ಕಿನ್ನಿಗೋಳಿ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಿನ್ನಿಗೋಳಿ ಇದರ ವತಿಯಿಂದ ಕಿನ್ನಿಗೋಳಿಯ ವಸಂತ ಮಂಟಪದಲ್ಲಿ 50 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದ್ರೆ ಇದರ ಅಧ್ಯಕ್ಷರಾದ ಮೋಹನ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಾಮ್ಮಾಯೀ ದೇವಸ್ಥಾನದ ಧರ್ಮದರ್ಶಿ ಶ್ರೀ ಮೋಹನದಾಸ ಸುರತ್ಕಲ್ ಧಾರ್ಮಿಕ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮುಲ್ಕಿ ಪೊಲೀಸ್ ಠಾಣೆಯ ಪಿ.ಎಸ್.ಐ ಅನಿತಾ, ಕೊಲ್ನಾಡ್ ದಿವ್ಯ ಕೆಮಿಕಲ್ಸ್ ಇದರ ಶೇಖರ ಸಾಲ್ಯಾನ್,ಐಕಳ ಬಾವ ಕಂಬಳ ಸಮಿತಿಯ ಚಿತ್ತರಂಜನ್ ಭಂಡಾರಿ, ದುಬೈ ಸಮಿತಿಯ ಸಂಘಟಕರಾದ ಧನಂಜಯ ಶೆಟ್ಟಿಗಾರ್ ದುಬೈ,ಸುಕುಮಾರ ಶೆಟ್ಟಿ ನಂದಿನಿ ತಾಳಿಪಾಡಿ ಗುತ್ತು, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸುಧಾಕರ ಶೆಟ್ಟಿ, ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘದ ಅಧ್ಯಕ್ಷರಾದ ದುರ್ಗಾಪ್ರಸಾದ್ ಹೆಗ್ಡೆ,ನಿವ್ರತ ಬ್ಯಾಂಕ್ ಅಧಿಕಾರಿ ಸೋಮಶೇಖರ,ಎ, ನರಸಿಂಹ ಪೈ, ಸಮಿತಿಯ ಗೌರವಾಧ್ಯಕ್ಷರಾದ ಭುವನಾಭಿರಾಮ ಉಡುಪ,ಅಧ್ಯಕ್ಷರಾದ ಕುಶಲ ಪೂಜಾರಿ,ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಹಾಗು ಸಾರ್ವಜನಿಕರಿಗೆ ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಶ್ರೀಲಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಪಡೆದ ಕುಮಾರಿ ಮೇಘಶ್ರೀ ಕೊಡೆತ್ತೂರು ಕೆ.ಜಿ ಬೆಟ್ಟು ಇವರನ್ನು ಸನ್ಮಾನಿಸಲಾಯಿತು. ಲಕ್ಷಣ ಬಿ.ಬಿ ಏಳಿಂಜೆ ಕಾರ್ಯಕ್ರಮ ನಿರೂಪಿಸಿ, ಭುವನಾಭಿರಾಮ ಉಡುಪ ಸ್ವಾಗತಿಸಿ ದಿವಾಕರ ಕರ್ಕೇರಾ ವಂದಿಸಿದರು.



