ಮಂಗಳೂರು: ಮಂಗಳೂರು ನಗರ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮುಳಿಹಿತ್ತುವಿನಲ್ಲಿ 2 ದಿನಗಳ ಹಿಂದೆ ಮಾಲೀಕನಿಂದಲೇ ಕೊಲೆಯಾದ ಕಾರ್ಮಿಕ ಗಜ್ಜಾನ್ ಯಾನೆ ಜಗ್ಗು ಎಂಬಾತನ ವಿಳಾಸ ಪತ್ತೆಗೆ ಪಾಂಡೇಶ್ವರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಉತ್ತರ ಭಾರತ ಮೂಲದವನು ಎನ್ನಲಾದ ಈತನ ವಾರಸುದಾರರು ಯಾರು ಎಂಬುದು ಇದುವರೆಗೆ ಗೊತ್ತಾಗಿಲ್ಲ. ಈತನನ್ನು ನಗರದಲ್ಲಿ ಗಜ್ವಾನ್ ಎಂದು ಕರೆಯಲಾಗುತ್ತಿತ್ತು. ಆದರೆ ಈತನ ನಿಜ ಹೆಸರೇನು ಎಂಬುದು ಕೂಡ ಯಾರಿಗೂ ತಿಳಿದಿಲ್ಲ.
ಕೊಲೆಯಾದ ಗಜ್ಜಾನ್ ಕಳೆದ ಮೂರು ವರ್ಷಗಳಿಂದ ಆರೋಪಿ ತೌಸಿಫ್ ಹುಸೇನ್ ಕೈ ಕೆಳಗೆ ಕೆಲಸ ಮಾಡುತಿದ್ದರು. ೨ ದಿನಗಳ ಹಿಂದೆಯಷ್ಟೇ ಕೊಲೆಯಾದ ಜಗ್ಗು ಸುಮಾರು 5.5 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ವ ದೃಢಕಾಯ ಶರೀರ, ಕಪ್ಪು ತಲೆ ಕೂದಲು, ಕುರುಚಲು ಗಡ್ಡ ಹೊಂದಿದ್ದರು.
ಇವರ ಸಂಬಂಧಿಕರು ಅಥವಾ ಪರಿಚಯಸ್ಥರಿದ್ದರೆ ಪಾಂಡೇಶ್ವರ ಠಾಣೆಯನ್ನು (0824-2220518) ಸಂಪರ್ಕಿಸುವಂತೆ
ಪೊಲೀಸರು ಮನವಿ ಮಾಡಿದ್ದಾರೆ.



