ವಿಶೇಷ ವರದಿ

ಗಣೇಶನಿಗೆ ಮೋದಕ ಯಾಕೆ ಪ್ರಿಯ?

 

 

ಸಂಪೂರ್ಣ ನಮ್ಮ ಭಾರತ ದೇಶವೇ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ ಗಣೇಶ ಚತುರ್ಥಿ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬ ಆಚರಿಸಲಾಗುತ್ತದೆ. ಮೊದಲು ಗೌರಿ ಪೂಜೆ ನಡೆಯುತ್ತದೆ. ನಂತರ ಗಣಪತಿಯನ್ನು ಪೂಜಿಸಲಾಗುತ್ತದೆ. ಇನ್ನು ಗಣೇಶ ಹಬ್ಬ ಅಂದ್ರೆ ಅಲ್ಲಿ ವಿಶೇಷ ಹಾಗು ವಿನೂತನ ಆಚರಣೆಗಳನ್ನು ನೋಡುತ್ತೇವೆ. ಅದರಲ್ಲೂ ಗಣೇಶನಿಗೆ ಪ್ರಿಯ ಎಂದು ಮೊದಕವನ್ನು ಅರ್ಪಿಸುವುದನ್ನು ನಾವು ನೋಡಿದ್ದೇವೆ. ಗಣೇಶನಿಗೆ ಸಿಹಿ ಕಡಬು ಹಾಗೂ ಮೋದಕ ಎಂದರೆ ಎಲ್ಲಿಲ್ಲದ ಇಷ್ಟ, ಹೀಗಾಗಿ ಹಬ್ಬದಲ್ಲಿ ಈ ಎರಡು ಖಾದ್ಯ ಮಾಡಿಯೇ ಮಾಡುತ್ತಾರೆ. ಹಾಗಾದ್ರೆ ನಿಮಗೆ ಗೊತ್ತಾ ಗಣೇಶನಿಗೆ ಮೋದಕ ಪ್ರಿಯವಾದ ಸಿಹಿ ಏಕೆ? ಇದರ ಹಿಂದಿರುವ ಕಥೆ ಏನು ಗೊತ್ತಾ?

ಒಂದು ದಿನ ಅತ್ರಿ ಮುನಿಗಳು ಮತ್ತು ಅವರ ಪತ್ನಿ ಅನಸೂಯಾ ದೇವಿ ತಮ್ಮ ಮನೆಗೆ ಊಟಕ್ಕೆ ಬರುವಂತೆ ಶಿವ-ಪಾರ್ವತಿಯರನ್ನ ಆಹ್ವಾನಿಸುತ್ತಾರೆ. ಆಗ ಗಣೇಶ ಇನ್ನೂ ಚಿಕ್ಕ ಬಾಲಕ. ಅವನನ್ನ ಒಬ್ಬನನ್ನೇ ಕೈಲಾಸದಲ್ಲಿ ಬಿಟ್ಟು ಹೋಗುವುದು ಬೇಡ ಎಂಬ ಕಾರಣಕ್ಕೆ ಶಿವ- ಪಾರ್ವತಿ ತಮ್ಮೊಂದಿಗೆ ಗಣೇಶನನ್ನೂ ಕರೆದುಕೊಂಡು ಅತ್ರಿ ಮುನಿಗಳ ಮನೆಗೆ ಬರುತ್ತಾರೆ. ಭಗವಂತ ಶಿವ- ದೇವಿ ಪಾರ್ವತಿಯರ ಊಟಕ್ಕಾಗಿ ಅನಸೂಯಾ ದೇವಿ ಬಗೆಬಗೆಯ ಅಡುಗೆ ಮಾಡಿರುತ್ತಾರೆ. ಸಿಹಿ ತಿಂಡಿಗಳನ್ನೂ ಮಾಡಿರುತ್ತಾರೆ. ಅವರಿಗೆ ಬಾಳೆಲೆಯಲ್ಲಿ ಹಬ್ಬದ ಅಡುಗೆಯನ್ನ ಬಡಿಸಲಾಗುತ್ತದೆ. ಅದನ್ನ ಶಿವ-ಪಾರ್ವತಿ, ಬಾಲಕ ಗಣಪತಿ ಊಟ ಮಾಡುತ್ತಾರೆ.

ಅನಸೂಯಾ ದೇವಿ ಮಾಡಿದ ಅಡುಗೆ ಊಟ ಮಾಡಿ ಶಿವ -ಪಾರ್ವತಿ ತೃಪ್ತಿಗೊಳ್ಳುತ್ತಾರೆ. ಅವರು ಊಟ ಮುಗಿಸುತ್ತಾರೆ. ಆದರೆ ಬಾಲಕ ಗಣಪನಿಗೆ ಮಾತ್ರ ಹೊಟ್ಟೆಯೇ ತುಂಬಿರುವುದಿಲ್ಲ. ʼನನಗೆ ಹಸಿವು ಹೋಗಿಲ್ಲʼ ಎಂದು ಮುದ್ದಾಗಿ ಹೇಳುತ್ತಾನೆ. ಆದರೆ ಅನಸೂಯಾ ದೇವಿ ಕೇಳುತ್ತಾರೆ..ನಿನಗೇನು ಬೇಕು ಎಂದು. ಆಗ ಗಣೇಶ ʼತನಗೆ ಸಿಹಿತಿಂಡಿ ಬೇಕುʼ ಎಂದು ಉತ್ತರಿಸುತ್ತಾನೆ.
ಆಗ ಅನಸೂಯಾ ಮಾತೆ ಲಗುಬಗೆಯಿಂದ ಮೋದಕವನ್ನ ತಯಾರಿಸುತ್ತಾರೆ. ಪುಟಾಣಿ ಗಣಪನ ಹೊಟ್ಟೆ ತುಂಬಿಸಲು ಅವರು ಅವಸರದಲ್ಲಿ ಮಾಡುತ್ತಾರೆ. ಅನಸೂಯಾ ದೇವಿ ಮೋದಕ ಮಾಡಿ ಮಾಡಿ ಕೊಡುತ್ತಿದ್ದರೆ, ಗಣಪ ಅದನ್ನ ಹೊಟ್ಟೆಗೆ ಹಾಕಿಕೊಳ್ಳುತ್ತಾನೆ. 21 ಮೋದಕಗಳನ್ನ ತಿಂದ ಬಳಿಕ ಗಣಪನಿಗೆ ತೃಪ್ತಿಯಾಗಿ, ತನಗೆ ಹೊಟ್ಟೆ ತುಂಬಿತು ಎನ್ನುತ್ತಾನೆ. ಅದಾದ ಮೇಲೆ ದೇವಿ ಪಾರ್ವತಿ ಪ್ರತಿ ಸಲ ತನ್ನ ಪುತ್ರ ಗಣಪತಿಗೆ ಹಸಿವಾದಾಗಲೂ 21 ಮೋದಕಗಳನ್ನ ಮಾಡಿಕೊಡಲು ಪ್ರಾರಂಭಿಸುತ್ತಾಳೆ. ಆಗಿನಿಂದಲೂ ಇದೇ ಸಂಪ್ರದಾಯ ಮುಂದುವರಿದಿದೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಇಂದಿಗೂ ಕೂಡ ಅದೇ ಪದ್ಧತಿಯಿದೆ. ನೈವೇದ್ಯಕ್ಕೆ 21 ಮೋದಕಗಳನ್ನ ಇಟ್ಟರೆ, ಗಣಪತಿ ಸಂತೃಪ್ತನಾಗುತ್ತಾನೆ ಎನ್ನಲಾಗುತ್ತದೆ..

 

ಒಂದು ದಿನ ಪಾರ್ವತಿ ದೇವಿ ತನ್ನ ಕೈಯಾರ ಮೋದಕಗಳನ್ನ ತಯಾರಿಸಿ, ಮಕ್ಕಳಾದ ಕಾರ್ತೀಕೇಯ ಮತ್ತು ಗಣಪತಿಗೆ ಒಂದು ಸ್ಪರ್ಧೆಯನ್ನ ಒಡ್ಡುತ್ತಾಳೆ. ಇಡೀ ಭೂಮಿಯನ್ನ ಯಾರು ಮೊದಲು ಸುತ್ತುವರಿದು ಬರುತ್ತಾರೋ, ಅವರಿಗೆ ಮೋದಕವನ್ನ ಉಡುಗೊರೆಯಾಗಿ ಕೊಡುತ್ತೇನೆ ಎನ್ನುತ್ತಾಳೆ. ಅದನ್ನ ಕೇಳಿದ ಕಾರ್ತೀಕೇಯ ತಾನೇ ಮೊದಲು ಎಂದು ಭೂಮಿ ಸುತ್ತಲು ಓಡಿದರೆ, ಇತ್ತ ಗಣಪತಿ..ತನ್ನ ತಂದೆ-ತಾಯಿಯರಾದ ಶಿವ-ಪಾರ್ವತಿಯರ ಸುತ್ತಲೂ ತಿರುಗುತ್ತಾನೆ. ನೀವೇ ಭೂಮಿ..ನೀವೇ ಸಕಲವೂ ಎನ್ನುತ್ತಾನೆ. ಇದರಿಂದ ಖುಷಿಯಾದ ಪಾರ್ವತಿ ಮೋದಕವನ್ನ ಗಣಪತಿಗೇ ಕೊಡುತ್ತಾಳೆ. ಈ ಕಾರಣಕ್ಕೂ ಗಣಪತಿಗೆ ಮೋದಕ ಶ್ರೇಷ್ಠ ಎನ್ನಲಾಗುತ್ತದೆ. ಇದು ಪದ್ಮಪುರಾಣದಲ್ಲಿ ಉಲ್ಲೇಖಿಸಲಾದ ಕಥೆ..
ಋಷಿ ಪತ್ನಿ ಮತ್ತು ತನ್ನ ತಾಯಿ ದೇವಿ ಪಾರ್ವತಿಯ ಕೈಯಿಂದ ಮೋದಕ ಮಾಡಿಸಿಕೊಂಡು ತಿಂದ ಗಣಪನಿಗೆ ಯಾವತ್ತಿದ್ದರೂ ಅದು ಅಚ್ಚುಮೆಚ್ಚು. ಹೀಗಾಗಿ ಗಣಪತಿ ಪೂಜೆ, ಹವನ, ಗಣೇಶ ಚತುರ್ಥಿ ಹಬ್ಬಗಳಲ್ಲಿ ಈ ಸಿಹಿತಿಂಡಿ ಇರಲೇಬೇಕು.
Story credits: kannadaTimesOFNow

ಸಾಮಾನ್ಯವಾಗಿ ಗಣೇಶ ಚತುರ್ಥಿಯಂದು ಬಹುತೇಕ ಎಲ್ಲರೂ ತಿಂಡಿಗಳನ್ನು ತಯಾರಿಸಿ ನೈವೇದ್ಯ ಮಾಡಿ ಪ್ರಸಾದ ಸ್ವೀಕರಿಸುತ್ತಾರೆ. ಹಣ್ಣು ಕಾಯಿಯನ್ನೂ ನೈವೇದ್ಯ ಮಾಡುವುದು ಪದ್ಧತಿ. ಗಣೇಶನಿಗೆ ಪ್ರಿಯವಾದ ಮೋದಕ, ಚಕ್ಕುಲಿ, ಉಂಡೆ, ಎಳ್ಳುಂಡೆ, ಕರ್ಜಿಕಾಯಿ, ಕಡುಬು, ಸಿಹಿ ಕಡುಬು, ಖಾರ ಕಡುಬು ಈ ರೀತಿ ಅನೇಕ ತಿಂಡಿಗಳನ್ನು ಮಾಡಿ ನೈವೇದ್ಯಗೆ ಇಡಲಾಗುತ್ತದೆ. ಆದರೆ ಗಣೇಶ ಚತುರ್ಥಿಯಂದು ವಿಘ್ನ ವಿನಾಯಕ ಗಣೇಶನಿಗೆ ಮೋದಕವನ್ನು ಮಾಡಿ ನೈವೇದ್ಯ ಮಾಡುತ್ತಾರೆ. ಅಷ್ಟೇ ಅಲ್ಲದೆ ಗಣೇಶನನ್ನು ಮೋದಕ ಎಂದು ಕೂಡ ಕರೆಯುತ್ತಾರೆ.

 

 

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಬೆಂಗಳೂರು: ಗ್ರಾಮ ಪಂಚಾಯತ್‌ನಿಂದ ವಿಧಾನಸಭೆಯವರೆಗೆ AI ಕಡ್ಡಾಯ- ಯು.ಟಿ. ಖಾದರ್

ಗ್ರಾಮ ಪಂಚಾಯತ್ ಸೇರಿದಂತೆ ಸರ್ಕಾರದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆ ಅಳವಡಿಕೆ ಅನಿವಾರ್ಯವಾಗಲಿದೆ ಎಂದು ರಾಜ್ಯ…

22 hours ago

ಬೆಂಗಳೂರು: ಸೇಫ್ ಫುಟ್‌ಪಾತ್ ಅಭಿಯಾನ ಯಶಸ್ಸು; ಪೀಣ್ಯದಲ್ಲಿ ರಾತ್ರಿ ಟ್ರಾಫಿಕ್ ಡೈವರ್ಷನ್…!

ಬೆಂಗಳೂರಿನಲ್ಲಿ 'ಸೇಫ್ ಫುಟ್‌ಪಾತ್' ಅಭಿಯಾನಕ್ಕೆ ಭರ್ಜರಿ ಸ್ಪಂದನೆ ಸಿಕ್ಕಿದೆ. ಕಳೆದ ಒಂದು ತಿಂಗಳಲ್ಲಿ 750 ಕಿಲೋಮೀಟರ್‌ಗೂ ಹೆಚ್ಚು ಪಾದಚಾರಿ ಮಾರ್ಗಗಳ…

22 hours ago

18 ಸೈನಿಕರ ಸಾವಿನ ಬಳಿಕ ಇರಾನ್ ವಿರುದ್ಧ ಹೊಸ ಯುದ್ಧ ತಂತ್ರಕ್ಕೆ ಮೊರೆ ಹೋದ ಟ್ರಂಪ್ ಆಡಳಿತ

ಮಧ್ಯಪ್ರಾಚ್ಯದಲ್ಲಿ ಇರಾನ್ ಬಿಕ್ಕಟ್ಟು ದಿನೇದಿನೇ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕ ತನ್ನ ಯುದ್ಧ ತಂತ್ರಗಳನ್ನು ಮರುಪರಿಶೀಲಿಸಲು ಮುಂದಾಗಿದೆ. ಇರಾನ್‌ನ ಭೂಗತ ಬಂಕರ್‌ಗಳು…

22 hours ago

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಂಜುನಾಥ್ ಶೆಟ್ಟಿ ದಂಪತಿಗೆ ಸನ್ಮಾನ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರೂ, ಬಂಟ್ಸ್ ಅಸೋಸಿಯೇಷನ್ ನಾರ್ತ್ ಅಮೆರಿಕಾ (BANA) ಅಧ್ಯಕ್ಷರೂ ಆದ ಶ್ರೀ ಮಂಜುನಾಥ್…

2 days ago

ಉಡುಪಿ: ಕರಾವಳಿ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ…!

ಉಡುಪಿ ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಕಾಪು, ಪೊಲಿಪು ಹಾಗೂ ಕಟಪಾಡಿ-ಮಟ್ಟು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.…

2 days ago

ಬಂಟ್ವಾಳ: ಮಾಣಿ ಸಮೀಪ ಜೋಗಿಬೆಟ್ಟು ರಸ್ತೆ ಕೆರೆಯಂತಾದ ದೃಶ್ಯ….!

ಮಳೆ ಸುರಿದರೆ ಸಾಕು, ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ…

2 days ago