ಜನ ಮನದ ನಾಡಿ ಮಿಡಿತ

Advertisement

ವ್ಯಕ್ತಿಗೆ ಕೋಪ ಬರುವುದು ಸಹಜ. ಆದ್ರೆ ಅದು ತಕ್ಷಣಕ್ಕೆ ಮಾತ್ರ ಇರಬೇಕು. ಮನುಷ್ಯ ಯಾವತ್ತೂ ದೀರ್ಘ ದ್ವೇಷಿ ಆಗಿರಬಾರದು.

ವ್ಯಕ್ತಿಗೆ ಕೋಪ ಬರುವುದು ಸಹಜ. ಆದ್ರೆ ಅದು ತಕ್ಷಣಕ್ಕೆ ಮಾತ್ರ ಇರಬೇಕು. ಮನುಷ್ಯ ಯಾವತ್ತೂ ದೀರ್ಘ ದ್ವೇಷಿ ಆಗಿರಬಾರದು. ಈ‌ ಸಾಮರಸ್ಯ ಜೀವನದಲ್ಲಿ ಇದ್ದಾಗ ಬಾಂಧವ್ಯ ಸದಾ ಗಟ್ಟಿಯಾಗಿರುತ್ತದೆ ಎಂದು ಯಕ್ಷಗುರು ಸಂಜೀವ ಸುವರ್ಣ ಅಭಿಪ್ರಾಯಪಟ್ಟರು.
ಉಡುಪಿ ಬುಡ್ನಾರ್ ಯಕ್ಷ ಸಂಜೀವ ಯಕ್ಷಗಾನ ಕೇಂದ್ರದಲ್ಲಿ ಆಯೋಜಿಸಿದ “ಸಂಜೀವ-70 ಗುರು ಶಿಷ್ಯರ ಸಂವಾದ”ದಲ್ಲಿ ತಮ್ಮ ಯಕ್ಷಗಾನ ಜೀವನದ ಸಂಗತಿಗಳನ್ನು ಹಂಚಿಕೊಂಡರು.
ನನ್ನ ಹುಟ್ಟು ಹಾಗೂ ಬದುಕು ವಿಚಿತ್ರವೇ ಆಗಿದೆ. ಬೇರೆಯವರಿಂದ ಪಡೆದದ್ದೇ ಹೆಚ್ಚು ಸಮಾಜಕ್ಕೆ ನೀಡಿದ್ದು ಕಡಿಮೆ. ಸಮಾಜದಲ್ಲಿ ಕಂಡು ಕಲಿಯಬೇಕು ಹಾಗೂ ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವುದು ನನ್ನ ಅನಿಸಿಕೆ. ಯಕ್ಷಗಾನ ಕೇಂದ್ರ ಹಾಗೂ ಗುರು ಶಿವರಾಮ ಕಾರಂತರಿಂದ ದೇಶದ ಕಲೆಗಳ ಪರಿಚಯವಾಯಿತು. ಆರ್ ಎಸ್ ಎಸ್ ಬಾಲ್ಯದಿಂದ ಕಲಿಸಿದ ಸಂಸ್ಕಾರ, ನೀತಿಪಾಠ ಹಲವು ರೀತಿಯಲ್ಲಿ ಅನುಕೂಲವಾಗಿದೆ ಎಂದರು.

ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಯಕ್ಷಗಾನ ಕರಾವಳಿಯ ಗಂಡುಕಲೆ. ಇದೀಗ ದೇಶವ್ಯಾಪಿ ಹಬ್ಬಿದೆ. ಸನಾತನ ಸಂಸ್ಕೃತಿ, ಆಚಾರ, ವಿಚಾರ ಯಕ್ಷಗಾನದ ಮೂಲಕ ತಿಳಿಸಲಾಗುತ್ತಿದೆ. ಈ ಕ್ಷೇತ್ರದಲ್ಲಿ ಸಂಜೀವ ಸುವರ್ಣರ ಸಾಧನೆ ಶ್ಲಾಘನೀಯ ಎಂದರು. ವೈದ್ಯ ಡಾ. ಭಾಸ್ಕರಾನಂದ ಕುಮಾರ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ್ ಶೆಟ್ಟಿ, ಸಂಜೀವ ಸುವರ್ಣರ ಪತ್ನಿ ವೇದಾವತಿ ಸುವರ್ಣ ಉಪಸ್ಥಿತರಿದ್ದರು. ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಸ್ವಾಗತಿಸಿದರು. ಪಶುವೈದ್ಯ ಡಾ. ಪ್ರಶಾಂತ್ ಶೆಟ್ಟಿ ನಿರೂಪಿಸಿ, ವಂದಿಸಿದರು

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!