ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ (ಸ್ವಾಯತ್ತ) 2024-25 ನೇ ಸಾಲಿನ ಗ್ರಾಹಕ ಸರ್ಟಿಫಿಕೇಟ್ ಕೋರ್ಸ್ ನ ಗ್ರಾಹಕ ವೇದಿಕೆ ಉದ್ಘಾಟನೆ ನಡೆಯಿತು. ಕಾಲೇಜಿನ ಸ್ನಾತೋತ್ತರ ವಿಭಾಗದ ಸೆಮಿನಾರ್ ಹಾಲಿನಲ್ಲಿ ನಡೆದ ಈ ಕಾರ್ಯಕ್ರಮವನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶ ಹಾಗೂ ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆಯ ಮಾಜಿ ಅಧ್ಯಕ್ಷ ಪ್ರಕಾಶ್ ಕೆ ಅವರು ದೀಪ ಬೆಳಗಿ ಉದ್ಘಾಟಿಸಿದರು.
ತಮ್ಮ ಭಾಷಣದಲ್ಲಿ ಅವರು ಭಾರತದಲ್ಲಿರುವ ಗ್ರಾಹಕ ಹಕ್ಕು, ಕರ್ತವ್ಯ, ಪರಿಹಾರ ಪಡೆಯುವ ಮಾರ್ಗ ಇತ್ಯಾದಿ ಎಲ್ಲದರ ಬಗೆಗೂ ಉದಾಹರಣೆಯೊಂದಿಗೆ ಮಾಹಿತಿಯನ್ನು ನೀಡಿದರು. ಉತ್ತಮ ಪರಿಹಾರಕ್ಕಾಗಿ ದಾಖಲೆಗಳೆಲ್ಲವನ್ನು ಹೊಂದಿರುವುದು ಅಗತ್ಯವಾಗಿರುತ್ತದೆ ಎಂದು ಹಲವಾರು ಗ್ರಾಹಕ ಸಂಬಂಧಿ ನ್ಯಾಯ ದಾನದ ಸಂದರ್ಭದ ಉದಾಹರಣೆಗಳೊಂದಿಗೆ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದ.ಕ.ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ, ಪತ್ರಕರ್ತರು, ಲೇಖಕ ರಾಯಿ ರಾಜಕುಮಾರ ಮೂಡುಬಿದಿರೆ ರವರು ಮಾತನಾಡಿ “ಗ್ರಾಹಕನೇ ರಾಜ” ಹೇಗೆ ಎಂಬುದನ್ನು ಹಲವಾರು ಸಾಂದರ್ಭಿಕ ಮಾಹಿತಿಗಳೊಂದಿಗೆ ವಿವರಿಸಿದರು. ಅಲ್ಲದೆ ಗ್ರಾಹಕ ಜಾಗರೂಕನಾಗಿದ್ದರೆ ತನ್ನ ಜವಾಬ್ದಾರಿಯೊಂದಿಗೆ ಹಕ್ಕನ್ನು ಸಾಧಿಸಬಹುದಾಗಿದೆ. ನ್ಯಾಯ, ನಿಷ್ಠೆ, ಪ್ರಾಮಾಣಿಕವಾಗಿ ವ್ಯವಹರಿಸಿದರೆ ಎಲ್ಲೆಡೆ ಬೆಲೆ, ಗೌರವ, ಶ್ರೇಷ್ಠತೆ ದೊರೆಯುತ್ತದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಅಂತೋನಿ ಪ್ರಕಾಶ್ ಮೊಂತೆರೋ ಅವರು ಕಾರ್ಯಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಮಾರ್ಗದರ್ಶಕರಿಗಿಂತ ವಿದ್ಯಾರ್ಥಿಗಳು ಮುತುವರ್ಜಿ ವಹಿಸಿ ಕಾರ್ಯರೂಪಕ್ಕೆ ತಂದು ಕಾಲೇಜನ್ನು ಮಂಚೂಣಿಯಲ್ಲಿ ಕೊಂಡೊಯ್ಯಬೇಕೆಂದು ಕರೆಕೊಟ್ಟರು. ವೇದಿಕೆಯಲ್ಲಿ ಗ್ರಾಹಕ ಸಂಯೋಜಕ ಉಪನ್ಯಾಸಕರುಗಳಾದ ಪ್ರವೀಣ್ ಡಿ ಹಾಗೂ ಸ್ವಾತಿ ಶೆಟ್ಟಿ ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಿಯಾಂಕ ಸ್ವಾಗತಿಸಿದರು. ಇಮ್ರಾನ್ ತಾಜ್ ಕಾರ್ಯಕ್ರಮ ನಿರ್ವಹಿಸಿದರು. ಬಾಸಿಲ್, ತನ್ವೀರ್ ಪಿಂಟೋ, ಲಿಖಿತ ಅತಿಥಿ ಗಳ ಪರಿಚಯ ಮಾಡಿಕೊಟ್ಟರು. ವಿಶ್ಮಿತ್ ಧನ್ಯವಾದ ಸಲ್ಲಿಸಿದರು.
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಅವರು ಇಂದು ನಿಧನರಾಗಿದ್ದಾರೆ. ಕಳೆದ ರಾತ್ರಿ ಸಮಾರಂಭವೊಂದರಲ್ಲಿ…
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ…
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…
ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…
ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…