ಮಂಗಳೂರು: ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ವತಿಯಿಂದ 9ನೇ ವರ್ಷದ “ಮರಿಯಲದ ಮಿನದನ” ಕಾರ್ಯಕ್ರಮ ಮರವೂರು ಗ್ರಾಂಡ್ ಬೇಯಲ್ಲಿ ನಡೆಯಿತು.
ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬಂಟರಿಗಿರುವ ನಾಯಕತ್ವ ಗುಣ ಅದು ಯಾವಾಗಲೂ ಹೋಗುವುದಿಲ್ಲ, ನಾಯಕತ್ವ ನಮ್ಮ ಹುಟ್ಟು ಗುಣ, ಬಂಟರು ಕೂಡು ಕುಟುಂಬದಿಂದ ಬಂದವರು, ಇಂದಿನ ಕಾರ್ಯಕ್ರಮಕ್ಕೆ ಪ್ರೀತಿಯಿಂದ ಬಂದು ಸಹಕರಿಸಿದ ಎಲ್ಲಾ ಬಂಟ ಸಮುದಾಯಕ್ಕೆ ಅಭಿನಂದನೆಗಳು ಎಂದರು.
ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ “ಮರಿಯಲದ ಮಿನದನ” ಕಾರ್ಯಕ್ರಮದಲ್ಲಿ ಬೆಳಿಗ್ಗೆಯಿಂದ ರಾತ್ರಿ ತನಕ ಹಿಂದಿನ ಬದುಕನ್ನು ನೆನಪು ಮಾಡುವ ಕೆಲಸವನ್ನು ವರ್ಷ ವರ್ಷ ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅವರು ಮಾಡುತ್ತಿದ್ದಾರೆ, ಇವರ ಕಾರ್ಯಕ್ರಮ ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಶಾಸಕರಾದ ರಾಜೇಶ್ ನಾಯ್ಕ್, ಭರತ್ ರಾಜ್ ಶೆಟ್ಟಿ, ಅಶೋಕ್ ಶೆಟ್ಟಿ, ಗುರುರಾಜ್ ಶೆಟ್ಟಿ ಗಂಟಿಹೊಳೆ ಹಾಗೂ ಪತ್ರಕರ್ತರಾದ ಪಿ.ಬಿ.ಹರೀಶ್ ರೈ, ರವೀಂದ್ರ ಶೆಟ್ಟಿ, ಆನಂದ್ ಶೆಟ್ಟಿ, ಮಾಣೂರು ಮಾಲತಿ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು.
ಸಂಗೀತ ನಿರ್ದೇಶಕ ಗುರುಕಿರಣ್, ಉದ್ಯಮಿ ಪಾದೆ ಅಜಿತ್ ರೈ, ಹುಬ್ಬಳ್ಳಿ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ್ ಶೆಟ್ಟಿ, ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಸ್ಥಾಪಕ ಟ್ರಸ್ಟಿ ಪಡು ಚಿತ್ತರಂಜನ್ ರೈ, ಮಹಿಳಾ ಅಧ್ಯಕ್ಷೆ ವಿಜಯಲಕ್ಷ್ಮಿ ರೈ, ದೇವಿಚರಣ್ ಶೆಟ್ಟಿ, ಕೆ.ಎಂ.ಎಫ್ ಅಧ್ಯಕ್ಷ ಸುಚರಿತ ಶೆಟ್ಟಿ, ಡಾ.ಭಾಸ್ಕರ್ ಶೆಟ್ಟಿ, ಕೊಡ್ಮಣ್ ರಾಮಚಂದ್ರ ಶೆಟ್ಟಿ, ಎಚ್.ಎಮ್.ಎಸ್ ರಾಜ್ಯಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಉಪಸ್ಥಿತರಿದ್ದರು.
ಬಂಟರ ಸಂಘದ ವಲಯ ಅಧ್ಯಕ್ಷರಾದ ನಾಗೇಶ್ ಶೆಟ್ಟಿ, ಸುನಿಲ್ ಶೆಟ್ಟಿ, ಗೋಪಾಲಕೃಷ್ಣ ಮೇಲಾಂಟ, ಲೋಕೇಶ್ ಶೆಟ್ಟಿ, ಜಗದೀಶ್ ಶೆಟ್ಟಿ, ಕಾರ್ತಿಕ್ ಶೆಟ್ಟಿ, ಲೋಕಯ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪೂರ್ಣಿಮಾ ರೈ ಪ್ರಾರ್ಥಿಸಿ, ಸಂಘಟನಾ ಕಾರ್ಯದರ್ಶಿ ರಾಜ್ ಗೋಪಾಲ್ ರೈ ಪ್ರಾಸ್ತವಿಕ ಮಾತುಗಳನ್ನಾಡಿ, ಸ್ವಾಗತಿಸಿ, ನಿತ್ಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಪ್ರದೀಪ್ ಆಳ್ವ ವಂದಿಸಿದರು.







