ಬಂಟ್ವಾಳ : ಉನ್ನತ ಕೆಲಸಗಳು ಸಣ್ಣ ಸಣ್ಣ ದೇಣಿಗೆಗಳಿಂದಲೇ ಆರಂಭವಾಗುತ್ತವೆ ಹತ್ತು ಹಲವು ಕೈಗಳು ಜೊತೆಯಾಗಿ ಸೇರಿದಾಗ ಯಾವ ಅಭಿವೃದ್ಧಿ ಕೆಲಸವು ನಿರಾಯಾಸವಾಗಿ ನಡೆಯಲು ಸಾಧ್ಯವಾ ಗುತ್ತದೆ.ಎಂದು ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಹೇಳಿದರು.
ಅವರು ಚಂದ್ರಿಕಾ ವೆಜಿಟೇಬಲ್ಸ್ ಮೇಲ್ಕಾರ್ ಇಲ್ಲಿ “ಸರಕಾರಿ ಶಾಲೆಗೆ ನನ್ನ ಕೈ ಕಾಣಿಕೆ” ಎಂಬ ವಿನೂತನ ಕಾರ್ಯಕ್ರಮದಲ್ಲಿ . ದೇಣಿಗೆಯಾಗಿ ತಮ್ಮ ಕಿರು ಕಾಣಿಕೆಯನ್ನು ನೀಡಿ ಮಾತನಾಡಿದರು
ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಮಹತ್ತರವಾದದ್ದು ಶಿಕ್ಷಣದಿಂದ ಮಾತ್ರವೇ ಎಲ್ಲಾ ರೀತಿಯ ಬೆಳವಣಿಗೆಯನ್ನು ಹೊಂದಲು ಸಾಧ್ಯ ಈ ಪ್ರಕಾರವಾಗಿ ಸರ್ಕಾರಿ ಶಾಲೆಗಳ ಕೆಲಸವು ಮಾದರಿಯಾಗಿದೆ ಹಾಗೂ
ಸೇವಾ ನಿರತರಾಗಿ ತೊಡಗಿಕೊಂಡಿರುವ ಶಿಕ್ಷಕ ವರ್ಗವು ಇದಕ್ಕೆ ಉತ್ತಮ ಉದಾಹರಣೆ ಅಲ್ಲದೆ ಸಾರ್ವಜನಿಕವಾಗಿ ವಿದ್ಯಾ ಆಸಕ್ತ ಮಹನೀಯರು ನೀಡುವ ಕೊಡುಗೆಗಳು ಒಂದು ಸಂಸ್ಥೆಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತವೆ ಇಂದಿನ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಹಾಗೂ ಅದಕ್ಕೆ ಪೂರಕವಾದ ವಾತಾವರಣವನ್ನು ಕೊಡುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಪುರಸಭೆಯ ಮಾಜಿ ಉಪಾಧ್ಯಕ್ಷೆ ಜೇಸಿಂತ ಡಿಸೋಜ, ರಾಜ್ಯ ಮಟ್ಟದ ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸಂಗೀತ ಶರ್ಮಾ ಪಿ ಜಿ , ಚಂದ್ರಿಕಾ ವೆಜಿಟೇಬಲ್ ಮೆಲ್ಕಾರ್ ಇದರ ಮಾಲಕ ಮಹಮ್ಮದ್ ಶರೀಫ್, ಸಹೋದರ ಮಹಮ್ಮದ್ ನಝೀರ್ ಮೊದಲಾದವರು ಉಪಸ್ಥಿತರಿದ್ದರು
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…
ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್…