ಕಡಬ ತಾಲೂಕಿನ ಕಲ್ಲುಗುಡ್ಡೆಯಲ್ಲಿ ಆರ್ಲ ನಿವಾಸಿ ಅಝೀಝ್ ಅವರ ಪತ್ನಿ ಫೌಝಿಯಾರವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಜಾಗದ ತಕರಾರಿನ ವಿಚಾರದಲ್ಲಿ ಪಕ್ಕದ ಮನೆಯವರಿಂದ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ. ಕಲ್ಲುಗುಡ್ಡೆಯಲ್ಲಿ ತಂದೆಯ ಮನೆಗೆ ಫೌಝಿಯಾ ಹೋಗಿದ್ದರು. ಈ ವೇಳೆ ನೆರೆಯ ಮನೆಯವರು ನಾಲ್ವರು ಜಾಗದ ವಿಚಾರದಲ್ಲಿ ಜಗಳಕ್ಕೆ ಬಂದಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ಇದೇ ವೇಳೆ ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ. ಈ ವೇಳೆ ನಾಲ್ವರು ಫೌಝಿಯಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ಪೌಝಿಯಾ ಅವರ ತಂದೆಯ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಾಳುಗಳನ್ನು ಕಡಬದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.



