ನೆಹರು ಯುವ ಕೇಂದ್ರ ಮಂಗಳೂರು ಯುವಕ ಸಂಘ ತೋಕೂರು ಮಹಿಳಾ ಮಂಡಲ ತೋಕೂರು ರೋಟರಿ ಸಮುದಾಯ ದಳ ತೋಕೂರು ಇದರ ಸಂಯುಕ್ತ ಆಶ್ರಯದಲ್ಲಿ ಆಚರಿಸಲಾದ ಸ್ವಾತಂತ್ರೋತ್ಸವದಲ್ಲಿ CRPF ನ ನಿವೃತ್ತ ಹವಾಲ್ದಾರ್ ಶ್ರೀನಿವಾಸ್ ಕುಲಾಲ್ ಮುಂಚೂರುರವರು ಸನ್ಮಾನಿಸಲ್ಪಟ್ಟು ತಮ್ಮ ತಾಯಿ ತಂದೆಯಂತೆಯೇ ಈ ನೆಲವನ್ನು ಗೌರವಿಸಿ ಎಂದು ಹೇಳಿದರು.

ಯುವಕ ಸಂಘದ ಸ್ಥಾಪಕ ಸದಸ್ಯರಾದ ಸುಂದರ ಸಾಲಿಯಾನ್ ದ್ವಜಾರೋಹಣಗೈದು ಮೂಲ್ಕಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ರೊ|phf ಪ್ರೀತಮ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ರೋಟರಿ ಸಮುದಾಯ ದಳದ ಅಧ್ಯಕ್ಷ ಉದಯ ಕುಮಾರ್ ಉಪಸ್ಥಿತರಿದ್ದರು ಯುವಕ ಸಂಘದ ಅಧ್ಯಕ್ಷ ರಮೇಶ್ ದೇವಾಡಿಗ ಸ್ವಾಗತಿಸಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಪ್ರೇಮಲತಾ ಶೆಟ್ಟಿಗಾರ್ ವಂದಿಸಿ ಹರಿದಾಸ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಯಶೋದಾ ಪಿ ರಾವ್ ವೀರ ಸಾವರ್ಕರ್ ರವರ ಜೀವನ ಚರಿತ್ರೆ ಬಗ್ಗೆ ಪ್ರಾಸ್ತಾವಿಸಿದರು ಜಂಟಿ ಸಂಸ್ಥೆಗಳ ಸದಸ್ಯರುಗಳಿಂದ ದೇಶ ಭಕ್ತಿಗೀತೆ ಗಾಯನ ನಡೆಯಿತು.



