ಜನ ಮನದ ನಾಡಿ ಮಿಡಿತ

Advertisement

ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ

ಮೂಡುಬಿದಿರೆ: ಆತ್ಮಹತ್ಯೆ ಎಂಬುದು ಒಂದು ಸೂಕ್ಷ್ಮ ವಿಚಾರ. ಅತೀವ ಮಾನಸಿಕ ಒತ್ತಡ ಅಥವಾ ಸಹಿಸಲಾಗದ ವೇದನೆ ಉಂಟಾದಾಗ ಆತ್ಮಹತ್ಯೆಯಂತಹ ಆಘಾತಕಾರಿ ವಿಚಾರವನ್ನು ಮನಸ್ಸು ಪ್ರಚೋದಿಸುವುದು. ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವು ವ್ಯಕ್ತಿಯೊಬ್ಬನಿಗೆ ಬಹುಮುಖ್ಯ. ದೈನಂದಿನ ಜೀವನದಲ್ಲಿ ನಿರಾಸಕ್ತಿ, ಬದುಕಿನ ಹತಾಶೆ, ಖಿನ್ನತೆಗಳಿಗೆ ಒಳಗಾಗದಂತೆ ಬೇರೆ ಬೇರೆ ಚಟುವಟಿಕೆ, ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು. ಮನಸ್ಸು ಸದಾ ಲವಲವಿಕೆಯಿಂದ ಇದ್ದರೆ ಯಾವುದೇ ವಿನಾಶಕಾರಿ ಯೋಚನೆ ಹತ್ತಿರ ಎಂದು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಅಕ್ಷತಾ ನಾಯಕ್ ಹೇಳಿದರು.

ಶ್ರೀ ಮಹಾವೀರ ಕಾಲೇಜಿನ ಐ.ಕ್ಯೂ.ಎ.ಸಿ., ಎನ್.ಸಿ.ಸಿ. ಎನ್.ಎಸ್.ಎಸ್ ಘಟಕಗಳು ಜಂಟಿಯಾಗಿ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆ ದಿನದ ಪ್ರಯುಕ್ತ ನಡೆದ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.
“ಆತ್ಮಹತ್ಯೆಯ ನಿರೂಪಣೆಯನ್ನು ಬದಲಿಸುವುದು”ಎಂಬ ಧ್ಯೇಯ ವಾಕ್ಯದೊಂದಿಗೆ ಈ ವರ್ಷ ಆತ್ಮಹತ್ಯೆ ತಡೆ ದಿನವನ್ನು ಆಚರಿಸಲಾಗುತ್ತಿದೆ.ಆತ್ಮಹತ್ಯೆಯ ಗಂಭೀರತೆಯನ್ನು ತಿಳಿಸಿ, ಭರವಸೆಯನ್ನು, ಬೆಂಬಲವನ್ನು ಪರಿಣಾಮಕಾರಿಯಾಗಿ ಪಸರಿಸಿದಾಗ ಸ್ವಾಸ್ಥ್ಯ ಸಮಾಜವನ್ನು ಮತ್ತು ಆತ್ಮಹತ್ಯೆ ಶೂನ್ಯತೆಯ ಸಮುದಾಯವನ್ನು ನಿರ್ಮಿಸಲು ಸಾಧ್ಯ.
ಆತ್ಮಹತ್ಯೆ ಒಂದು ಕಳಂಕ ಅಲ್ಲ ಆದರೆ ಅದು ಇಡೀ ಕುಟುಂಬವನ್ನು ಮಾತ್ರವಲ್ಲದೆ ಸಮಾಜವನ್ನೇ ಬಾಧಿಸುತ್ತದೆ. ಒಂದು ವೇಳೆ ಮಾನಸಿಕ ಒತ್ತಡಗಳಿಗೆ ಒಳಗಾದ ಸಂದರ್ಭ ಬಂದರೆ ಆಪ್ತಸಮಾಲೋಚಕರ, ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಅಂತಹವರಿಗೆ ಸಾಮಾಜಿಕ ಬೆಂಬಲವನ್ನು ನೀಡಬೇಕು. ಪ್ರಸ್ತುತ ದಿನಗಳಲ್ಲಿ ನವ ಮಾಧ್ಯಮಗಳ ಪ್ರಭಾವವೋ ಏನೋ ಯುವಕರೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಅವರು ವಿಷಾದಿಸಿದರು.
ಶ್ರೀ ಮಹಾವೀರ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಧಾಕೃಷ್ಣ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೋ. ಹರಿಶ್, ಎನ್.ಸಿ.ಸಿ ಅಧಿಕಾರಿ ವಿಜಯಲಕ್ಷ್ಮೀ ಎನ್.ಎಸ್.ಎಸ್. ಅಧಿಕಾರಿ ಶಾರದಾ ಉಪಸ್ಧಿತರಿದ್ದರು. ವಿದ್ಯಾರ್ಥಿನಿ ಶ್ರೇಷ್ಠಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!