ಪಿತೃಪಕ್ಷ ಪೂಜೆ ವೇಳೆ ಹಾಕಿದ ಸಾಂಬ್ರಾಣಿ ಹೊಗೆಗೆ ಹೆಜ್ಜೇನು ದಾಳಿ ಮಾಡಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ವೆಂಕಟಸ್ವಾಮಿ(60) ಮೃತರು. ಇಂದು(ಮಂಗಳವಾರ) ಕೋಲಾರ ತಾಲೂಕಿನ ಜಂಗಾಲಹಳ್ಳಿಯ ಅರಳಿ ಮರ ಬಳಿಯ ಸ್ಮಶಾನದಲ್ಲಿ ಕುಟುಂಬದ ಹಿರಿಯರ ಸಮಾಧಿಗೆ ಪೂಜೆ ಮಾಡುವಾಗ ಹಾಕಿದ ಸಾಂಬ್ರಾಣಿ ಹೊಗೆಗೆ ಹೆಜ್ಜೇನು ದಾಳಿ ಮಾಡಿದ್ದು, ಒಂದೇ ಕುಟುಂಬದ ಆರು ಜನರು ಗಾಯಗೊಂಡಿದ್ದಾರೆ. ಕೂಡಲೇ ಗಾಯಗೊಂಡ ಶಾಮಣ್ಣ, ಸುಂದರ್ ರಾಜ್, ಕಾರ್ತಿಕ್, ಶ್ರೀನಿವಾಸ್, ವೆಂಕಟಗಿರಿಯಪ್ಪಗೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




