ಪಕ್ಷಿಕೆರೆ ಸುರಗಿರಿ ಭಾವದೊಟ್ಟು ಮನೆ ನಿವಾಸಿ ಬಾಲಾದಿತ್ಯ ಆಳ್ವ (75) ಹೃದಯಾಘಾತದಿಂದ ಭಾನುವಾರ ನಿಧನರಾದರು
ಅವರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಕೆಮ್ರಾಲ್ ಮಾಜೀ ಮಂಡಲ ಪ್ರಧಾನರಾಗಿ, ಹಿರಿಯ ಕೃಷಿಕರಾಗಿ, ಕಾಂಗ್ರೆಸ್ ಮುಖಂಡರಾಗಿ ಪಕ್ಷಕ್ಕಾಗಿ ಬಹಳಷ್ಟು ಶ್ರಮಿಸಿದ್ದರು.
ಪಕ್ಷಿಕೆರೆ ಕೋರ್ದಬ್ಬು ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಅರಸು ಕುಂಜೂರಾಯ ದೈವಸ್ಥಾನ ಸಹಿತ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕೊಡುಗೈ ದಾನಿಯಾಗಿ ಜನಾನುರಾಗಿಯಾಗಿದ್ದರು.
ಅವರ ನಿಧನಕ್ಕೆ ಬೆಂಗಳೂರಿನ ಆಧ್ಯಾತ್ಮಿಕ ಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಕರ್ನಾಟಕ ಸರಕಾರದ ವಿಧಾನಸಭೆಯ ಸಭಾಧ್ಯಕ್ಷ ಶಾಸಕ ಯುಟಿ ಖಾದರ್, ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ,
ಮಾಜೀ ಸಚಿವ ಅಭಯಚಂದ್ರ ಜೈನ್, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ್ ಬೆರ್ನಾಡ್, ಗುರುರಾಜ್ ಎಸ್ ಪೂಜಾರಿ ತೋಕೂರು, ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮಯ್ಯದ್ದಿ ಪಕ್ಷಿಕೆರೆ, ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜಾ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಮಟ್ಟು
ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ,ಕಾಂಗ್ರೆಸ್ ನಾಯಕರಾದ ಗೋಪಿನಾಥ ಪಡಂಗ,ಸಾಹುಲ್ ಹಮೀದ್ ಕದಿಕೆ ,ಪುತ್ತು ಭಾವ, ದಯಾನಂದ ಮಟ್ಟು, ಮಂಜುನಾಥ್ ಕಂಬಾರ್, ಪ್ರವೀಣ್ ಪಕ್ಷಿಕೆರೆ, ಜಾಕ್ಸನ್ ಸಲ್ದಾನ,ನವೀನ್ ಸಾಲ್ಯಾನ್ ಪಂಜ, ಸುರೇಶ್ ಪಂಜ,ಸುರೇಶ್ ಕೆ ಸುವರ್ಣ ಐಕಳ,ಭೀಮಾ ಶಂಕರ್ ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ
ಮೃತರ ಅಂತ್ಯಕ್ರಿಯೆ ನಾಳೆ ಅವರ ಸ್ವಗೃಹ ದಲ್ಲಿ ಸೋಮವಾರ ಆ.5ರ ಬೆಳಗ್ಗೆ9.30ಕ್ಕೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ
ತಾಲೂಕಿನ ವಿವಿಧೆಡೆ ಚಿರತೆ ಓಡಾಟ ಕಂಡುಬಂದಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎರಡು ಕಡೆ ಬೋನು…
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮಾಡೂರು ಯೂಸುಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ…
ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರ ನಡೆಸಲು ಸುಪಾರಿ ನೀಡಿದ ಆರೋಪದಲ್ಲಿ ಮಹಿಳೆಯೊಬ್ಬಳನ್ನು ಸೇರಿ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ…
ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು ಬಿಳಿ ಬಣ್ಣದ ಸ್ವೀಫ್ಟ್ ಡಿಸೈರ್ ಕಾರಿನಲ್ಲಿ ಹಿಂಸಾತ್ಮಕವಾಗಿ ಎಳೆದುಕೊಂಡು ಹೋದ…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಹಾಗೂ ಜನಜಾಗೃತಿ ವೇದಿಕೆ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲೆ ಇದರ…
ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನದ ಅಂಗವಾಗಿ ಶುಕ್ರವಾರ ನಗರದ ರಾಜಾಜಿ…