ಜನ ಮನದ ನಾಡಿ ಮಿಡಿತ

Advertisement

ನನ್ನ ತಂದೆಯೇ ನನ್ನ ನೆಚ್ಚಿನ ಗುರು

ಪ್ರಥಮಥ  ಗುರುವಿಗೆ  ವಂದಿಸುತ್ತ ನನ್ನ ನೆಚ್ಚಿನ ಶಿಕ್ಷಕರ ಬಗ್ಗೆ ಒಂದೆರಡು ಅನಿಸಿಕೆಗಳನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. 

“ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು” ಎಂಬ  ನಾಣ್ನುಡಿಯಂತೆ  ನನಗೆ ಮನೆಯೇ ಮೊದಲ ಪಾಠಶಾಲೆಯಾಗಿದೆ .ಅಂತೆಯೇ ನನ್ನ ನೆಚ್ಚಿನ ಶಿಕ್ಷಕ ನನ್ನ ತಂದೆಯೇ ಆಗಿದ್ದಾರೆ. ಸಣ್ಣ ವಯಸ್ಸಿನಿಂದಲೂ ತಂದೆಯ ಶಿಸ್ತು ,ಸಂಯಮ, ಸಮಯ ಪಾಲನೆ ಮುಂತಾದ ಗುಣಗಳು ನನ್ನ ಮೇಲೆ ಪ್ರಭಾವ ಬೀರಿದೆ. ಅವರು ಶಾಲೆಯಲ್ಲಿ ನನ್ನ ಶಿಕ್ಷಕರು ಕೂಡ ಹೌದು. ನನ್ನ  ಶಾಲೆಯ ಹೆಸರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ,ನಾಗೂರು  ನನ್ನ ತಂದೆ ಇಲ್ಲಿ  ಕನ್ನಡ  ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನನ್ನಲ್ಲಿ ಸಣ್ಣ ವಯಸ್ಸಿನಿಂದಲೇ ಕನ್ನಡಾಭಿಮಾನವನ್ನು ಮೂಡಿಸಿದವರು ನನ್ನ ತಂದೆಯೇ ಆಗಿದ್ದಾರೆ.  ನಾನು ಮೂರು ವರ್ಷದವಳಿರುವಾಗಲೇ ಕನ್ನಡವನ್ನು  ಓದುವುದರ ಜೊತೆಗೆ ಸ್ಪಷ್ಟವಾಗಿ  ಬರೆಯುತ್ತಿದ್ದೆ. ಎಲ್ಲರೂ ಇದಕ್ಕೆ ಅಚ್ಚರಿಪಡುತ್ತಿದ್ದರು. ಇದಕ್ಕೆ ಕಾರಣ ನಾನು ದಿನವೂ ನನ್ನ ತಂದೆ ಮನೆಯಲ್ಲಿ.     ಪಾಠಕ್ಕೆ  ಅಣಿ ಯಾಗುವುದನ್ನು ನೋಡುತ್ತಿದ್ದೆ. ನನ್ನ ತಂದೆ ಉತ್ತಮ ಕಲಾವಿದರು ಹೌದು. ಅವರಿಂದ ನಾನು ನಾಟಕ ಅಭಿನಯ, ಕಾವ್ಯವಾಚನ ಮುಂತಾದ ಕಲೆಗಳನ್ನು ಕೂಡ ಕಲಿತಿದ್ದೇನೆ . “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ದಾಸವಾಣಿಯಂತೆ ಗುರುವಿಗೆ, ಗುರುವಿನ  ಸ್ಥಾನದಲ್ಲಿರುವರಿಗೆ ನಾವು ಗೌರವವನ್ನು ನೀಡಬೇಕು. ನನ್ನ ತಂದೆ ಇವೆಲ್ಲ ಗುಣಗಳನ್ನು ನನಗೆ ಕಲಿಸಿ ಕೊಟ್ಟಿದ್ದಾರೆ. ನನ್ನ ತಂದೆಯಾಗಿ, ಗುರು ಆಗಿ  ನನಗೆ ಸರಿ ದಾರಿಯಲ್ಲಿ ನಡೆಯಲು ಪ್ರೇರಣೆ ನೀಡಿದ್ದಾರೆ.

 

ಶ್ರೇಯಾ. ಆರ್ ನಾಯ್ಕ

10ನೇ ತರಗತಿ ಸಂದೀಪನ ಆಂಗ್ಲ ಮಾಧ್ಯಮ ಶಾಲೆ,ನಾಗೂರು
ಉಡುಪಿ ಜಿಲ್ಲೆ

 

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!