ಮುಲ್ಕಿಯಲ್ಲಿ ಭಾರೀ ಮಳೆಯಿಂದ ವ್ಯಾಪಕವಾಗಿ ಕೃಷಿ ಹಾನಿ

ಮುಲ್ಕಿ ತಾಲೂಕು ವ್ಯಾಪ್ತಿಯ ಅತಿಕಾರಿ ಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಪ್ರದೇಶಕ್ಕೆ ಮುಲ್ಕಿ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್, ಉಪತಹಶಿಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭ ಸ್ಥಳೀಯರಾದ ಧನಂಜಯ ಮಟ್ಟು ರವರು ಬಿರುಸಿನ ಮಳೆಯಿಂದ ಆಗಿರುವ ಕೃಷಿ ಹಾನಿ ಬಗ್ಗೆ ತಹಶಿಲ್ದಾರ್ ರವರಿಗೆ ಮಾಹಿತಿ ನೀಡಿ ಸರಕಾರದಿಂದ ತುರ್ತು ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಗುರುವಾರ ಸುರಿದ ಭಾರೀ ಮಳೆಗೆ ಅತಿಕಾರಿ ಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಪ್ರದೇಶದಲ್ಲಿ ನೆರೆ ಉಂಟಾಗಿದ್ದು ಮುಲ್ಕಿ ಮಟ್ಟು ಪ್ರಧಾನ ರಸ್ತೆ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತ್ತು.



