ಜನ ಮನದ ನಾಡಿ ಮಿಡಿತ

Advertisement

ಮುಲ್ಕಿ: ಏಳಿಂಜೆ ಶಾಂಭವಿ ನದಿಯಿಂದ ಅಕ್ರಮ ಮರಳು ಸಾಗಾಟ; ಟಿಪ್ಪರ್ ಪಲ್ಟಿ; ಸಿಕ್ಕಿ ಬಿದ್ದ ಆರೋಪಿಗಳು

ಮುಲ್ಕಿ :ಪೊಲೀಸ್‌ ಠಾಣಾ ವ್ಯಾಪ್ತಿಯ ಎಳಿಂಜೆ ಗ್ರಾಮದ ಪಟ್ಟೆ ಕ್ರಾಸ್ ಬಳಿ ಶಾಂಭವಿ ನದಿಗೆ ಹೋಗುವ ರಸ್ತೆಯಲ್ಲಿ ಮರಳು ತುಂಬಿದ ಲಾರಿಯೊಂದು ಮುಗುಚಿ ಬಿದ್ದಿರುವುದಾಗಿ ಮಾಹಿತಿ ತಿಳಿದು ಮುಲ್ಕಿ ಪೊಲೀಸರು ಪಟ್ಟೆ ಕ್ರಾಸ್ ಎಂಬಲ್ಲಿಗೆ ತೆರಳಿ ಪರಿಶೀಲಿಸಿದಾಗ ಅಕ್ರಮ ಮರಳು ಸಾಗಾಟ ಬಯಲಿಗೆ ಬಂದಿದ್ದು ಮರಳನ್ನು ಸಹಿತ ಕ್ರೇನ್ ಹಾಗೂ ಜೆಸಿಬಿಯನ್ನು ವಶಪಡಿಸಿಕೊಂಡು ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.

ಕಿನ್ನಿಗೋಳಿ ಸಮೀಪದ ಎಳಿಂಜೆ ಪಟ್ಟೆ ಕ್ರಾಸ್ ನಂದಿನಿನದಿ ಬದಿಗೆ ಹಾದು ಹೋಗುವ ಕಚ್ಚಾ ಮಣ್ಣು ರಸ್ತೆಯ ಇಳಿಜಾರು ಪ್ರದೇಶದಲ್ಲಿ ಸುಮಾರು 1 ಟಿಪ್ಪರ್ ಲಾರಿ ಲೋಡಿನಷ್ಟು ಸಾಮಾನ್ಯ ಮರಳು ಬಿದ್ದುಕೊಂಡಿದ್ದು ಸ್ಥಳದಲ್ಲಿದ್ದ ಕ್ರೇನ್ ನ ಅಪರೇಟರ್ ಜಬ್ಬರ್ ಬಳಿ ವಿಚಾರಿಸಿದಾಗ ಮರಳು ತುಂಬಿದ ಟಿಪ್ಪರ್ ಲಾರಿಯು ರಸ್ತೆ ಬದಿಗೆ ಬಿದ್ದಿರುವ ಬಗ್ಗೆ ಟಿಪ್ಪರ್ ಲಾರಿಯ ಮಾಲಕ ಸುಜಿತ್ ಎಂಬವರು ಕರೆ ಮಾಡಿದಂತೆ ತನ್ನ ಕ್ರೇನ್ ನಲ್ಲಿ ಟಿಪ್ಪರ್ ಲಾರಿಯನ್ನು ಮೇಲಕ್ಕೆತ್ತಲು ಕ್ರೇನ್ ಹಾಗೂ ಜೆಸಿಬಿ ಬಂದಿರುವುದಾಗಿ ತಿಳಿಸಿದ್ದಾನೆ.ಟಿಪ್ಪರ್ ಲಾರಿಯ ಪಕ್ಕದಲ್ಲಿ ನಿಂತುಕೊಂಡಿದ್ದ ಆರೋಪಿಗಳಾದ ಸುಜಿತ್ ಮತ್ತು ಅಜಿತ್ ಎಂಬವರನ್ನು ವಿಚಾರಿಸಿದಾಗ ತಾವು ಪಕ್ಕದ ನದಿಯಿಂದ ಸಾಮಾನ್ಯ ಮರಳನ್ನು ತೆಗೆದು ಅದನ್ನು ಮಾರಾಟದ ಬಗ್ಗೆ KA-21-A-0647 ನಂಬ್ರದ ಟಿಪ್ಪರ್ ನಲ್ಲಿ ಸಾಗಾಟ ಮಾಡುತ್ತಿದ್ದಾಗ ರಾತ್ರಿ ಸುಮಾರು 9ಗಂಟೆಗೆ ಮಳೆಯ ಕಾರಣ ಟಯರ್ ಕೆಸರಿನಲ್ಲಿ ಹೂತು ಟಿಪ್ಪರ್ ಲಾರಿಯು ಪಲ್ಟಿಯಾಗಿದ್ದಾಗಿ, ಲಾರಿಯಲ್ಲಿ ತುಂಬಿಸಿದ್ದ ಮರಳು ಚೆಲ್ಲಿರುವುದಾಗಿ ತಿಳಿಸಿದ್ದಾರೆ.

ಎಳಿಂಜೆ ಗ್ರಾಮದ ಪಟ್ಟೆ ಕ್ರಾಸ್ ಎಂಬಲ್ಲಿ ಶಾಂಭವಿ ನದಿಯಿಂದ ಯಾವುದೇ ಪರವಾನಿಗೆ ಇಲ್ಲದೇ ನದಿಯಿಂದ ಸಾಮಾನ್ಯ ಮರಳನ್ನು ಕಳವು ಮಾಡಿ ಅದನ್ನು ಟಿಪ್ಪರ್ (KA-21-A-0647) ಲಾರಿಯಲ್ಲಿ ಮಾರಾಟದ ಬಗ್ಗೆ ಸಾಗಾಟ ಮಾಡುತ್ತಿದ್ದ ಬಗ್ಗೆ ಆರೋಪಿಗಳ ವಿರುದ್ಧ ಮುಲ್ಕಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ನದಿ ತೀರದ ಪ್ರದೇಶಗಳಾದ ಬಳ್ಕುಂಜೆ,ಎಳಿಂಜೆ, ಮತ್ತಿತರ ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು ಗಣಿ ಭೂ ವಿಜ್ಞಾನ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!