚಿತವಾಗಿ ಒದಗಿಸಿದ್ದರು. ಲೋಕಯ್ಯ ಶೆಟ್ಟಿ ಮುಂಚೂರು ಸ್ವಾಗತಿಸಿದರು. ಹರೀಶ್ ಬಿ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು . ನವೀನ್ ಇಡ್ಯಾ ಪ್ರಾರ್ಥನೆಗೈದರು. ಉಮೇಶ್ ಇಡ್ಯಾ ಧನ್ಯವಾದ ಸಮರ್ಪಿಸಿದರು.



