ಕಿನ್ನಿಗೋಳಿ:
ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಮಂಗಳೂರು ಉತ್ತರ ವಲಯ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸುವ ಸಲುವಾಗಿ ʼಪ್ರತಿಭಾ ಪುರಸ್ಕಾರ 2024ʼ ಕಾರ್ಯಕ್ರಮವು ಮುಕ್ತಿ ಪ್ರಕಾಶ ಹೈಸ್ಕೂಲ್ ಸಭಾಭವನ ನೀರುಡೆಯಲ್ಲಿ ಆಗಸ್ಟ್ 15 ರಂದು ನಡೆಯಿತು.
ಸಮಾರಂಭದಲ್ಲಿ ಮಂಗಳೂರು ಉತ್ತರ ವಲಯದ ವ್ಯಾಪ್ತಿಯಲ್ಲಿ 2023-2024 ನೇ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸೆಲ್ಸಿ ಮತ್ತು ಪಿಯುಸಿ ಪಬ್ಲಿಕ್ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಅತ್ಯುತ್ತಮ ಸಾಧನೆಗೈದು ರ‍್ಯಾಂಕ್ ಗಳಿಸಿದ, ಸಿಎ ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿದ, ಮೆಡಿಕಲ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಹಾಗೂ ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಪ್ರತಿಭಾವಂತ ಕೊಂಕಣಿ ಕಥೊಲಿಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಕಥೊಲಿಕ್ ಸಭಾ ಮಂಗಳೂರು ಉತ್ತರ ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ಅತಿ ವಂದನೀಯ ಓಸ್ವಾಲ್ಡ್ ಮೊಂತೆರೊರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಥೊಲಿಕ್ ಸಭಾ ಮಂಗಳೂರು ಉತ್ತರ ವಲಯ ಅಧ್ಯಕ್ಷರಾದ ಕುಮಾರಿ ಮೆಲ್ರೀಡ ಜೇನ್ ರೊಡ್ರಿಗಸ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ಯುನಿವರ್ಸಿಟಿ ಕಾಮರ್ಸ್ ವಿಭಾಗದ ಚೇರ್ ಪರ್ಸನ್ ಡಾ. ಪ್ರೀತಿ ಕೀರ್ತಿ ಡಿಸೋಜ, ಯುವಜನರನ್ನು ಉದ್ದೇಶಿಸಿ, ಯುವಜನರು ತಮ್ಮಲ್ಲಿರುವ ಪ್ರತಿಭೆಗಳನ್ನು ಬೆಳಕಿಗೆ ತಂದು, ಮನಸ್ಸನ್ನು ಗುರಿಯತ್ತ ಕೇಂದ್ರೀಕೃತಗೊಳಿಸಿ ಶ್ರಮಿಸಿದರೆ ಗೆಲುವು ನಿಶ್ಚಿತ, ಸರ್ವರೂ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು. ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಗೊಂಡ ಶ್ರೀ ಸ್ಟ್ಯಾನಿ ಆಲ್ವಾರಿಸ್ ರವರನ್ನು ಸನ್ಮಾನಿಸಲಾಯಿತು.
ಸಂತ ರೋಕ್ಸ್ ಚರ್ಚಿನ ಧರ್ಮಗುರುಗಳಾದ ರೆ. ಫಾ. ಆಲ್ಬನ್ ರೊಡ್ರಿಗಸ್, ವಲಯ ಮಾಜಿ ಅಧ್ಯಕ್ಷರಾದ ಶ್ರೀ ಲಾಜರಸ್ ಡಿಕೋಸ್ತಾ, ನೀರುಡೆ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ಮೊನಿಕಾ ರೊಡ್ರಿಗಸ್ ಹಾಗೂ ಕಾರ್ಯದರ್ಶಿ ಶ್ರೀಮತಿ ಜೆಸಿಂತಾ ನಜರೆತ್, ಕಥೊಲಿಕ್ ಸಭಾ ನೀರುಡೆ ಘಟಕದ ಅಧ್ಯಕ್ಷರಾದ ಶ್ರೀ ರಾಜೇಂದ್ರ ಪಿಂಟೊ ಹಾಗೂ ಕಾರ್ಯದರ್ಶಿ ಶ್ರೀಮತಿ ಅನಿತಾ ಲೋಬೊ, ಶ್ರೀ ಫ್ರಾನ್ಸಿಸ್ ಸೆರಾವೊ, ಶ್ರೀ ಜೇಮ್ಸ್ ಲೋಬೊ, ಹಾಗೂ ಇತರ ವಲಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಾರಂಭದಲ್ಲಿ 46 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯದರ್ಶಿ ಶ್ರೀಮತಿ ಮೇಬಲ್ ಶಾಂತಿ ಮಾರ್ಟಿಸ್ ವಂದಿಸಿದರು. ಶ್ರೀ ಸ್ಟ್ಯಾನಿ ಮಿರಾಂದ ಕಾರ್ಯಕ್ರಮವನ್ನು ನಿರೂಪಿಸಿದರು.



