ಪ್ರಥಮಥ ಗುರುವಿಗೆ ವಂದಿಸುತ್ತ ನನ್ನ ನೆಚ್ಚಿನ ಶಿಕ್ಷಕರ ಬಗ್ಗೆ ಒಂದೆರಡು ಅನಿಸಿಕೆಗಳನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ.
“ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು” ಎಂಬ ನಾಣ್ನುಡಿಯಂತೆ ನನಗೆ ಮನೆಯೇ ಮೊದಲ ಪಾಠಶಾಲೆಯಾಗಿದೆ .ಅಂತೆಯೇ ನನ್ನ ನೆಚ್ಚಿನ ಶಿಕ್ಷಕ ನನ್ನ ತಂದೆಯೇ ಆಗಿದ್ದಾರೆ. ಸಣ್ಣ ವಯಸ್ಸಿನಿಂದಲೂ ತಂದೆಯ ಶಿಸ್ತು ,ಸಂಯಮ, ಸಮಯ ಪಾಲನೆ ಮುಂತಾದ ಗುಣಗಳು ನನ್ನ ಮೇಲೆ ಪ್ರಭಾವ ಬೀರಿದೆ. ಅವರು ಶಾಲೆಯಲ್ಲಿ ನನ್ನ ಶಿಕ್ಷಕರು ಕೂಡ ಹೌದು. ನನ್ನ ಶಾಲೆಯ ಹೆಸರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ,ನಾಗೂರು ನನ್ನ ತಂದೆ ಇಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನನ್ನಲ್ಲಿ ಸಣ್ಣ ವಯಸ್ಸಿನಿಂದಲೇ ಕನ್ನಡಾಭಿಮಾನವನ್ನು ಮೂಡಿಸಿದವರು ನನ್ನ ತಂದೆಯೇ ಆಗಿದ್ದಾರೆ. ನಾನು ಮೂರು ವರ್ಷದವಳಿರುವಾಗಲೇ ಕನ್ನಡವನ್ನು ಓದುವುದರ ಜೊತೆಗೆ ಸ್ಪಷ್ಟವಾಗಿ ಬರೆಯುತ್ತಿದ್ದೆ. ಎಲ್ಲರೂ ಇದಕ್ಕೆ ಅಚ್ಚರಿಪಡುತ್ತಿದ್ದರು. ಇದಕ್ಕೆ ಕಾರಣ ನಾನು ದಿನವೂ ನನ್ನ ತಂದೆ ಮನೆಯಲ್ಲಿ. ಪಾಠಕ್ಕೆ ಅಣಿ ಯಾಗುವುದನ್ನು ನೋಡುತ್ತಿದ್ದೆ. ನನ್ನ ತಂದೆ ಉತ್ತಮ ಕಲಾವಿದರು ಹೌದು. ಅವರಿಂದ ನಾನು ನಾಟಕ ಅಭಿನಯ, ಕಾವ್ಯವಾಚನ ಮುಂತಾದ ಕಲೆಗಳನ್ನು ಕೂಡ ಕಲಿತಿದ್ದೇನೆ . “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ದಾಸವಾಣಿಯಂತೆ ಗುರುವಿಗೆ, ಗುರುವಿನ ಸ್ಥಾನದಲ್ಲಿರುವರಿಗೆ ನಾವು ಗೌರವವನ್ನು ನೀಡಬೇಕು. ನನ್ನ ತಂದೆ ಇವೆಲ್ಲ ಗುಣಗಳನ್ನು ನನಗೆ ಕಲಿಸಿ ಕೊಟ್ಟಿದ್ದಾರೆ. ನನ್ನ ತಂದೆಯಾಗಿ, ಗುರು ಆಗಿ ನನಗೆ ಸರಿ ದಾರಿಯಲ್ಲಿ ನಡೆಯಲು ಪ್ರೇರಣೆ ನೀಡಿದ್ದಾರೆ.
ಶ್ರೇಯಾ. ಆರ್ ನಾಯ್ಕ
10ನೇ ತರಗತಿ ಸಂದೀಪನ ಆಂಗ್ಲ ಮಾಧ್ಯಮ ಶಾಲೆ,ನಾಗೂರು
ಉಡುಪಿ ಜಿಲ್ಲೆ
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಅವರು ಇಂದು ನಿಧನರಾಗಿದ್ದಾರೆ. ಕಳೆದ ರಾತ್ರಿ ಸಮಾರಂಭವೊಂದರಲ್ಲಿ…
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ…
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…
ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…
ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…