ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳವೂರು ಅಟ್ಟೆಪದವು ಸರ್ವೇ ನಂಬ್ರ 35 ರಲ್ಲಿ ಇತ್ತೀಚೆಗೆ ನಡೆದ ಸರ್ಕಾರಿ ಜಾಗದ ವಿವಾದವು ಕಾಂಗ್ರೆಸಿನ ರಾಜಕೀಯ ಪ್ರೇರಿತವಾಗಿದ್ದು ಸತ್ಯ ವಿಚಾರ ಏನೆಂದರೆ , 2022 ರಲ್ಲಿ ಈಗಿನ ಸ್ವಯಂ ಘೋಷಿತ ಕಾಂಗ್ರೆಸ್ ಮುಖಂಡ ದಯಾನಂದ ಶೆಟ್ಟಿ ಪುಣ್ಕೆದಡಿ ಇವರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಚಲಕರಾಗಿದ್ದಾಗ ರೈತರಿಗೆ ಸಂತೆ ಮಾರುಕಟ್ಟೆ ಮಾಡಲು 10 ಸೆಂಟ್ಸ್ ಜಾಗ ಕಾದಿರಿಸಲು ಮುತ್ತೂರು ಪಂಚಾಯತ್ ಗೆ ಅರ್ಜಿಯೊಂದಿಗೆ ಮನವಿ ಮಾಡಿದ್ದಾರೆ .
ಅವರ ಮನವಿಯನ್ನು ಪುರಸ್ಕರಿಸಿ ಪಂಚಾಯತ್ ಆಡಳಿತ ಮಂಡಳಿಯು ಸಾಮಾನ್ಯ ಸಭೆಯಲ್ಲಿ ಕೊಳವೂರು ಗ್ರಾಮದ ರೈತರಿಗೆ ಸಂತೆ ( ಹಳ್ಳಿ ಸಂತೆ) ಮಾರುಕಟ್ಟೆಗೆ ಅವರು ಕೇಳಿರುವುದಕಿಂತಳು ಹೆಚ್ಚುವರಿಯಾಗಿ ಸಾಧಾರಣ 28 ಸೆಂಟ್ಸ್ ಜಾಗ ಕಾದಿರಿಸಲು ಒಂದು ವರ್ಷದ ಹಿಂದೆಯೇ ನಿರ್ಣಯ ಮಾಡಿ ಕಂದಾಯ ಇಲಾಖೆಗೆ ಪತ್ರ ಬರೆದಿದ್ದೇವೆ . ಅತೀ ಶೀಘ್ರದಲ್ಲಿ ಕೊಳವೂರು ಗ್ರಾಮದ ರೈತರ ಬೇಡಿಕೆಯಂತೆ ಮಾರುಕಟ್ಟೆಯನ್ನು ನಿರ್ಮಿಸುತ್ತೇವೆ . ಆದರೆ ಇದೀಗ ಅದೇ ಕಾಂಗ್ರೆಸ್ ಮುಖಂಡರು ರಾಜಕೀಯ ಅಸ್ತಿತ್ವಗೋಸ್ಕರ ಕೆಲವು ಸಾರ್ವಜನಿಕರನ್ನು ಎತ್ತಿಕಟ್ಟಿ ಅದೇ ಜಾಗದಲ್ಲಿ ಕಾಂಗ್ರೆಸ್ ನ ಹಿಂಬಾಲಕ ಕಾರ್ಯಕರ್ತರಿಗೆ ಸರಕಾರಿ ಭೂಮಿಯಲ್ಲಿ ಮನೆ ಇದ್ದರೂ ಪುನಃ ಮನೆ ಕಟ್ಟಲು ಮುಂದಾಗಿರುವುದು ಖೇದಕರ ಸಂಗತಿ . ಈ ರೀತಿ ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುವುದು ಗೊಂದಲ ಸೃಷ್ಟಿಸುವುದಾಗಲಿ ಸಮಂಜಸವಲ್ಲ .ಇಲ್ಲಿನ ಗ್ರಾಮಸ್ಥರಿಗೆ ಸ್ವಂತ ನಿವೇಶನ ಇಲ್ಲದೇ 20 ವರ್ಷಗಳಿಂದ ಪರಿತಪಿಸುತ್ತಿದ್ದಾಗ, ಮುತ್ತೂರು ಪಂಚಾಯತ್ ವತಿಯಿಂದ 2023 ರಲ್ಲಿ ಮುತ್ತೂರು ಹಾಗೂ ಕೊಳವೂರು ಗ್ರಾಮದಲ್ಲಿ 118 ಅರ್ಹ ಬಡವರಿಗೆ ನಿವೇಶನ ಒದಗಿಸಿ ಹಕ್ಕು ಪತ್ರ ವಿತರಿಸಿದ್ದೇವೆ . ಅದ್ಯಾಗಿಯೂ ನಿವೇಶನ ರಹಿತರ ಇನ್ನಷ್ಟು ಅರ್ಜಿಗಳು ಬಾಕಿ ಇದ್ದು ನಿವೇಶನಕ್ಕೆ ಸರಕಾರಿ ಜಾಗ ಗುರುತಿಸಲು ಕಂದಾಯ ಇಲಾಖೆಗೆ ಪತ್ರ ಬರೆದು ಕಾರ್ಯ ಪ್ರವೃತರಾಗಿದ್ದೇವೆ ನಿವೇಶನವು ಪಂಚಾಯತ್ ಗೆ ಹಸ್ತಾಂತರ ಆದ ಕೂಡಲೇ ಪರಿಶಿಷ್ಟ ಜಾತಿ ಅಥವಾ ಯಾವುದೇ ಜಾತಿಯವರಾಗಲಿ ಇಲ್ಲಿ ಜಾತಿ ನಮಗೆ ಮುಖ್ಯವಲ್ಲ ಅರ್ಹತೆ ಇರುವವರಿಗೆ ಆದ್ಯತೆ ಮೇರೆಗೆ ಲಭ್ಯ ಇರುವಷ್ಟು ನಿವೇಶನ ಹಂಚುವ ಇರಾದೆಯನ್ನು ಇಡೀ ನಮ್ಮ ಪಂಚಾಯತ್ ಆಡಳಿತವು ಹೊದಿರುತೇವೆ ಎಂದು ಮಾಧ್ಯಮಕ್ಕೆ ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ ಇವರು ತಿಳಿಸಿದ್ದಾರೆ .
ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕ್ ನಗರ ಅಪಘಾತದಿಂದ ಮಂಗಳವಾರ (ಜು.21) ಮುಂಜಾನೆ…
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದಾಸೋಟ್ಟು-ಕುಕ್ಕಾಜೆ ನಿವಾಸಿ ರಮೇಶ್ ಪೂಜಾರಿ ಅವರ ಮನೆಯ ಹಿಂಭಾಗಕ್ಕೆ ಹೊಂದಿಕೊಂಡಿದ್ದ ಬಚ್ಚಲು ಮನೆ ಹಾಗೂ…
ಪೊಲೀಸ್ ಇಲಾಖೆಯ ನಿಜವಾದ ಕರ್ತವ್ಯನಿಷ್ಠೆ, ಸಮಯಪ್ರಜ್ಞೆ ಮತ್ತು ಮಾನವೀಯತೆಯ ಅಪರೂಪದ ಉದಾಹರಣೆಯೊಂದು ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪದಲ್ಲಿ ನಡೆದ ಅಪಘಾತದ…
ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಬಿದರೆಯ ಮಿಜಾರು ಕೊಪ್ಪದಕುಮೇರಿಯಲ್ಲಿ ಸಂಜೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ…
ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ವಿಟ್ಲ…
ಶುಕ್ರವಾರ ಸಂಜೆ ಬೀಸಿದ ಬಿರುಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ ಮಾಣಿ ಬೊಳ್ಳುಕಲ್ಲಿನಿಂದ ಪೆರಾಜೆ ಶ್ರೀ ರಾಮಚಂದ್ರಾಪುರ ಮಠಕ್ಕೆ ಹೋಗುವ ಕಮಲ…