ಮುಲ್ಕಿ: ಹಳೆಯಂಗಡಿಯ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಆಶ್ರಯದಲ್ಲಿ ಸೊಸೈಟಿಯ ಎಲ್ಲಾ ಶಾಖೆಗಳಲ್ಲಿ ತೆರೆಯಲಿರುವ ಇನ್ಸೂರೆನ್ಸ್ ಸೇವೆಗಳ ವ್ಯವಸ್ಥೆಯ ಆರಂಭಿಸುವಿಕೆ ಹಾಗೂ ಕಾರ್ಯಗಾರ ಸಂಘದ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮಕ್ಕೆ ಪಣಂಬೂರು ಸಿ ಎಸ್ ಐ ಕ್ರಿಸ್ತ ಕಾಂತಿಚರ್ಚ್ ನ ಸಭಾ ಪಾಲಕ ರೆ.ಸಂಧ್ಯಾಖೋಡೆ ಚಾಲನೆ ನೀಡಿ ಆಶೀರ್ವಚನ ನೀಡಿ ಬೆಳಕು ಜ್ಞಾನದ ಸಂಕೇತವಾಗಿದ್ದು ಗ್ರಾಹಕರ ಜೊತೆ ಜನಸ್ನೇಹಿ ಮೂಲಕ ವಿವಿಧ ಸವಲತ್ತುಗಳನ್ನು ಪರಿಚಯಿಸಿ ಸಹಕಾರಿ ಸಂಸ್ಥೆ ಮುನ್ನಡೆಯಲ್ಲಿ ಎಂದರು.

ಮುಖ್ಯ ಅತಿಥಿಗಳಾಗಿ ಹಳೆಯಂಗಡಿ ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ಶ್ರೀರಂಗ,ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ವಸಂತ ಬೆರ್ನಾಡ್, ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ನಿರ್ದೇಶಕರಾದ ಗಣೇಶ್ ಅಮೀನ್ ಸಂಕಮಾರ್,ಉಮಾನಾಥ ಶೆಟ್ಟಿಗಾರ್, ಮಿರ್ಜಾ ಅಹಮದ್, ವಿಜಯ ಸನಿಲ್, ನವೀನ್ ಸಾಲ್ಯಾನ್ ಪಂಜ ಗೌತಮ್ ಜೈನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು .ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸ್ವಾಗತಿಸಿದರು.ಪ್ರಬಂಧಕಿ ಅಕ್ಷತಾ ನಿರೂಪಿಸಿದರು.ಬಳಿಕ ಮಂಗಳೂರಿನ ಮಾಸ್ಟರ್ ಮೈಂಡ್ ಎಂಟರ್ಪ್ರೈಸಸ್ ಶ್ರೀಶ ಕೆ ಎಂ ರವರಿಂದ ಕಾರ್ಯಗಾರ ನಡೆಯಿತು



