ಸೂರಜ್ ಪದವಿ ಪೂರ್ವ ಕಾಲೇಜು ಮತ್ತು ಜ್ಞಾನದೀಪ ಶಾಲೆ ಮುಡಿಪು ಇಲ್ಲಿ ಮಂಚಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಕಬಡ್ಡಿ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿತ್ತು

ಮೊದಲಿಗೆ ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಪ್ರತಿಷ್ಠಾ ಇವರು ನೆರವೇರಿಸಿದರು ಕಬಡ್ಡಿಯ ಮಹತ್ವವನ್ನು ಪ್ರೀಮಾ ಇವರು ತಿಳಿಸಿಕೊಟ್ಟರು ಪ್ರಾರ್ಥನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಾರ್ಯಕ್ರಮದ ಅತಿಥಿಗಳಿಂದ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು
ಶಾಲೆಯ ದೈಹಿಕ ಶಿಕ್ಷಕರಾದ ರಾಜೇಶ್ ಇವರು ಸ್ವಾಗತಿಸಿದರು ಕಾರ್ಯಕ್ರಮದ ಅತಿಥಿಗಳಾದ D.D.P.I ವೆಂಕಟೇಶ್ ಸುಬ್ಬಯ್ಯ ಪಟ್ಟಗಾರ್, ವೀರೇಶ್ವರ ಭಟ್, ವಿನೋದ ( nodel officer )
ಇವರಿಗೆ ಹೂವನ್ನು ನೀಡಿ ಸ್ವಾಗತಿಸಲಾಯಿತು ಅತಿಥಿಗಳನ್ನು ಶಾಲು ಹೊದಿಸುವ ಮೂಲಕ ಸನ್ಮಾನಿಸಲಾಯಿತು. ನಂತರ D.D.P.I ವೆಂಕಟೇಶ ಸುಬ್ಬಯ್ಯ ಪಟ್ಟಗಾರ್ ಇವರು ಕಾರ್ಯಕ್ರಮದ ಕುರಿತು ಒಂದೆರಡು ಹಿತನುಡಿಗಳನ್ನು ಆಡಿದರು ಕಬಡ್ಡಿ ಯ ಮಹತ್ವವನ್ನು ತಿಳಿಸಿದರು ನಂತರ ಹಲವಾರು ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರಾಗಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ವೀರೇಶ್ವರ ಭಟ್ ಇವರ ತಮ್ಮ ಕಿರುಪರಿಚಯವನ್ನು ಮಾಡಿಕೊಟ್ಟರು.

ಶ್ರೀಮತಿ ವಿನೋದ(nodel officer)ಇವರು ಕಬಡ್ಡಿ ಪಂದ್ಯಾಟದ ಬಗ್ಗೆ ಕಬಡ್ಡಿಯ ಮಹತ್ವವನ್ನು ತಿಳಿಸಿಕೊಟ್ಟರು. ನಂತರ ಶಾಲಾ ಅಧ್ಯಕ್ಷರಾದ ಡಾ.ಮಂಜುನಾಥ್ ಎಸ್ ರೇವಣಕರ್ ಮತ್ತು ಪ್ರಾಂಶುಪಾಲರಾದ ರಕ್ಷಿತ್ ಕುಲಾಲ್ ಕಾರ್ಯಕ್ರಮದ ಬಗ್ಗೆ ಹಿತನುಡಿಗಳನ್ನು ಆಡಿದರು
ನಂತರ ಕಬಡ್ಡಿ ಪಂದ್ಯಾಟವು ಆರಂಭವಾಯಿತು



